ಮೈಸೂರು : ನೀರಿನಲ್ಲಿ ಮುಳುಗಿ ತಾತ ಮತ್ತು ಮೊಮ್ಮಕ್ಕಳು ಜಲಸಮಾಧಿಯಾಗಿರುವ ಘಟನೆ ತಿ. ನರಸೀಪುರ ಪಟ್ಟಣದಲ್ಲಿ ನಡೆದಿದೆ.
ತಿ. ನರಸೀಪುರ ಪಟ್ಟಣದ ನಿವಾಸಿಗಳಾದ ಚೌಡಯ್ಯ (70) ಭರತ್ (13) ಧನುಷ್ (10) ಮೃತರು. ಪಟ್ಟಣದ ಕಾವೇರಿ ನದಿ ಬಳಿಗೆ ತೆರಳಿದ್ದ ಇಬ್ಬರು ಮೊಮ್ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ.
ಮೊಮ್ಮಕ್ಕಳನ್ನು ಕಂಡ ತಾತ ಚೌಡಯ್ಯ ಮಕ್ಕಳ ರಕ್ಷಣೆಗೆ ನದಿಗೆ ಇಳಿದಿದ್ದಾರೆ. ಈ ವೇಳೆ ಇಬ್ಬರು ಮೊಮ್ಮಕ್ಕಳನ್ನು ರಕ್ಷಿಸಲಾಗದೆ ಚೌಡಯ್ಯನೂ ಮುಳುಗಿ ಸಾವನ್ನಪ್ಪಿದ್ದಾರೆ.ವಿಷಯ ತಿಳಿದ ನಂತರ ತಿ. ನರಸೀಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ,
ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತಿ. ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.