Breaking News

ಯತ್ನಾಳ್ ವಿರುದ್ಧ ಅಖಾಡಕ್ಕಿಳಿದ ವಿಜಯೇಂದ್ರ ಬಣ

Spread the love

ಬೆಂಗಳೂರು: ಬಿಜೆಪಿ ಒಡೆದು ಬಣಗಳಾಗಿರುವುದು ಗೊತ್ತಿರದ ವಿಷಯವೇನಲ್ಲ. ಬಿಜೆಪಿಯಲ್ಲಿ ಒಳ ಜಗಳ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಬಿಜೆಪಿಯ ಅತೃಪ್ತ ಶಾಸಕ ಬಸನಗೌಡ ಯತ್ನಾಳ್ ಬಿ.ವೈ. ವಿಜಯೇಂದ್ರ ವಿರುದ್ಧ ಲಿಂಗಾಯತ ದಾಳವನ್ನು ಉರುಳಿಸಿದ್ದು, ಈ ಮೂಲಕ ಇಬ್ಬರೂ ನಾಯಕರ ನಡುವೆ ಲಿಂಗಾಯತ ಸಮರ ಶುರುವಾಗಿದೆ. ಮೊನ್ನೆಯಷ್ಟೇ ಯತ್ನಾಳ್​ ಪ್ರಮುಖ ಲಿಂಗಾಯತ ನಾಯಕರ ಜೊತೆ ಸಭೆ ಮಾಡಿದ್ದನ್ನು ಸಹಿಸಿಕೊಳ್ಳಲಾಗದ ವಿಜಯೇಂದ್ರ ಬೆಂಬಲಿತ ಗುಂಪು ಇದೀಗ ಯತ್ನಾಳ್ ಅವರಿಗೆ ಟಕ್ಕರ್ ಕೊಡೋಕೆ ಮುಂದಾಗಿದೆ.

ತಮ್ಮ ಮಗನ ಪರವಾಗಿ ಯಡಿಯೂರಪ್ಪನವರೇ ಪರೋಕ್ಷವಾಗಿ ಅಖಾಡಕ್ಕೆ ಇಳಿದಿದ್ದು, ಸಾಲು ಸಾಲು ಸಭೆ ನಡೆಸೋ ಮೂಲಕ, ಯಡಿಯೂರಪ್ಪರ ಲಿಂಗಾಯತ ಶಕ್ತಿ ಏನೆಂದು​ ತೋರಿಸ್ತೀವಿ ಎಂದು ಯಡಿಯೂರಪ್ಪನವರ ಆಪ್ತ, ಮಾಜಿ ಸಚಿವ ಎಂಪಿ. ರೇಣುಕಾಚಾರ್ಯ ಕಹಳೆ ಮೊಳಗಿಸಿದ್ದಾರೆ.ದುಷ್ಟ ಶಕ್ತಿಯಿಂದ ಸಮಾಜ ಒಡೆಯೋ ಕೆಲಸ ಆಗುತ್ತಿದೆ ಎಂದು ಯತ್ನಾಳ್ ಬಣದ ವಿರುದ್ಧ ರೇಣುಕಾಚಾರ್ಯ ರೋಷಾವೇಶಗೊಂಡಿದ್ದಾರೆ. ಯಡಿಯೂರಪ್ಪನವರ ಋಣ ತೀರಿಸ್ಬೇಕು ಅಂದರೆ ಎಲ್ಲರೂ ಕೈ ಜೋಡಿಸ್ಬೇಕು ಎಂದು ರೇಣುಕಾಚಾರ್ಯ ಕರೆ ನೀಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ