ಯಾವುದೇ ಕಾರಣಕ್ಕೂ ನಗರಸೇವಕ ಶಂಕರ ಪಾಟೀಲಗೆ ಖಾಟಿಕ ಸಮಾಜದ ಜಾಗೆಯನ್ನು ನೀಡಲ್ಲ
ಸಮುದಾಯ ಭವನ ನಿರ್ಮಿಸದಂತೆ ಗಣಾಚಾರಿ ಗಲ್ಲಿಯ ರಹಿವಾಸಿಗಳಿಂದ ಬೆಳಗಾವಿ ಡಿಸಿಗೆ ಮನವಿ
ಬೆಳಗಾವಿ ನಗರದ ಗಣಾಚಾರಿ ಗಲ್ಲಿಯಲ್ಲಿ ಸಮುದಾಯಭವನ ನಿರ್ಮಿಸಲು ಮುಂದಾದ ನಗರಸೇವಕ ಶಂಕರ ಪಾಟೀಲ್ ಅವರ ಧೋರಣೆಯನ್ನು ಖಂಡಿಸಿ ಖಾಟಿಕ ಸಮಾಜದ ಬಕ್ರಿ ಮಂಡಯಿಯ ರಹಿವಾಸಿಗಳು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಗಣಾಚಾರಿ ಗಲ್ಲಿಯ ಬಕ್ರಿ ಮಂಡಯಿ, ಖಾಟಿಕ ಸಮಾಜದವರು ನಗರಸೇವಕ ಶಂಕರ ಪಾಟೀಲ್ ಅವರ ಧೋರಣೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಬೆಳಗಾವಿಯ ಗಣಾಚಾರಿ ಗಲ್ಲಿಯಲ್ಲಿ 100 ವರ್ಷ ಹಳೆಯದಾದ ಖಾಟಿಕ ಸಮಾಜದ ಬಕ್ರಿ ಮಂಡಯಿ ಇದೆ. ಹಲವಾರು ಶಾಸಕರು, ನಗರಸೇವಕರು ಬಕ್ರಿ ಮಂಡಯಿ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಆದರೇ ವಿದ್ಯಮಾನ ನಗರಸೇವಕ ಶಂಕರ ಪಾಟೀಲ್ ಬಕ್ರಿ ಮಂಡಯಿನಲ್ಲಿರುವ ಜಾಗೆಯನ್ನು ಸ್ವಾಧೀನಕ್ಕೆ ಪಡೆದು ಸಮುದಾಯಭವನವನ್ನು ನಿರ್ಮಿಸಲು ಮುಂದಾಗಿ ಸಮಾಜದ ಜನರಿಗೆ ತೊಂದರೆ ನೀಡುತ್ತಿದ್ದಾರೆ.
ಬೀರದೇವರ ದೇವಸ್ಥಾನದ ಫಲಕವನ್ನು ಹರಿದು ಹಾಕಿ, ಮಹಾನಗರ ಪಾಲಿಕೆಯಲ್ಲಿ ತಪ್ಪು ಕಲ್ಪನೆ ನೀಡುತ್ತಿದ್ದಾರೆ. 100 ವರ್ಷದ ಹಿಂದಿನ ದೇವಸ್ಥಾನದ ಪುಜಾರಿಯ ಮನೆಯನ್ನು ಬುಲ್ಡೋಜರ್’ನಿಂದ ನೆಲಸಮಗೊಳಿಸುವುದಾಗಿ ಹೇಳುತ್ತಿದ್ದಾರೆ. ಅಲ್ಲದೇ, ಮಹಿಳೆಯರನ್ನು ನಿಂದಿಸುತ್ತಿರುವುದಾಗಿ ಮಾಜಿ ನಗರಸೇವಕ ರಾಕೇಶ್ ಪಲಂಗೆ ಆರೋಪಿಸಿದರು.
ಬೆಳಗಾವಿಯ ಗಣಾಚಾರಿ ಗಲ್ಲಿಯಲ್ಲಿ ಸುಮಾರು ವರ್ಷಗಳಿಂದ ಹಿಂದೂ ಖಾಟಿಕ ಸಮಾಜಕ್ಕೆ ಸಂಬಂಧಿಸಿದ ಜಾಗೆಯಿದೆ. ಮಹಾನಗರ ಪಾಲಿಕೆ ಸ್ಥಾಪನೆಯ ಬಳಿಕ ಅದನ್ನ ಶೀಪ್ ಮಾರ್ಕೇಟ್ ಎಂದು ಸಿಟಿ ಸರ್ವೇ ಪಹಣಿಯಲ್ಲಿ ನೋಂದಾಯಿಸಲಾಗಿದೆ. ಮಹಾಪಾಲಿಕೆಯ ಜಾಗೆಯಾದರೂ ಕೂಡ ಅಲ್ಲಿ ಎಲ್ಲ ಸಮಾಜದ ಜನರು ವ್ಯಾಪಾರ ವಹಿವಾಟು ಮಾಡುತ್ತಾರೆ. ಆ ಜಾಗೆಯಲ್ಲಿ ನಗರಸೇವಕ ಶಂಕರ್ ಪಾಟೀಲ್ ಯಾವುದೇ ಕಾರಣಕ್ಕೂ ಸಮುದಾಯಭವನವನ್ನು ನಿರ್ಮಿಸಬಾರದು ಎಂದು ರಹಿವಾಸಿ ಸುಧೀರ್ ಘೋಡಕೆ ಆಗ್ರಹಿಸಿದರು.
ಈ ವೇಳೆ ಗಣಚಾರಿ ಗಲ್ಲಿ, ಖಾಟಿಕ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.