Breaking News

ಬೆಳಗಾವಿ ಮಹಾನಗರದಲ್ಲಿ ಬಿಜೆಪಿಜಿಲ್ಲಾ ಕಾರ್ಯಾಲಯ ನಿರ್ಮಾಣಕ್ಕೆ30 ಗುಂಟು ಜಾಗ ಮಂಜೂರಾಗಿದೆ:ಸಂಜಯ ಪಾಟೀಲ

Spread the love

ಬಿಜೆಪಿ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ಕಾರ್ಯಾಲಯ ನಿರ್ಮಾಣಕ್ಕೆ ಬೆಳಗಾವಿ ಮಹಾನಗರದಲ್ಲಿ 30 ಗುಂಟು ಜಾಗ ಮಂಜೂರಾಗಿದೆ ಎಂದು ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಹಾಗೂ ಬೆಳಗಾವಿ ಮಹಾನಗರ ಜಿಲ್ಲೆಯಲ್ಲಿರುವ ಎಲ್ಲ ಕಾರ್ಯಕರ್ತರಿಗೂ ಬೆಳಗಾವಿಯಲ್ಲಿ ತಮ್ಮದೇ ಆದ ಒಂದು ಸ್ವಂತ ಬಿಜೆಪಿ ಪಕ್ಷದ ಕಾರ್ಯಾಲಯ ಇರಬೇಕೆಂಬುದು ಬಹುದಿನಗಳ ಆಸೆಯಾಗಿತ್ತು.  ಬೆಳಗಾವಿ ನಗರದ ಧರ್ಮನಾಥ ಭವನದ ಹಿಂದೆ ಇರುವ ಮಹಾನಗರ ಪಾಲಿಕೆಯ ಜಾಗದ 30 ಗುಂಟೆ ಭೂಮಿಯನ್ನು ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯ ಕಟ್ಟಡ ಕಟ್ಟಲು ನೀಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.

ಬಹಳ ಬೇಗನೆ ಅಲ್ಲಿ ಕಟ್ಟಡ ನಿರ್ಮಾಣ ಮಾಡುವ ಕೆಲಸ ಪ್ರಾರಂಭವಾಗುತ್ತದೆ  ಎಂದೂ ಅವರು ಹೇಳಿದ್ದಾರೆ.


Spread the love

About Laxminews 24x7

Check Also

ಆರೋಗ್ಯವಾಗಿದ್ದೇನೆ, ಸುಳ್ಳು ಸುದ್ದಿ ಹಬ್ಬಿಸಿದವರನ್ನು ಸುಮ್ನೆ ಬಿಡಲ್ಲ – ದೊಡ್ಡಣ್ಣ ರಿಯಾಕ್ಷನ್‌

Spread the loveಬೆಳ್ಳಂಬೆಳಗ್ಗೆ ಕಿಡಿಗೇಡಿಗಳು ಹಿರಿಯ ನಟ ದೊಡ್ಡಣ್ಣ ಅವರು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದೀಗ ಖುದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ