ಸಾರ್ವಜನಿಕರನ್ನು ಆಕರ್ಷಿಸಿದ ನಿಯತ್ತಿನ ಪ್ರಾಣಿಗಳ ಪ್ರದರ್ಶನ
ನಿಯತ್ತಿಗೆ ಹೆಸರಾಗಿರುವ ಪ್ರಾಣಿ ಎಂದ್ರೆ ಶ್ವಾನ. ಶ್ವಾನ ಮನುಷ್ಯನ ಪ್ರೀತಿಯ ನಂಬಿಕಸ್ಥ ಪ್ರಾಣಿ. ಇತ್ತಿಚೆಗೆ ಶ್ವಾನಗಳ ಮೇಲಿನ ಪ್ರೀತಿ ಜನರಿಗೆ ಜಾಸ್ತಿಯಾಗತೊಡಗಿದೆ. ಅಲ್ಲದೇ ಶ್ವಾನ ಸಾಕುವದು ಪ್ರತಿಷ್ಠೆ ವಿಷಯವಾಗಿದೆ. ಶ್ವಾನಗಳ ಪ್ರದರ್ಶನ ನಡೆಯಿತು. ನೋಡುಗರ ಕಣ್ಮನ ಸೆಳೆಯಿತು.
ವಿಜಯಪುರ ಜಿಲ್ಲಾ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಚಾಲನೆ ನೀಡಿದರು. ಇದಕ್ಕೂ ಮುನ್ನ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಿಂಗ್ ಉದ್ಘಾಟಿಸಿದರು.
ಪ್ರತಿವರ್ಷ ಶ್ವಾನ ಪ್ರದರ್ಶನ ಹಮ್ಮಿ ಕೊಳ್ಳುತ್ತಿರುವ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ವರ್ಷದಿಂದ ವರ್ಷಕ್ಕೆ ಪ್ರದರ್ಶನದಲ್ಲಿ ಶ್ವಾನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಪ್ರದರ್ಶನ ಸಾರ್ಥಕವಾಗುತ್ತಿದೆ ಎಂದು ಹೇಳಿದರು. ಇನ್ನೂ ಶ್ವಾನ ಪ್ರದರ್ಶನದಲ್ಲಿ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ರಾಜ್ಯದ ನಾನಾ ಜಿಲ್ಲೆಗಳ ವಿವಿಧ 21 ತಳಿಯ 262 ಶ್ವಾನಗಳು ಭಾಗವಹಿಸಿದ್ದು, ಶ್ವಾನಪ್ರಿಯರ ಗಮನಸೆಳೆದವು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಶು ಪಾಲನಾ ಇಲಾಖೆ ಉಪನಿರ್ದೇಶಕ ಡಾ. ಅಶೋಕ ಗೊಣಸಗಿ, ಮುಖ್ಯಪಶು ವೈದ್ಯಾಧಿಕಾರಿ ಡಾ. ಬಸವರಾಜ ಕನಮಡಿ ಸೇರಿದಂತೆ ಇಲಾಖೆ ಪಶು ವೈದ್ಯಾಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.