Breaking News

ಅರೆಸ್ಟ್​​ ವಾರೆಂಟ್​ ಎಚ್ಚರಿಗೆ ಬೆನ್ನಲ್ಲೇ ಕೋರ್ಟ್​​ಗೆ ಓಡೋಡಿ ಬಂದ ಸಚಿವ ಮುನಿಯಪ್ಪ

Spread the love

ಬೆಂಗಳೂರು, ಮಾರ್ಚ್​ 12: 2013ರ ಹಲ್ಲೆ ಅಟ್ರಾಸಿಟಿ ಕೇಸ್​​ಗೆ ಸಂಬಂಧಿಸಿದಂತೆ ರಾಬರ್ಟ್‌ಸನ್‌ ಪೇಟೆ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿ‌ ಸಚಿವ ಕೆ.ಹೆಚ್.ಮುನಿಯಪ್ಪಗೆ (KH Muniyappa) ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು.

ಹಾಗಾಗಿ ಇಂದು ಕೋರ್ಟ್​ಗೆ ಹಾಜರಾಗಬೇಕಿತ್ತು. ಗೈರಾಗಿದ್ದಕ್ಕೆ ಇತ್ತ ಜಡ್ಜ್ ಸಂತೋಷ್ ಗಜಾನನ ಭಟ್ ಗರಂ ಆಗಿದ್ದರು. ಖುದ್ದು ಹಾಜರಾಗದಿದ್ದರೆ ಅರೆಸ್ಟ್​​ ವಾರೆಂಟ್ ಹೊರಡಿಸುವುದಾಗಿ ಎಚ್ಚರಿಗೆ ಬೆನ್ನಲ್ಲೇ ಕೋರ್ಟ್​​ಗೆ

ಸಚಿವ ಮುನಿಯಪ್ಪ ಓಡೋಡಿ ಬಂದಿದ್ದು, ಇದೀಗ ಜಾಮೀನು (Bail) ಮಂಜೂರು ಮಾಡಲಾಗಿದೆ.2013ರ ಹಲ್ಲೆ ಅಟ್ರಾಸಿಟಿ ಕೇಸ್​​ಗೆ ಸಂಬಂಧಿಸಿದಂತೆ ಸದ್ಯ ಜನಪ್ರತಿನಿಧಿಗಳ ಕೋರ್ಟ್‌ನಿಂದ ಕೆ.ಹೆಚ್‌.ಮುನಿಯಪ್ಪ ಹಾಗೂ ಲಕ್ಷ್ಮೀ ನಾರಾಯಣ್​ಗೆ ಜಾಮೀನು ಮಂಜೂರು ಮಾಡಲಾಗಿದೆ. ಕೋರ್ಟ್‌ಗೆ ಕೆ.ಹೆಚ್‌.ಮುನಿಯಪ್ಪ 50 ಸಾವಿರ ರೂ. ಬಾಂಡ್ ನೀಡಬೇಕಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ