Breaking News

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ವಿರೋಧ…

Spread the love

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ವಿರೋಧ…
ಜನರಿಗೆ ಹೊರೆಯಾಗದಂತೆ ಕೇವಲ ಶೇ. 3 ರಷ್ಟು ಹೆಚ್ಚಿಸುವಂತೆ ಶಾಸಕ-ಸದಸ್ಯರಿಂದ ಸಲಹೆ
ಬೆಳಗಾವಿ ಮಹಾನಗರದಲ್ಲಿ ಆಸ್ತಿ ತೆರಿಗೆಯನ್ನು ಅತಿಯಾಗಿ ಹೆಚ್ಚಳ ಮಾಡದಂತೆ ಮತ್ತು ಸರ್ಕಾರಕ್ಕೆ ಮನವರಿಕೆ ಮಾಡಿ ಜನರಿಗೆ ಹೊರೆಯಾಗದ ರೀತಿಯಲ್ಲಿ ಹೆಚ್ಚಿಸಬೇಕೆಂದು ಶಾಸಕ ಅಭಯ್ ಪಾಟೀಲ್ ಅವರು ಸಲಹೆ ನೀಡಿದರು.
ಇಂದು ಬೆಳಗಾವಿ ಮಹಾನಗರ ಪಾಲಿಕೆಯ ಕೌನ್ಸಿಲ್’ ಸಭೆಯಲ್ಲಿ, ಶಾಸಕ ಅಭಯ್ ಪಾಟೀಲ್ ಅವರು ಸರ್ಕಾರ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿದ್ದನ್ನು ಜಾರಿಗೆ ತರುವ ಮುನ್ನ ಮೊದಲೇ ಎಲ್ಲವು ದರ ಏರಿಕೆಯಾಗಿದ್ದು, ಜನರಿಗೆ ಆಗುತ್ತಿರುವ ಹೊರೆಯನ್ನು ಸರ್ಕಾರದ ಗಮನಕ್ಕೆ ತರಬೇಕು.
ಯಾವುದೇ ಸರ್ಕಾರವಿದ್ದರೂ ನಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಬೇಕು. ಸರ್ಕಾರ ಮಾಡಲೇಬೇಕು ಎಂದಾಗ ಚರ್ಚೆ ನಡೆಸಿ ಶೇ. 3 ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಿಸಬಹುದಾಗಿದೆ ಎಂದರು.
ಇನ್ನು ಕುರಿತು ಎಲ್ಲರ ಸಲಹೆಯನ್ನು ಪಡೆದು ಇನ್ನೊಮ್ಮೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಮಹಾಪೌರ ಮಂಗೇಶ್ ಪವಾರ್ ಅವರು ತಿಳಿಸಿದರು. ಮಹಾನಗರ ಪಾಲಿಕೆ ಆಯುಕ್ತರಾದ ಶುಭಾ ಬಿ. ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಕೇವಲ ಶೇ. 3 ರಷ್ಟು ಹೆಚ್ಚಳಕ್ಕಾಗಿ ಕ್ರಮವಹಿಸಲಾಗುವುದು ಎಂದು

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ