ಬೆಂಗಳೂರು: ಯುವತಿಯ ವಿಡಿಯೋ ಮಾಡಿದ ಆರೋಪ ಕೇಳಿ ಬಂದಿದ್ದು, ಮೆಟ್ರೋ ನಿಲ್ದಾಣದ ಒಳಗೆಯೇ ಯುವತಿಯರಿಗೆ ಸೇಫ್ಟಿ ಇಲ್ವಾ ಎಂಬ ಪ್ರಶ್ನೆ ಮೂಡಿದೆ.
ವೈಟ್‌ಫೀಲ್ಡ್‌ನ ಕಾಡುಗೋಡಿ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಯುವತಿಯ ವಿಡಿಯೋ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನ ಹಿಡಿದು ಆಕೆ ತರಾಟೆಗೆ ತೆಗೆದುಕೊಂಡಿದ್ದಳು. ಬಳಿಕ ಆತ ಮೊಬೈಲ್ ಕಿತ್ತುಕೊಂಡು ನಿಲ್ದಾಣದಿಂದ ಕಾಲ್ಕಿತ್ತಿದ್ದಾನೆ.
ಮೆಟ್ರೋದಲ್ಲಿ ಸಂಚಾರ ಮಾಡ್ತಿದ್ದ ವೇಳೆ ಯುವತಿಯ ಹಿಂದಿನಿಂದ ವಿಡಿಯೋ ಮಾಡಿದ್ದ ಕಾಮುಕ. ಕೂಡಲೇ ಮೊಬೈಲ್ ಕಸಿದುಕೊಂಡು ತರಾಟೆಗೆ ತೆಗೆದುಕೊಂಡು, ಬಿಎಂಆರ್‌ಸಿಎಲ್ ಸೆಕ್ಯೂರಿಟಿಗೆ ಮಾಹಿತಿ ನೀಡಿದ್ರು. ಕೊನೆಗೆ ಯುವತಿಯ ಬಳಿ ಕ್ಷಮೆ ಕೇಳಿ ಎಸ್ಕೇಪ್ ಆಗಿದ್ದಾನೆ. ಯುವತಿ ದೂರಿನನ್ವಯ ಸಿಸಿಟಿವಿ ಪರಿಶೀಲಿಸಿ ಘಟನೆ ಸತ್ಯಾಸತ್ಯೆತೆ ಪತ್ತೆಗೆ ಬಿಎಂಆರ್ಸಿಎಲ್ ಅಧಿಕಾರಿಗಳು ಮುಂದಾಗಿದ್ದಾರೆ.
ಘಟನೆ ಬಗ್ಗೆ ವಿಡಿಯೋ ಮೂಲಕ ಯುವತಿ ಬೇಸರ ವ್ಯಕ್ತಪಡಿಸಿದ್ದು, ಘಟನೆ ಸಂಬಂಧ ಮೆಟ್ರೋ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ನಿಜಕ್ಕೂ ನಡುಕ ಉಂಟಾಗ್ತಿದೆ. ಸಂಜೆ 4:30ರ ಸಮಯಕ್ಕೆ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ವಿಡಿಯೋ ಮಾಡುತ್ತಿದ್ದ. ನಾನು ಫುಲ್ ಕವರ್ ಆಗಿರುವ ಬಟ್ಟೆಯನ್ನ ಧರಿಸಿದ್ದೇನೆ. ವಿಡಿಯೋ ಚಿತ್ರೀಕರಿಸುತ್ತಿದ್ದಾಗಲೇ ರೆಡ್‌ಹ್ಯಾಂಡ್ ಆಗಿ ಅವನನ್ನ ಹಿಡಿದಿದ್ದೇನೆ. ಆತನ ಮೊಬೈಲ್‌ನನ್ನ ಕಿತತುಕೊಂಡೆ, ಬಳಿಕ ಆತ ಓಡಲು ಶುರು ಮಾಡಿದ. ಆ ಮೊಬೈಲ್‌ನನ್ನ ಸಕ್ಯೂರಿಟಿಗೆ ಕೊಟ್ಟೆ, ಮತ್ತೆ ಆ ವ್ಯಕ್ತಿ ಮೊಬೈಲ್ ಕಿತ್ತುಕೊಂಡು ಅಲ್ಲಿಂದ ಓಡಿ ಹೋಗಿದ್ದಾನೆ. ಆತನನ್ನ ಹುಡುಕಬೇಕು, ಈ ಬಗ್ಗೆ ನಾನು ಮೆಟ್ರೋ ಸ್ಟೇಷನ್‌ನಲ್ಲಿ ದೂರು ನೀಡಿದ್ದೇನೆ. ಪೊಲೀಸ್‌ಗೂ ದೂರು ನೀಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
Laxmi News 24×7