Breaking News
Home / ರಾಜ್ಯ / ಸರ್ಕಾರ 50 ಲಕ್ಷದಷ್ಟು ಕೊರೊನಾ ಲಸಿಕೆಯನ್ನು ಖರೀದಿಸಬಹುದು ಎಂದು ವರದಿಯಾಗಿದೆ…………..!

ಸರ್ಕಾರ 50 ಲಕ್ಷದಷ್ಟು ಕೊರೊನಾ ಲಸಿಕೆಯನ್ನು ಖರೀದಿಸಬಹುದು ಎಂದು ವರದಿಯಾಗಿದೆ…………..!

Spread the love

ನವದೆಹಲಿ: ಕೆಲವೇ ತಿಂಗಳಲ್ಲಿ ಕೋವಿಡ್‌19ಗೆ ಲಸಿಕೆ ಬರಬಹುದು ಎಂಬ ನಿರೀಕ್ಷೆಗಳ ನಡುವೆ ಕೇಂದ್ರ ಸರ್ಕಾರ 50 ಲಕ್ಷದಷ್ಟು ಕೊರೊನಾ ಲಸಿಕೆಯನ್ನು ಖರೀದಿಸಬಹುದು ಎಂದು ವರದಿಯಾಗಿದೆ.ಮೊದಲ ಹಂತದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಿಬ್ಬಂದಿಗೆ, ಸೈನಿಕರಿಗೆ ಲಸಿಕೆಯನ್ನ ನೀಡಲಾಗುತ್ತದೆ. ಹಿರಿಯ ನಾಗರಿಕರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಲಸಿಕೆಯನ್ನು ನೀಡುವ ನಿರೀಕ್ಷೆ ಇದೆ.

ನೀತಿ ಆಯೋಗ, ಆರೋಗ್ಯ ಸಚಿವಾಲಯ ಮತ್ತು ಔಷಧ ಕಂಪನಿಗಳ ಜೊತೆಗೆ ಸೋಮವಾರ ಸಭೆ ನಡೆದಿತ್ತು. ಕೊರೊನಾ ಲಸಿಕೆಯ ಉತ್ಪಾದನಾ ಸಾಮರ್ಥ್ಯ, ಲಸಿಕೆ ಬೆಲೆ ಮತ್ತು ಸರ್ಕಾರದಿಂದ ಏನೆಲ್ಲ ಸಹಕಾರ ನೀಡಬಹುದು ಎಂಬ ಬಗ್ಗೆ ಚರ್ಚೆ ನಡೆದಿದೆ.

ಈಗಾಗಲೇ ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ಆಸ್ಟ್ರಾಜೆನೆಕಾ ಲಸಿಕೆ ಭಾರತದಲ್ಲಿ ಮೂರನೇ ಹಂತದ ಪ್ರಯೋಗದಲ್ಲಿದ್ದು ಈ ವರ್ಷದ ಅಂತ್ಯದ ವೇಳೆಗೆ ಲಭ್ಯವಾಗಬಹುದು ಎನ್ನಲಾಗಿದೆ.

ಇತ್ತ ವಿಶ್ವದ ಮೊದಲ ಸ್ಪುಟ್ನಿಕ್ v ಹೆಸರಿನ ಲಸಿಕೆ ಕಂಡುಹಿಡಿದಿದ್ದಾಗಿ ಹೇಳಿಕೊಂಡಿರುವ ರಷ್ಯಾ ಅಂತಾರಾಷ್ಟ್ರೀಯ ಉತ್ಪಾದನೆಯನ್ನ ಆರಂಭಿಸಲಿದೆ. ಅದರಲ್ಲೂ ಭಾರತದಲ್ಲೂ ಲಸಿಕೆಯ ಉತ್ಪಾದನೆಗೆ ಉತ್ಸುಕವಾಗಿದೆ. ತನ್ನ ಗಾಮಲೆಯಾ ಸಂಸ್ಥೆ ಕಂಡುಹಿಂಡಿದಿರುವ ಲಸಿಕೆಯನ್ನು ಭಾರತ ಉತ್ಪಾದಿಸಬಹುದು ಎಂದು ರಷ್ಯಾ ಹೇಳಿದೆ.

ಸೌದಿ ಅರೇಬಿಯಾ, ಬ್ರೆಜಿಲ್, ಫಿಲಿಪೈನ್ಸ್ ಕೊರೋನಾ ಲಸಿಕೆ ಪ್ರಯೋಗದಲ್ಲಿ ಭಾಗಿ ಆಗಲಿವೆ ಎಂದು ರಷ್ಯಾ ಹೇಳಿದೆ. ರಷ್ಯಾದಲ್ಲಿ ಮುಂದಿನ ವಾರದಷ್ಟೊತ್ತಿಗೆ ಬರೋಬ್ಬರೀ 40 ಸಾವಿರ ಮಂದಿಗೆ ಮೂರನೇ ಹಂತದ ಲಸಿಕೆ ಪ್ರಯೋಗ ಮಾಡಲಾಗುತ್ತದೆ


Spread the love

About Laxminews 24x7

Check Also

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

Spread the loveಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ