Breaking News
Home / ಜಿಲ್ಲೆ / ಬೆಳಗಾವಿ / ಮೃತ ಸತೀಶ್ ಪಾಟೀಲ್ ಮನೆಗೆ ಸತೀಶ್ ಜಾರಕಿಹೊಳಿ ಭೇಟಿ

ಮೃತ ಸತೀಶ್ ಪಾಟೀಲ್ ಮನೆಗೆ ಸತೀಶ್ ಜಾರಕಿಹೊಳಿ ಭೇಟಿ

Spread the love

ಬೆಳಗಾವಿ: ಗೌಂಡವಾಡ ಗ್ರಾಮದಲ್ಲಿ ಗುಂಪು ಘರ್ಷಣೆ ವೇಳೆ ಸತೀಶ್ ಪಾಟೀಲ್(Satish Patil)ಹತ್ಯೆ ಪ್ರಕರಣ ಹಿನ್ನೆಲೆ ಕೊಲೆಯಾದ ಸತೀಶ್ ಪಾಟೀಲ್ ಮನೆಗೆ ಸ್ಥಳೀಯ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ನೀಡಿ, ಸತೀಶ್ ಪತ್ನಿ, ತಾಯಿಗೆ ಸಾಂತ್ವನ ಹೇಳಿದರು.

ಕುಟುಂಬಸ್ಥರ ಭೇಟಿ ಬಳಿಕ ಗ್ರಾಮದ ಮಹಿಳೆಯರ ಅಹವಾಲು ಆಲಿಸಿದ ಸತೀಶ್, ಕೊಲೆ ಆರೋಪಿಗಳಿಗೆ ಶಿಕ್ಷೆ ನೀಡಿಸುವಂತೆ ಮನವಿ ಮಾಡಿದರು. ಗ್ರಾಮದಲ್ಲಿ ಕೊಲೆ ಆರೋಪಿಗಳ ದಬ್ಬಾಳಿಕೆ ಬಗ್ಗೆಯೂ ಮಹಿಳೆಯರು ಹೇಳಿದ್ದು, ಕೋರ್ಟ್ ಆದೇಶ ಬರುವವರೆಗೂ ದೇವಸ್ಥಾನ ಜಮೀನಿನಲ್ಲಿ ಏನು ಮಾಡದಂತೆ ತಡೆಯಲು ಮನವಿ ಮಾಡಿದರು.

ಮಹಿಳೆಯರಿಂದ ಮನವಿ ಆಲಿಸಿದ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಜತೆಗೆ ಚರ್ಚೆ ನಡೆಸಲಾಯಿತು. ಮೊದಲು ಕೊಲೆ ಆರೋಪಿಗಳನ್ನ ಬಂಧಿಸುವಂತೆ ಸತೀಶ್ ಜಾರಕಿಹೊಳಿ ಒತ್ತಾಯಿಸಿದರು. ಜೂನ್.18 ರಂದು ರಾತ್ರಿ ಸತೀಶ್ ಪಾಟೀಲ ‌ಹತ್ಯೆ ನಡೆದಿತ್ತು. ದೇವಸ್ಥಾನದ ಜಮೀನು ವಿವಾದ ವಿಚಾರಕ್ಕೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿತ್ತು. ಸತೀಶ್ ‌ಹತ್ಯೆ ಬಳಿಕ ಗ್ರಾಮದಲ್ಲಿ ‌ವಾಹನ, ಬಣವೆಗೆ ಉದ್ರಿಕ್ತರು ಬೆಂಕಿ ಇಟ್ಟಿದ್ದರು. ದೇವಸ್ಥಾನದ ಜಾಗ ಮರಳಿ ಸಿಗಬೇಕೆಂದು ಸತೀಶ್ ಪಾಟೀಲ್ ಹೋರಾಟ ಮಾಡುತ್ತಿದ್ದ.

ಪ್ರಕರಣ ಏನು:

ದೇವಸ್ಥಾನದ (temple)ಜಾಗದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ (Conflict)ಉಂಟಾಗಿದ್ದು, ಓರ್ವನ ಹತ್ಯೆ ಮಾಡಿರುವಂತಹ ಘಟನೆ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ನಡೆದಿದೆ. ಸತೀಶ್ ಪಾಟೀಲ್ ಗಲಾಟೆಯಲ್ಲಿ ಕೊಲೆಯಾದ ವ್ಯಕ್ತಿ. ದೇವಸ್ಥಾನ ಜಾಗ ವಿಚಾರದ ವ್ಯಾಜ್ಯ ಬಗೆ ಹರಿಸಲು ಸಭೆ ಸೇರಿದ್ದ ಎರಡು ಗುಂಪಿನ ಜನ. ಈ ವೇಳೆ ಗಲಾಟೆಯಾಗಿ ಕಲ್ಲುತೂರಾಟ ನಡೆಸಿ ಕೆಲ ದುಷ್ಕರ್ಮಿಗಳು ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ.

ಎರಡು ಕಾರು, ಒಂದು ವಾಟರ್ ಟ್ಯಾಂಕ್ ಲಾರಿ, ಒಂದು ಟ್ರಾಕ್ಟರ್‌ ಸುಟ್ಟು ಕರಕಲಾಗಿವೆ. ಇಷ್ಟಾದರೂ ಸುಮ್ಮನಾಗದೆ ಗೌಂಡವಾಡ ಗ್ರಾಮದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದೆ. ಮತ್ತೆ ನಾಲ್ಕು ವಾಹನಗಳಿಗೆ ಕೊಲೆಯಾದ ಸತೀಶ್ ಪಾಟೀಲ್ ಕಡೆಯವರು ಬೆಂಕಿ ಇಟ್ಟಿದ್ದಾರೆ.

ಗ್ರಾಮದಲ್ಲಿ ಎಂಟಕ್ಕೂ ಅಧಿಕ ವಾಹನಗಳು ಬೆಂಕಿಗಾಹುತಿಯಾಗಿದ್ದು, ಎರಡು ಹುಲ್ಲಿನ ಬಣವೆಗಳಿಗೂ ಬೆಂಕಿ ಹಚ್ಚಲಾಗಿದೆ. ಜೆಸಿಬಿಯಿದ ಹುಲ್ಲಿನ ಬಣವೆ ತೆರವುಗೊಳಿಸಲಾಗಿದ್ದು, ಐದು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲಾಗಿದೆ.

 

ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮಕ್ಕೆ ಪೊಲೀಸ್​ ಆಯುಕ್ತ ಡಾ.ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಪಾರ್ಕಿಂಗ್ ವಿಚಾರಕ್ಕೆ 2 ಗುಂಪುಗಳ ನಡುವೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಸತೀಶ್ ಪಾಟೀಲ್ ಎಂಬಾತ ಕೊಲೆಯಾಗಿದ್ದಾನೆ. ಬಳಿಕ ಕೆಲವರು ವಾಹನಗಳಿಗೆ ಬೆಂಕಿ ಹಚ್ಚಿ ಗಲಾಟೆ ಮಾಡಿದ್ದಾರೆ. ಕೊಲೆ ಕೇಸ್​​ಗೆ ಸಂಬಂಧಿಸಿದಂತೆ ಏಳು ಜನರನ್ನ ವಶಕ್ಕೆ ಪಡೆದಿದ್ದೇವೆ. ವಾಹನಗಳಿಗೆ ಬೆಂಕಿ ಹಚ್ಚಿ ಗಲಾಟೆ ಹಿನ್ನೆಲೆ 15 ಜನರು ವಶಕ್ಕೆ ಪಡೆಯಲಾಗಿದೆ. ಇಡೀ ಗ್ರಾಮವನ್ನ ಕಂಟ್ರೋಲ್​​ಗೆ ತೆಗೆದುಕೊಂಡು ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು.  ಗ್ರಾಮವನ್ನ ಪೊಲೀಸರು ಕಂಟ್ರೋಲ್‌ಗೆ ತೆಗೆದುಕೊಂಡಿದ್ದಾರೆ. ಗಲಾಟೆ ಸಂಬಂಧ 15ಕ್ಕೂ ಹೆಚ್ಚು ಯುವಕರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಬರ್ತಿದ್ದಂತೆ ಗ್ರಾಮದ ಕೆಲ ಯುವಕರು ಊರು ಬಿಟ್ಟಿದ್ದಾರೆ. ಕೊಲೆ ಮಾಡಿದ ಆರೋಪಿಗಳ ಮನೆ ಮೇಲೆಯೂ ಉದ್ರಿಕ್ತರು ಕಲ್ಲು ತೂರಾಟ ಮಾಡಿದ್ದು, ಕಾಕತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಲಾಗಿದೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ