ಮಂಗಳೂರು, ಫೆಬ್ರವರಿ 28: ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಸೂತ್ರಧಾರರಾದ 69 ವರ್ಷದ ಮುದುಕ ಭಾಸ್ಕರ್ ಬೆಳ್ಚಪಾಡ ಹಾಗು ನಜೀರ್ ಎಂಬಾತನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಇದರಿಂದಾಗಿ ಪ್ರಕರಣ ಸಂಬಂಧ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗಿವೆ. 69 ವರ್ಷದ ಮುದುಕ ಭಾಸ್ಕರ್ ಬೆಳ್ಚಪಾಡ ಅಪರಾಧ ಹಿನ್ನೆಲೆ ಹೊಂದಿದ್ದು, ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಶಾಮೀಲಾಗಿದ್ದ. ಆದರೆ, ಹೆಚ್ಚಿನವು ವಿಫಲ ಯತ್ನಗಳಾಗಿದ್ದವು ಎಂಬುದು ಇದೀಗ ತಿಳಿದುಬಂದಿದೆ.
ಖತರ್ನಾಕ್ ಭಾಸ್ಕರ್ ಬೆಳ್ಚಪಾಡ ಒಬ್ಬ ನತದೃಷ್ಟ ಕಳ್ಳ. ಶ್ರೀಮಂತನಾಗುವ ಕನಸು ಹೊತ್ತು ವಿಫಲನಾದವ. ಶ್ರೀಮಂತನಾಗಬೇಕು ಎಂಬ ಕನಸು ಹೊತ್ತು ಈತ ಮಾಡಿದ ಬಹುತೇಕ ಎಲ್ಲ ದರೋಡೆಯೂ ವಿಫಲವಾಗಿದ್ದವು ಎಂಬುದು ಗೊತ್ತಾಗಿದೆ. ಕೋಟೆಕಾರು ಬ್ಯಾಂಕ್ ದರೋಡೆಯ ಕಿಂಗ್ಪಿನ್ ಕೂಡ ಈತನೇ ಆಗಿದ್ದ.
ಭಾಸ್ಕರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವಿಟ್ಲ ಮೂಲದವನು. 2000 ನೇ ಇಸವಿಯಲ್ಲಿ ಊರು ಬಿಟ್ಟು ಮುಂಬೈ ಸೇರಿದ್ದ. 25 ವರ್ಷದಿಂದ ಮುಂಬೈನಲ್ಲೇ ವಾಸವಿದ್ದ. ಮೊದಲಿಗೆ ಮುಂಬೈನ ಸಣ್ಣ ಸಣ್ಣ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಏಕಾಏಕಿ ಶ್ರೀಮಂತನಾಗಬೇಕು ಎಂಬ ಹಂಬಲದಿಂದ ಅಪರಾಧ ಜಗತ್ತಿಗೆ ಎಂಟ್ರಿಯಾಗಿದ್ದ.
Laxmi News 24×7