Breaking News
Home / ರಾಜಕೀಯ / ಲಂಚ ಪಡೆಯುವಾಗ ರೆಡ್​ಹ್ಯಾಂಡ್ ಆಗಿ ಸಿಕ್ಕಿ ಬಿದ್ದು ಜೈಲುಪಾಲಾಗಿದ್ದ ಪಿಎಸ್‌ಐಗೆ ಅದ್ಧೂರಿ ಸ್ವಾಗತ!

ಲಂಚ ಪಡೆಯುವಾಗ ರೆಡ್​ಹ್ಯಾಂಡ್ ಆಗಿ ಸಿಕ್ಕಿ ಬಿದ್ದು ಜೈಲುಪಾಲಾಗಿದ್ದ ಪಿಎಸ್‌ಐಗೆ ಅದ್ಧೂರಿ ಸ್ವಾಗತ!

Spread the love

ವಿಜಯನಗರ: ಇದು ಪೊಲೀಸ್​ ಇಲಾಖೆಗೆ ಮುಜುಗರ ಉಂಟು ಮಾಡುವ ಸುದ್ದಿ. ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು, ಜೈಲು ಸೇರಿ, ಬಿಡುಗಡೆಯಾದ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ಗೆ ಭರ್ಜರಿ ಸ್ವಾಗತ ಕೋರುವ ಮೂಲಕ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದಾರೆ.

 

ಈ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕೊಟ್ಟರು ಠಾಣೆಯ ಪಿಎಸ್​ಐ ನಾಗಪ್ಪ, 2.50 ಲಕ್ಷ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಬಳಿಕ ನಾಗಪ್ಪ ಜೈಲುಪಾಲಾಗಿದ್ದ.

ಇದೀಗ ನಾಗಪ್ಪ ಜೈಲಿನಿಂದ ಬಿಡುಗಡೆಯಾಗಿದ್ದು, ಏನೋ ಸಾಧಿಸಿ ಬಂದವರಂತೆ ಅದ್ಧೂರಿ ಸ್ವಾಗತ ಕೋರಿ ಹೇಸಿಗೆ ಕೆಲಸವನ್ನು ಸ್ಥಳೀಯರು ಮಾಡಿದ್ದಾರೆ. ಅಲ್ಲದೆ, ಕರೊನಾ ನಿಯಮಗಳನ್ನು ಗಾಳಿಗೆ ತೂರಿ ಅದ್ಧೂರಿ ಮೆರವಣಿಗೆ ಮಾಡಿದ್ದಾರೆ.

ಮೆರವಣಿಗೆ ಉದ್ದಕ್ಕೂ ಸಾವಿರಾರು ರೂಪಾಯಿಯ ಪಟಾಕಿ ಸಿಡಿಸಿ, ಭರ್ಜರಿ ಡ್ರಮ್ ಸೆಟ್​ಗಳನ್ನು ಬಾರಿಸಿ, ಜೈಕಾರ ಕೂಗಿ ಪಿಎಸ್​ಐ ನಾಗಪ್ಪನನ್ನು ಬರಮಾಡಿಕೊಂಡಿದ್ದಾರೆ. ಮದ್ಯರಾತ್ರಿಯವರೆಗೂ ಭಾರಿ ಮೆರವಣಿಗೆ ನಡೆದಿದ್ದು, ಸ್ಥಳೀಯರ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಲಂಚ ಪಡೆದು ಹೇಸಿಗೆ ಕೆಲಸ ಮಾಡಿದವರಿಗೆ ಈ ರೀತಿಯ ಅದ್ಧೂರಿ ಸ್ವಾಗತ ನೀಡುವುದರಿಂದ ಸಮಾಜಕ್ಕೆ ಹೋಗುವ ಸಂದೇಶವೇನು? ಇದರಿಂದ ಮಕ್ಕಳ ಮೇಲೆ ಬೀರುವ ಪರಿಣಾಮವೇನು? ಲಂಚ ತೆಗೆದುಕೊಂಡವರನ್ನು ಹೀರೋ ಎಂದು ಬಿಂಬಿಸುವುದು ಎಷ್ಟು ಸರಿ ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಇದು ನಾಚಿಗೇಡಿನ ಸಂಗತಿ ಎಂದು ಜರಿದಿದ್ದಾರೆ. 


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ