Breaking News

ಸಂಕೇಶ್ವರ ಪೋಲಿಸ್ ಇನ್ಸಪೇಕ್ಟರ ಅವಜಿ ಯವರ ಅಮಾನತ್ತಿಗೆ ಆಗ್ರಹ

Spread the love

ಹುಕ್ಕೇರಿ : ಸಂಕೇಶ್ವರ ಪೋಲಿಸ್ ಇನ್ಸಪೇಕ್ಟರ ಅವಜಿ ಯವರ ಅಮಾನತ್ತಿಗೆ ಆಗ್ರಹ
ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಪೋಲಿಸ್ ಇನ್ಸಪೇಕ್ಟರ ಶಿವಶಂಕರ ಅವಜಿ ಯವರನ್ನು ಅಮಾನತ್ತ ಮಾಡಬೇಕು ಎಂದು ಆಗ್ರಹಿಸಿ ವಿವಿಧ ದಲಿತ ಸಂಘಟನ೩ಗಳು ಮತ್ತು ಅಂಬೇಡ್ಕರ್ ಜನ ಜಾಗ್ರತೆ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಜರುಗಿಸಿ ಪೋಲಿಸ್ ಠಾಣೆ ಎದುರು ಧರಣಿ ಕುಳಿತರು.
ಮಾದ್ಯಮಗಳೊಂದಿಗೆ ಮಾತನಾಡಿದ ಮುಖಂಡ ಮಲ್ಲಿಕಾರ್ಜುನ ರಾಶಿಂಗೆ ಸಂಕೇಶ್ವರ ಪೋಲಿಸ್ ಇನ್ಸಪೇಕ್ಟರ ಶಿವಶಂಕರ ಅವುಜಿ ದಲಿತ ವಿರೋಧಿಯಾಗಿದ್ದು, ದಲಿತರು ತಮ್ಮ ನ್ಯಾಯಕ್ಕಾಗಿ ಠಾಣೆಗೆ ಹೋದರೆ ಅವರಿಗೆ ನ್ಯಾಯ ಸಿಗುತ್ತಿಲ್ಲಾ ಮುಖಂಡರು ಮದ್ಯಸ್ಥಿಕೆಗೆ ಹೋದರೆ ಅವರಿಗೆ ಮರ್ಯಾದೆ ಕೊಡದೆ ಅವಮಾನಿಸುತ್ತಾರೆ ಹಾಗೂ ಲಕ್ಷಾಂತರ ರೂಪಾಯಿ ಹಣದ ಬೇಡಿಕೆ ಇಡುತ್ತಾರೆ
ಕಾರಣ ಇಂತಹ ಅಧಿಕಾರಿಯನ್ನು ಕೂಡಲೆ ಅಮಾನತ್ತು ಮಾಡಬೇಕು ಇಲ್ಲವಾದರೆ ಬರುವ ದಿನಗಳಲ್ಲಿ ಸಂಕೇಶ್ವರ ಪಟ್ಟಣ ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಪ್ರತಿಭಟನೆ ಕಾರರು ಪುರಸಭೆ ಕಾರ್ಯಾಲಯದಿಂದ ಪೋಲಿಸ್ ಠಾಣೆ ವರಗೆ ಅವಜಿ ಹಠಾವೋ ಸಂಕೇಶ್ವರ ಬಚಾವೋ ಎಂಬ ಘೋಷನೆಗಳೊಂದಿಗೆ ಮೇರವಣೆಗೆ ಮೂಲಕ ತೇರಳಿ ರಸ್ತೆ ಮೇಲೆ ಕುಳಿತು ಧರಣಿ ನಡೆಸಿದರು.
ಇನ್ನೂಬ್ಬ ಮುಖಂಡ ಕೆಂಪಣ್ಣಾ ಶಿರಹಟ್ಟಿ ಮಾತನಾಡಿ ಸಂಕೇಶ್ವರ ಪೋಲಿಸ್ ಇನ್ಸಪೇಕ್ಟರ ರವರ ವರ್ತನೆ ಯಿಂದ ದಲಿತರಿಗೆ ಅನ್ಯಾಯ ವಾಗುತ್ತಿದ್ದು ಸರ್ಕಾರ ಕೂಡಲೆ ಅವರನ್ನು ವರ್ಗಾವಣೆ ಅಥವಾ ಅಮಾನತ್ತುಮಾಡಿ ಆದೇಶ ಹೋರಡಿಸ ಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ದೀಲಿಪ ಹೋಸಮನಿ, ಬಹುಸಾಹೇಬ ಪಾಂಡ್ರೆ, ರವಿ ಕಾಂಬಳೆ, ವೇಂಕಟೇಶ, ಲಕ್ಷಮಣ ಹೂಲಿ, ಚಿದು ಅವರಗೋಳ, ಮಂಜು ಪಡದಾರ, ಶ್ರೀನಿವಾಸ್ ಕಿರಣ ರಾಜು, ಆಕಾಶ ನಡವಿನಮನಿ ಮೋದಲಾದವದಲಿತ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ