Breaking News

ಉತ್ತರ ಕನ್ನಡದಲ್ಲೂ ಜೋರಾದ ಮೈಕ್ರೋ ಫೈನಾನ್ಸ್ ಹಾವಳಿ

Spread the love

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿಯೂ ಮೈಕ್ರೋ ಫೈನಾನ್ಸ್ ದಂಧೆಕೋರರ ವ್ಯವಹಾರ ಜೋರಾಗಿದೆ. ಜಿಲ್ಲೆಯ ಹಳಿಯಾಳ, ಮುಂಡಗೋಡ ಹಾಗೂ ಯಲ್ಲಾಪುರದ ಕೆಲವೆಡೆ ಈ ಮೀಟರ್ ಬಡ್ಡಿ ದಂಧೆಗೆ ಸಿಲುಕಿರುವವರು ಶೇ.30ರಷ್ಟು ಬಡ್ಡಿಕಟ್ಟಿದರೂ ಅಸಲು ಚುಕ್ತಾ ಮಾಡಲು ಸಾಧ್ಯವಾಗದೇ ಕೆಲವರು ಊರನ್ನೇ ತೊರೆಯುವ ಹಂತಕ್ಕೆ ತಲುಪಿರುವುದು ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್​​​​ ಹಾವಳಿ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಜಾರಿಗೆ ಮುಂದಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 20, 30 ಸಾವಿರ ಸಾಲ ನೀಡಿ ಖಾಲಿ ಚೆಕ್​ಗೆ ಸಹಿ ಹಾಕಿಸಿಕೊಂಡು ಬಡ್ಡಿ, ಅಸಲು ಹಣ ಪಡೆದು ಕೊನೆಗೆ ಮತ್ತೆ ಹಣಕ್ಕೆ ಬೇಡಿಕೆ ಇಡುವ ಕೆಲವು ಫೈನಾನ್ಸ್​​ಗಳು ಕಾಲಿ ಚೆಕ್ ಬಳಸಿ ಸಾಲ ಪಡೆದವರಿಗೆ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುತ್ತಿವೆ.

ದಾಂಡೇಲಿಯ ಹಸೀನಾ ಶೇಖ್​​ ಎಂಬುವವರು ಫೈನಾನ್ಸ್​​ನಲ್ಲಿ ಸಾಲ ಪಡೆದು ಬಡ್ಡಿ ಅಸಲು ಕಟ್ಟಿದ್ದರೂ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಇದೀಗ ಈ ಮಹಿಳೆ ಗ್ರಾಮ ತೊರೆದಿದ್ದಾಳೆ. ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದು, ಮುಖ್ಯಮಂತ್ರಿಗಳಿಗೆ ತಮಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾಳೆ.

“ಹಳಿಯಾಳ, ದಾಂಡೇಲಿ, ಜೋಯಿಡಾ ಭಾಗದಲ್ಲಿ ಮೈಕ್ರೋ ಫೈನಾನ್ಸ್​​ ದಂಧೆ ಕರಾಳವಾಗಿ ನಡೆಯುತ್ತಿದೆ. ಎಂಒಬಿ ಲೀಸ್ಟ್​ನಲ್ಲಿರುವ ರೌಡಿಗಳೇ ಇದರ ಕಿಂಗ್​​ಫಿನ್​​​ಗಳಾಗಿದ್ದು, ಪುಡಿ ರೌಡಿಗಳನ್ನು ಸಾಲ, ಬಡ್ಡಿ ವಸೂಲಿಗೆ ಬಿಡುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ಮನೆಗೆ ನುಗ್ಗಿ ಸಾಲ ವಸೂಲಿಗೆ ಇಳಿಯುತಿದ್ದು ಇದೀಗ ಸಾಲ ಪಡೆದವರು ಮನೆ ಬಿಡುವಂತಾಗಿದೆ. ಒಂದು ಕಾಲದಲ್ಲಿ ತಿನ್ನಲು ಏನು ಇಲ್ಲದಂತೆ ಸುತ್ತಾಡುತ್ತಿದ್ದವರು ಇದೀಗ ಈ ವ್ಯವಹಾರದಲ್ಲಿ ತೊಡಗಿಕೊಂಡು ಬಡವರ ರಕ್ತ ಹೀರುತ್ತಿದ್ದಾರೆ. ಚೆಕ್​ ಬೌನ್ಸ್​ ಪ್ರಕರಣಗಳನ್ನು ಕೋರ್ಟ್​ನಲ್ಲಿ ಹಾಕಿ ಹಣ ವಸೂಲಾತಿ ಮಾಡುತ್ತಿದ್ದಾರೆ. ಅಲ್ಲದೇ 20-40 ಪರ್ಸೆಂಟ್​ವರೆಗೂ ಬಡ್ಡಿ ವಸೂಲಾತಿ ಮಾಡುತ್ತಿದ್ದಾರೆ. ಈ ಬಗ್ಗೆ ದೂರು ದಾಖಲಾದರೂ ಯಾವುದೇ ಕ್ರಮವಾಗಿಲ್ಲ. ಇನ್ನಾದರೂ ಈ ಬಗ್ಗೆ ಇಲಾಖೆಗಳು ಎಚ್ಚೆತ್ತಕೊಳ್ಳಬೇಕು. ಈ ಬಗ್ಗೆ ಸೂಕ್ತ ತನಿಖೆ ಕೂಡ ನಡೆಸಬೇಕು” ಎಂದು ಸ್ಥಳೀಯ ಯೋಗರಾಜ್ ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ