Breaking News

ಕೇಂದ್ರ ಸಚಿವ ಅಮೀತ ಶಾ ಹಾಗೂ ಸಂಸದ ತೇಜಸ್ವಿ ಸೂರ್ಯ ಮೇಲೆ ಸಚಿವ ಎಂ.ಬಿ.ಪಾಟೀಲ ಅಸಮಾಧಾನ

Spread the love

ಕೇಂದ್ರ ಸಚಿವ ಅಮೀತ ಶಾ ಹಾಗೂ ಸಂಸದ ತೇಜಸ್ವಿ ಸೂರ್ಯ ಮೇಲೆ ಸಚಿವ ಎಂ.ಬಿ.ಪಾಟೀಲ ಅಸಮಾಧಾನ
ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯೆ ನೀಡಿ
ವಿಜಯಪುರದಲ್ಲಿ ಸಮಾವೇಶ ಜೋರಾಗಿ ಮಾಡಲಿ. ಹೊಸ ಪಕ್ಷ ಕಟ್ಟುವುದು ಒಳ್ಳೆಯದು. ರಾಜ್ಯಾದ್ಯಂತ ಅವರನ್ನು ಮೀರಿಸಲಿ ಎಂದು, ಹೊಸ ಪಕ್ಷ ಕಟ್ಟುವುದಕ್ಕೆ ಶುಭ ಹಾರೈಸಿದರು. ಯತ್ನಾಳ್ ಹೊಸ ಪಕ್ಷ ಕಟ್ಟುವುದರಿಂದ ಕಾಂಗ್ರೆಸ್ ಗೆ ಅನುಕೂಲ ಆಗುತ್ತೆ ಎನ್ನುವ ವಿಚಾರವಾಗಿ,
ಯತ್ನಾಳ್‌ಗೂ ನಮಗೂ ಏನು ಸಂಬಂಧ? 224 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಯತ್ನಾಳ್ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಶುಭ ಹಾರೈಸಿದರು. ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ-ಸಂಸದ ಓವೈಸಿ ಸುಪ್ರೀಂಕೋರ್ಟ್ ಗೆ ಮೊರೆ ವಿಚಾರವಾಗಿ ವಿಜಯಪುರದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯಿಸಿದ್ದು,
ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ವಿಜಯಪುರದ ಹೊನವಾಡ ಗ್ರಾಮದ್ದು ಪ್ರಸ್ತಾಪಿಸಿದ್ದಾರೆ. ತೇಜಸ್ವಿ ಸೂರ್ಯ ಕೂಡಾ ಪ್ರಸ್ತಾಪಿಸಿದ್ದಾರೆ. ಹೊನವಾಡ ಗ್ರಾಮದಲ್ಲಿ ಜಮೀನು ವಕ್ಫ್ ಗೆ ತೆಗೆದುಕೊಂಡು ಫೈವ್ ಸ್ಟಾರ್ ಹೋಟೆಲ್ ನಿರ್ಮಾಣ ಮಾಡ್ತಿದ್ರು ಎಂದಿದ್ದಾರೆ. ಹೊನವಾಡ ಗ್ರಾಮದಲ್ಲಿ ಫೈವ್ ಸ್ಟಾರ್ ಹೋಟೆಲ್ ನಿರ್ಮಿಸಲು ಸಾಧ್ಯನಾ? ವಿಜಯಪುರದಲ್ಲೇ ಫೈವ್ ಸ್ಟಾರ್ ಹೋಟೆಲ್ ಇಲ್ಲ, ಅಮಿತ್ ಶಾ ಅವರಿಗೆ ತಪ್ಪು ಗ್ರಹಿಕೆ ಆಗಿದೆ ಎಂದರು.
ಹೊನವಾಡ ಹೆಸರು ಪ್ರಸ್ತಾಪಕ್ಕೆ ಗರಂ ಆದ ಎಂ ಬಿ ಪಾಟೀಲ್, ಮಹಲ್ ಬಾಗಾಯತ್ ಇರೋದು ಹೊನವಾಡ ಅಂತ ತಪ್ಪಾಗಿ ನಮೂದಾಗಿದೆ. ಇದನ್ನ ಅಮಿತ್ ಶಾ ತಪ್ಪಾಗಿ ಹೇಳಿದ್ದಾರೆ. ಹೊನವಾಡದಲ್ಲಿ 5 ಸ್ಟಾರ್ ಹೊಟೇಲ್ ಮಾಡಲಿಕ್ಕೆ ಆಗತ್ತಾ? ಇದನ್ನ ನಾನು ಸ್ಪಷ್ಟಪಡಿಸಿದ್ದೇ‌ನೆ. 12 ಸಾವಿರ ಎಕರೆ ಜಿಲ್ಲೆಯಲ್ಲಿ ವಕ್ಫ್ ಇಂಡೀಕರಣ ಮಾಡಿದ್ದಾರೆ.
ಲ್ಯಾಂಡ್ ಗ್ರ್ಯಾಂಡ್ ಮೇಲೆ ಹಂಚಿದ್ದೇವೆ. ನಾನು ಬೆಂಗಳೂರಲ್ಲಿ, ವಿಜಯಪುರದಲ್ಲಿಯೂ ಹೇಳಿದ್ದೇನೆ. ಇಷ್ಟೊಂದು ತಪ್ಪು ಮಾಹಿತಿ ಕೊಡ್ತಾರೆ, ತೇಜಸ್ವಿ ಸೂರ್ಯ ಹಾಗೂ ಅಮಿತ್ ಶಾ ತಪ್ಪು ಮಾಹಿತಿ ಕೊಡ್ತಿದ್ದಾರೆ ಎಂದ ಅಸಮಧಾನ ವ್ಯಕ್ತಪಡಿಸಿದರು. ಕೆಪಿಸಿಸಿಗೆ ಅಧ್ಯಕ್ಷರನ್ನು ಮಾಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಯಾರನ್ನು ನಿರ್ಧಾರ ಮಾಡ್ತಾರೋ ಅವರು ಕೆಪಿಸಿಸಿ ಅಧ್ಯಕ್ಷರಾಗ್ತಾರೆ. ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಇರಬಹುದು,
ಯಾರಾದರೂ ಕೆಪಿಸಿಸಿ ಅಧ್ಯಕ್ಷರಾಗ್ಬೇಕು ಅಂತ ಬಯಸಿದ್ರೆ ಹೈಕಮಾಂಡ್ ಪರಿಗಣಿಸಿ, ಅಳೆದು ತೂಗಿ ನೋಡ್ತಾರೆ ಎಂದು ವಿಜಯಪುರದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ವಿನಯ್ ನನಗೆ ಪರಿಚಯ ಇಲ್ಲವೆಂದು ಶಾಸಕ ಪೊನ್ನಣ್ಣ ಹೇಳಿದ್ದಾರೆ. ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ಹಿಂದೆ ಹೀಗೆ ಕೆಜೆ ಜಾರ್ಜ್ ಡಿವೈಎಸ್ಪಿ ಆತ್ಮಹತ್ಯೆಯದ್ದು ಹೀಗೆ ಅಂದ್ರು. ಬಿಜೆಪಿದು ನಡೆದು ಬಂದ ದಾರಿ ಇದು ಎಂದ ಸಚಿವ ಎಂ ಬಿ ಪಾಟೀಲ್ ವಾಗ್ದಾಳಿ ನಡೆಸಿದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ