Breaking News

ಮೀಥೇನ್ ಸಾಗಿಸುತ್ತಿದ್ದ ಲಾರಿ ಪಲ್ಟಿ

Spread the love

ರಾಯಚೂರು : ಮೀಥೇನ್ ಆಯಿಲ್‌ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ರಸ್ತೆಯಲ್ಲಿ ಸೋರಿಕೆಯಾಗಿರುವ ಘಟನೆ ತಾಲೂಕಿನ ರಾಯಚೂರು – ಮಂತ್ರಾಲಯ ಹೈವೇ ರಸ್ತೆಯಲ್ಲಿ ಬರುವ ಗುಜಳ್ಳಿ ಗ್ರಾಮದ ಬಳಿ ಜರುಗಿದೆ.

ಮುಂಬೈನಿಂದ ಕರ್ನೂಲ್ ಕಡೆ ಮೀಥೇನ್ ತುಂಬಿಕೊಂಡು ಲಾರಿ ತೆರಳುತ್ತಿತ್ತು. ಮಾರ್ಗ ಮದ್ಯ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಮೀಥೇನ್ ಆಯಿಲ್ ಸೋರಿಕೆಯಾಗಿದ್ದರಿಂದ ಸುತ್ತಮುತ್ತಲಿನ ಜನರಿಗೆ ಆತಂಕವನ್ನುಂಟು ಮಾಡಿತ್ತು. ಘಟನೆಯಿಂದ ಲಾರಿ ಚಾಲಕ ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ.methane-oil-lorry-overturned-in-raichur

ವಿಷಯ ತಿಳಿಯುತ್ತಿದಂತೆ ರಾಯಚೂರು ಸಹಾಯಕ ಆಯುಕ್ತ ಗಜಾನನ ಬಾಳೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಹಾಗೂ ಯರಗೇರಾ ಸಿಪಿಐ ನಿಂಗಪ್ಪ, ಯರಗೇರಾ ಪಿಎಸ್‌ಐ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಆರ್​ಟಿಪಿಎಸ್, ಸಿಐಎಸ್ಎಫ್​ ದಳದ ಸಿಬ್ಬಂದಿ ರಾಷ್ಟ್ರೀಯ ಹೆದ್ದಾರಿ ಬಂದ್​ ಮಾಡಿ ಕಾರ್ಯಾಚರಣೆ ನಡೆಸಿದರು.

ಮೀಥೇನ್ ಆಯಿಲ್ ಸೋರಿಕೆಯಾದ ಹಿನ್ನೆಲೆಯಲ್ಲಿ ಬ್ಲಾಸ್ಟ್ ಆಗುವ ಆತಂಕ ಎದುರಾಗಿತ್ತು. ಹೀಗಾಗಿ ನೀರಿನೊಂದಿಗೆ ಮಿಥೇನ್ ಆಯಿಲ್ ಮಿಶ್ರಣ ಮಾಡಿ ಅಗ್ನಿಶಾಮಕ ಸಿಬ್ಬಂದಿ ಟ್ಯಾಂಕರ್ ಖಾಲಿ ಮಾಡಿದ್ದಾರೆ. ಒಂದು ವೇಳೆ ಬ್ಲಾಸ್ಟ್ ಆಗಿದ್ದರೆ ಸುಮಾರು ಎರಡು ನೂರು ಮೀಟರ್​ವರೆಗೂ ಅಪಾಯ ಸಂಭವಿಸುತ್ತಿತ್ತು ಎಂದು ಎಚ್ಚರಿಸಿರುವ ಅಧಿಕಾರಿಗಳು, ಈ ಬಗ್ಗೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ