ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆಯಲ್ಲಿ ಹಲವು ಬಾರಿ ಭಾಷಾಂತರ ವಿವಾದ, ಕೆಪಿಎಸ್‌ಸಿ ಅವ್ಯವಸ್ಥೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷಗಳ ನಾಯಕರ ಚರ್ಚೆಗೆ ವಿಧಾನಸಭೆ ಕಲಾಪದಲ್ಲಿ ಇಂದು ಉತ್ತರಿಸಿದರು.
ಭಾಷಾಂತರ ಅವಾಂತರಕ್ಕೆ ಕಾರಣರಾದ ಭಾಷಾಂತರಕಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮವಹಿಸಲಾಗುವುದು. ಕೆಪಿಎಸ್‌ಸಿ ಭಾಷಾಂತರಕಾರರನ್ನು ಕಪ್ಪುಪಟ್ಟಿಗೆ ಸೇರಿಸುವುದು ನಿಶ್ಚಿತ ಎಂದ ಸಿಎಂ, ಭಾಷಾಂತರ ತಪ್ಪು ಮಾಡಿದವರ ವಿರುದ್ಧ ಶಿಸ್ತುಕ್ರಮ, ಕ್ರಿಮಿನಲ್ ಆ್ಯಕ್ಷನ್ ಕೈಗೊಳ್ಳುವುದಾಗಿ ಮಹತ್ವದ ಘೋಷಣೆ ಮಾಡಿದರು.
ಕೆಪಿಎಸ್‌ಸಿ ಹಗರಣದ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಉತ್ತರ ನೀಡಿದರು. ಈ ವೇಳೆ ಕೆಪಿಎಸ್ ಸಿ ಬದಲಾಗಿ ಎರಡು ಬಾರಿ ಕೆಪಿಸಿಸಿ ಎಂದು ಬಳಸಿದರು. ಇದಕ್ಕೆ ವಿಪಕ್ಷದ ಸದಸ್ಯರು ಸಿದ್ದರಾಮಯ್ಯ ಅವರ ಕಾಳೆದರು. ಇದಕ್ಕೆ, ಕೆಪಿಎಸ್ ಸಿ ಬಳಸುವುದು ಬಹಳ ಕಡಿಮೆ ಹಾಗೂ ಕೆಪಿಸಿಸಿ ಬಳಸುವುದು ಹೆಚ್ಚು. ಅದಕ್ಕಾಗಿ ಕೆಪಿಸಿಸಿ ಎಂದು ತಪ್ಪಾಗಿ ಬಳಸಿದೆ ಎಂದು ಸಿಎಂ ಸ್ಪಷ್ಟನೆ ಕೊಟ್ಟರು.
ಭಾಷಾಂತರ ಅವಾಂತರಕ್ಕೆ ಕಾರಣರಾದ ಭಾಷಾಂತರಕಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮವಹಿಸಲಾಗುವುದು. ಕೆಪಿಎಸ್‌ಸಿ ಭಾಷಾಂತರಕಾರರನ್ನು ಕಪ್ಪುಪಟ್ಟಿಗೆ ಸೇರಿಸುವುದು ನಿಶ್ಚಿತ ಎಂದ ಸಿಎಂ, ಭಾಷಾಂತರ ತಪ್ಪು ಮಾಡಿದವರ ವಿರುದ್ಧ ಶಿಸ್ತುಕ್ರಮ, ಕ್ರಿಮಿನಲ್ ಆ್ಯಕ್ಷನ್ ಕೈಗೊಳ್ಳುವುದಾಗಿ ಮಹತ್ವದ ಘೋಷಣೆ ಮಾಡಿದರು.
ಇನ್ನು ಮೊದಲು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಿ. ನಂತರ ಇಂಗ್ಲಿಷ್‌ಗೆ ಭಾಷಾಂತರ ಮಾಡಲಿ ಎಂದು ಕೆಪಿಎಸ್‌ಸಿ ಆಯೋಗಕ್ಕೆ ಸಿಎಂ ಸೂಚನೆ ನೀಡಿದರು. ಕೆಪಿಎಸ್‌ಸಿಯಲ್ಲಿ ಹಗರಣಗಳು ಆಗಿಲ್ಲ ಎಂದು ಹೇಳಲ್ಲ. ರೋಗಗ್ರಸ್ಥ ಸಂಸ್ಥೆ ಎಂಬ ಅಶೋಕ್ ಹೇಳಿದ್ದನ್ನು ನಾನು ಅಲ್ಲಗಳೆಯಲ್ಲ. ಕೆಪಿಎಸ್‌ಸಿ ಸದಸ್ಯರ ಸಂಖ್ಯೆ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ. ಎಲ್ಲರ ಕಾಲದಲ್ಲೂ ಕೆಪಿಎಸ್ ಸಿಯಲ್ಲಿ ಅವ್ಯವಹಾರ ನಡೆದಿದೆ ಎಂಬುವುದು ನಿಜ. ನಾವು ಕೆಪಿಎಸ್‌ಸಿಯನ್ನು ಸುಧಾರಣೆ ಮಾಡಲು ಬದ್ಧರಾಗಿದ್ದೇವೆ ಎಂದು ಸಿಎಂ ಹೇಳಿದರು.