ತಂದೆ ಸಾವಿನ ಮಧ್ಯೆಯೂ ಪರೀಕ್ಷೆ ಬರೆದ ವಿದ್ಯಾರ್ಥಿನಿ
ಮಗಳ ಭವಿಷ್ಯದ ಹಿನ್ನೆಲೆ ತಂದೆಯ ಸಾವನ್ನು ರಹಸ್ಯವಾಗಿಟ್ಟ ಕುಟುಂಬ
ತಂದೆ ಸಾವಿನ ಮಧ್ಯೆಯೂ ಪರೀಕ್ಷೆ ಬರೆದ ವಿದ್ಯಾರ್ಥಿನಿ.
ಮಗಳ ಭವಿಷ್ಯದ ಹಿನ್ನೆಲೆ ತಂದೆಯ ಸಾವನ್ನು ರಹಸ್ಯವಾಗಿಟ್ಟ ಕುಟುಂಬ.
ಮೃತ ಶ್ರೀನಿವಾಸ್ ಕಾಂಬಳೆ (42) ವಿದ್ಯಾರ್ಥಿನಿ ತಂದೆ
ಪರೀಕ್ಷೆ ಮುಗಿಸಿ ಮನೆಗೆ ಬಂದಾಗ ಸಾವಿನ ಸುದ್ದಿ ಬಹಿರಂಗ
ತಂದೆ ಸಾವಿನ ಮಧ್ಯೆಯೂ ವಿದ್ಯಾರ್ಥಿನಿಯೋರ್ವಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಖಾಸಗಿ ಪ್ರೌಢಶಾಲೆಯ ವಿದ್ಯಾರ್ಥಿನಿ ವಿದ್ಯಾ ಕಾಂಬಳೆ ಅವರ ತಂದೆ ಶ್ರೀನಿವಾಸ್ ಕಾಂಬಳೆ (42) ಬುಧವಾರ ನಸುಕಿನ ಜಾವ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೇ ಮಗಳ ಪರೀಕ್ಷೆಗೆ ಅಡ್ಡಿಯಾಗದಂತೆ ನೋಡಿಕೊಂಡ ಕುಟುಂಬಸ್ಥರು,
ಮಗಳು ಚೆನ್ನಾಗಿ ಓದಬೇಕು ಎನ್ನುವುದು ತಂದೆಯ ಆಸೆಯಾಗಿತ್ತು. ತಂದೆಯ ಆಸೆಯಂತೆ, ಮಗಳ ಭವಿಷ್ಯಕ್ಕಾಗಿ ವಿಷಯವನ್ನು ಕುಟುಂಬಸ್ಥರು ಮುಚ್ಚಿಟ್ಟಿದ್ದರು. ಪರೀಕ್ಷೆ ಮುಗಿಸಿ ಮಗಳು ಮನೆಗೆ ಬಂದಾಗ ಸಾವಿನ ಸುದ್ದಿ ಬಹಿರಂಗಗೊಳಿಸಲಾಗಿದೆ.