ವಿಜಯಪುರ : ನೀರು ಕುಡಿಯಲು ಬಾವಿಗೆ ಇಳಿದಿದ್ದ ಬಾಲಕ ಕಾಲು ಜಾರಿ ಮುಳುಗಿದ್ದು, ಬಾಲಕನ ರಕ್ಷಿಸಲು ಹೋದ ಆತನ ಅಜ್ಜಿಯೂ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ತೋಟದಲ್ಲಿ ನಡೆದಿದೆ.
ಅಸಾದ್ ಮುಲ್ಲಾ (12) ಮೃತ ಬಾಲಕ, ಸಲೀಮಾ ಮುಲ್ಲಾ (55) ಮೃತ ಅಜ್ಜಿ ಎಂಬುದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿರುವ ಹೊರ್ತಿ ಪೊಲೀಸರು ಬಾವಿಯೊಳಗಿದ್ದ ಇಬ್ಬರ ಶವವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯ ಬಗ್ಗೆ ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.