Breaking News

ಹಾಸನದಲ್ಲಿ ದೈತ್ಯ ಒಂಟಿಸಲಗ ಅನುಮಾನಾಸ್ಪದ ಸಾವು

Spread the love

ಹಾಸನ : ಅರಕಲಗೂಡು ತಾಲೂಕಿನ ನೆಲಬಳ್ಳಿ ಗ್ರಾಮದಲ್ಲಿ ದೈತ್ಯಾಕಾರದ ಒಂಟಿಸಲಗವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ (ಮಾ.15) ಬೆಳಕಿಗೆ ಬಂದಿದೆ.

ಸುಮಾರು 25 ವರ್ಷದ ಗಂಡಾನೆಯ ಕಳೇಬರ ರೈತರ ಜಮೀನಿನಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ವಿದ್ಯುತ್ ಶಾಕ್ ಅಥವಾ ಗುಂಡೇಟಿನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳೀಯ ರೈತರು ಬೆಳಗ್ಗೆ ತಮ್ಮ ಜಮೀನಿಗೆ ತೆರಳಿದಾಗ ಆನೆ ಕಳೇಬರ ಪತ್ತೆಯಾಗಿದೆ. ನಂತರ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಕ್ಷಣವೇ ಅರಣ್ಯ ಇಲಾಖೆಯ ಎಮರ್ಜೆನ್ಸಿ ರೆಸ್ಪಾನ್ಸ್ ತಂಡ (ಇಟಿಎಫ್) ದೌಡಾಯಿಸಿದ್ದು, ಪರಿಶೀಲನೆ ನಡೆಸಿದೆ.

ನಿನ್ನೆಯಷ್ಟೇ ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ 52 ವರ್ಷದ ಸುಶೀಲಮ್ಮ ಎಂಬುವರು ಮೃತಪಟ್ಟಿದ್ದರು. ಈ ಘಟನೆ ಬೆನ್ನಲ್ಲೇ ಇಂದು ಆನೆ ಮೃತಪಟ್ಟಿರುವುದು ಕಾಡಾನೆ-ಮಾನವ ಸಂಘರ್ಷದ ಮುಂದುವರಿದ ಭಾಗವಾ ಎಂಬ ಅನುಮಾನ ಅರಣ್ಯ ಇಲಾಖೆಯದ್ದಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡಾನೆ ಸಾವು ಹೇಗೆ ಸಂಭವಿಸಿದೆ ಎಂಬುದು ಶೀಘ್ರದಲ್ಲಿಯೇ ಬಹಿರಂಗವಾಗುವ ನಿರೀಕ್ಷೆಯಿದೆ ಎಂದಿದ್ದಾರೆ.


Spread the love

About Laxminews 24x7

Check Also

ಎಂ. ಪಿ ರೇಣುಕಾಚಾರ್ಯ ಅಂಡ್​ ಟೀಂ ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಂಗಮ ಸಮಾವೇಶ ನಡೆಸಲು ಪ್ಲಾನ್

Spread the loveದಾವಣಗೆರೆ : ರಾಜ್ಯ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಬಣ ಬಡಿದಾಟ ಹೆಚ್ಚಾಗುತ್ತಿದೆ.‌ ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ