Breaking News

ಮಾರುಕಟ್ಟೆಗೆ ಬರುತ್ತಿದೆ ವಿಷಯುಕ್ತ ದ್ರಾಕ್ಷಿ!

Spread the love

ಯಾವುದೇ ಹಣ್ಣಾಗಾಲಿ, ತರಕಾರಿಯಾಗಲಿ ನಾವು ದೈರ್ಯವಾಗಿ ತಿನ್ನುವಂತಿಲ್ಲ, ನಾವು ಆರೋಗ್ಯಕ್ಕೆ ಒಳ್ಳೆಯದು ಎಂದು ತಿನ್ನುವುದರಿಂದ ಅನಾರೋಗ್ಯ ಬರಬಹುದು, ಲಿವರ್‌ಗೆ ಒಳ್ಳೆಯದು ಎಂದು ತಿಂದ್ರೆ ಲಿವರ್‌ ಫೈಲ್ಯೂರ್ ಆಗಬಹುದು. ಹೌದು ಅಂಥದ್ದೊಂದು ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

 

ಈ ದ್ರಾಕ್ಷಿ ಶರೀರಕ್ಕೆ ತುಂಬಾ ಒಳ್ಳೆಯದು ಎಂದು ನಾವು ದುಬಾರಿಯಾದರೂ ಪರ್ವಾಗಿಲ್ಲ, ಕೆಜಿಗೆ 100 ರುಪಾಯಿ, 150 ರುಪಾಯಿ ಅಷ್ಟೇ ಏಕೆ ಕೆಲವೊಂದು ದ್ರಾಕ್ಷಿಗೆ ಕೆಜಿ 400 ರುಪಾಯಿ ಇದ್ದರೂ ಆರೋಗ್ಯಕ್ಕೆ ಒಳ್ಳೆಯದು ಎಂದು ಕೊಂಡು ತರುತ್ತೇವೆ.

ಇದನ್ನು ನಾವು ತಿಂದರೆ, ನಮ್ಮ ಮಕ್ಕಳು ತಿಂದರೆ ಒಳ್ಳೆಯದು ಎಂಬುವುದು ನಮ್ಮ ಆಲೋಚನೆ. ಆದರೆ ಈ ದ್ರಾಕ್ಷಿಗಳಿಗೆ ಬೇಗನೆ ನುಸಿಗಳು ಕೂರದಿರಲಿ, ಕೊಳೆಯದಿರಲಿ ಎಂದು ವಿಷವನ್ನೂ ಹಾಕಿ ಮಾರುಕಟ್ಟೆಗೆ ಬಿಡುತ್ತಿರುವ ವೀಡಿಯೋ ಇದೀಗ ವೈರಲ್ ಆಗುತ್ತಿದೆ.

ದ್ರಾಕ್ಷಿ ತೋಟದಿಂದ ಕ್ವಿಂಟಲ್‌ಗಟ್ಟಲೆ ದ್ರಾಕ್ಷಿ ತಂದು ಅದನ್ನು ಒಂದು ಬುಟ್ಟಿಯಲ್ಲಿ ಕೆಮಿಕಲ್‌ ಕಲೆಸಿರುವ ನೀರಿನಲ್ಲಿ ಅದ್ದಿ ಅದ್ದಿ ಎತ್ತಿಡುತ್ತಾರೆ, ಈ ವೀಡಿಯೋ ನೋಡುವಾಗ ಖಂಡಿತ ಭಯವಾಗುತ್ತೆ, ಅಯ್ಯೋ ಇಂಥ ದ್ರಾಕ್ಷಿ ತಿನ್ನುವುದರಿಂದ ಪ್ರಯೋಜನವೇನು ಎಂದು ಅನಿಸದೆ ಇರಲ್ಲ. ಇದು ಬರೀ ದ್ರಾಕ್ಷಿಯ ಕತೆಯಲ್ಲ, ಬುತೇಕ ಹಣ್ಣುಗಳು ಮಾರುಕಟ್ಟೆಗೆ ಬರುವಾಗ ಅವುಗಳಲ್ಲಿ ಎಷ್ಟು ಗುಣಗಳಿರುತ್ತದೋ ಅಷ್ಟೇ ವಿಷವೂ ಸೇರಿರುತ್ತದೆ ಎಂಬುವುದಕ್ಕೆ ಇಂಥ ಹಲವಾರು ವೀಡಿಯೋಗಳು ಸಾಕ್ಷಿ.

 

 

ಇಂಥ ಕೃತ್ಯಕ್ಕೆ ಯಾರು ಹೊಣೆ?

ರೈತರು ಇಂಥ ಕೃತ್ಯ ಮಾಡುವುದಕ್ಕೆ ಕಾರಣ ಅವರ ಬೆಳೆ ಫ್ರೆಷ್‌ ಆಗಿರಲಿ, ಒಳ್ಳೆ ಬೆಲೆ ಸಿಗಲಿ ಬೆಟ್ಟ ದುರುದ್ದೇಶ, ವ್ಯಾಪಾರಿಗಳು, ಮಧ್ಯವರ್ತಿಗಳು ಈ ರೀತಿ ಮಾಡಲು ಕಾರಣ ನಾವು ಕೊಂಡ ಈ ಹಣ್ಣುಗಳು ಬೇಗನೆ ಮಾರಾಟವಾಗದಿದ್ದರೂ ತುಂಬಾ ದಿನ ಫ್ರೆಷ್‌ ಆಗಿರಬೇಕು ಎಂಬ ಆಲೋಚನೆ. ಹೀಗಾಗಿ ಹಣ್ಣು ಕೊಟ್ಟು ಖರೀದಿಸುವ ಗ್ರಾಹಕನಿಗೆ ಸಿಗುತ್ತಿರುವುದು ವಿಷ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ