Breaking News

ರೈಲು ದುರಂತ : ಸಾವಿನ ಸಂಖ್ಯೆ 9ಕ್ಕೆ ಏರಿಕೆ

Spread the love

ಗುವಾಹಾಟಿ,ಜ.14- ಪಶ್ಚಿಮ ಬಂಗಾಳದ ಜುಲ್ವೈಗುರಿ ಜಿಲ್ಲೆಯಲ್ಲಿ ಸಂಭವಿಸಿದ ಬಿಕನೇರ್-ಗುವಾಹಟಿ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಒಂಬತ್ತಕ್ಕೇರಿದೆ ಎಂದು ಈಶಾನ್ಯ ಗಡಿ ರೈಲ್ವೈ (ಎನ್‍ಎಫ್‍ಆರ್) ವಕ್ತಾರರು ಇಂದಿಲ್ಲಿ ತಿಳಿಸಿದ್ದಾರೆ. ಮೃತರಲ್ಲಿ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.

 

ನಿನ್ನೆ ಜಲ್ವೈಗುರಿ ಜಿಲ್ಲೆಯಲ್ಲಿ ಚಿಕನೇರ್-ಗುವಾಹಟಿ ಎಕ್ಸ್‍ಪ್ರೆಸ್ ರೈಲಿನ ಹನ್ನೆರಡು ಬೋಗಿಗಳು ಹಳಿ ತಪ್ಪಿದವು. ಅವುಗಳಲ್ಲಿ ಕೆಲವು ಬುಡಮೇಲಾಗಿ ಬಿದ್ದವು. ಘಟನೆ ಡೋಮೋಹನಿ ಸಮೀಪ ಜರುಗಿತ್ತು.

ಪ್ರಸ್ತುತ ಗಾಯಗೊಂಡವರ ಸಂಖ್ಯೆ 36 ಇದೆ. 23 ಪ್ರಯಾಣಿಕರು ಜಲ್ವೈಗುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರು ಮಂದಿಯನ್ನು ನಾರ್ತ್‍ಬೆಂಗಾಲ್ ಮೆಡಿಕಲ್ ಕಾಲೇಜ್ ಮತ್ತು ಏಳು ಜನರನ್ನು ಮೈನಗುರಿ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ