Breaking News
Home / ರಾಜಕೀಯ / ನಳಿನ್ ಕುಮಾರ್ ಕಟೀಲ್ ಗಂಡೊ ಹೆಣ್ಣೊ ಎಂಬ ಬಗ್ಗೆಯೇ ಅನುಮಾನವಾಗುತ್ತದೆ : ಬೆಳೂರು ಗೋಪಾಲಕೃಷ್ಣ ಕಿಡಿ

ನಳಿನ್ ಕುಮಾರ್ ಕಟೀಲ್ ಗಂಡೊ ಹೆಣ್ಣೊ ಎಂಬ ಬಗ್ಗೆಯೇ ಅನುಮಾನವಾಗುತ್ತದೆ : ಬೆಳೂರು ಗೋಪಾಲಕೃಷ್ಣ ಕಿಡಿ

Spread the love

ಶಿವಮೊಗ್ಗ : ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಯಾವ ಅರ್ಹತೆಯೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಇಲ್ಲ ಎಂದು ಕಾಂಗ್ರೆಸ್ ವಕ್ತಾರ, ಮಾಜಿ ಶಾಸಕ ಬೆಳೂರು ಗೋಪಾಲಕೃಷ್ಣ ಹರಿಹಾಯ್ದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಕಟೀಲ್ ವಿರುದ್ಧ ಕಟುವಾಗಿ ಟೀಕಿಸಿದ ಅವರು, ಈ ಕಟೀಲ್ ಗಂಡೊ ಹೆಣ್ಣೊ ಎಂಬ ಬಗ್ಗೆಯೇ ಅನುಮಾನವಾಗುತ್ತದೆ. ಬಿಜೆಪಿಯಲ್ಲಿಯೇ ಕೊಳೆತು ನಾರುವಷ್ಟು ವಿಷಯಗಳಿದ್ದರೂ ಕೂಡ ಕಾಂಗ್ರೇಸ್ ನಾಯಕರ ಬಗ್ಗೆ ತಮ್ಮ ನಾಲಿಗೆಯನ್ನು ಹರಿ ಬಿಟ್ಟಿದ್ದಾರೆ. ರೇಪ್ ಮಾಡಿದವರು ಸದನದಲ್ಲಿ ಬ್ಲೂ ಫಿಲಂ ನೋಡಿದವರು, ಭ್ರಷ್ಟಾಚಾರ ಮಾಡಿದವರು ಬಿಜೆಪಿಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಅವರನ್ನು ಟೀಕಿಸಲಿ ಎಂದ ಅವರು, ಸಚಿವ ಕೆ.ಎಸ್ ಈಶ್ವರಪ್ಪನವರ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ಅವರು ಕೂಡಾ ಕಾಂಗ್ರೆಸ್ ನಾಯಕರ ಬಗ್ಗೆ ಮಿತಿಮೀರಿ ಬೈಯುತ್ತಿದ್ದಾರೆ. ಆದರೆ, ಅವರಿಗೆ ನೆನಪಿರಲಿ ಬೇಳೂರಿಗೆ ಬೈಯಲು ಆಗುವುದಿಲ್ಲವೆಂದೆನೂ ಅಲ್ಲ ಎಂದರು.

ರಸಗೊಬ್ಬರ ಕಾಣೆಯಾಗಿದೆ: ಮಲೆನಾಡು ¨ಭಾಗದಲ್ಲಿ ಅಡಿಕೆಗೆ ಎಲೆ ಚುಕ್ಕೆ ರೋಗ ಬಂದಿದೆ. ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಮತ್ತು ರೈತರಿಗೆ ಅಗತ್ಯವಾಗಿ ಬೇಕಾದ ರಸಗೊಬ್ಬರ ಕೂಡಾ ಇಲಾಖೆಯಲ್ಲೂ ಸಿಗುತ್ತಿಲ್ಲ, ಸರ್ಕಾರದಲ್ಲೂ ಕೂಡ ಇಲ್ಲ. ಆದರೆ, ಖಾಸಗಿಯಲ್ಲಿ ಮಾತ್ರ ಗೊಬ್ಬರ ಸಿಗುತ್ತದೆ. ಕಳ್ಳ ಸಂತೆಯಲ್ಲಿ ಗೊಬ್ಬರ ಮಾರಾಟ ಆಗುತ್ತಿದ್ದರೂ ಕೂಡ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಟೀಕಿಸಿದರು.

ಸರ್ಕಾರಿ ನೌಕರರ ರಾಜ್ಯಾಧ್ಯಕ್ಷರ ಬಗ್ಗೆ ತೀವ್ರ ತರಾಟೆ : ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರನ್ನು ತೀವ್ರ ತರಾಟೆಗೆ ತೆಗೆದು ಕೊಂಡ ಬೇಳೂರು ಈತ ಕೋಟಿ ಕೋಟಿ ಆಸ್ತಿ ಸಂಪಾದನೆ ಮಾಡಿದ್ದಾನೆ. ವರ್ಗಾವಣೆ ದಂಧೆಯಲ್ಲಿ ಈತನೇ ರೂವಾರಿಯಾಗಿದ್ದಾನೆ. ರಾಘವೇಂದ್ರ, ವಿಜಯೇಂದ್ರ, ಉಮೇಶ ಅವರ ಜೊತೆ ಸೇರಿಕೊಂಡು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಉಪ್ಪಾರ ಪೇಟೆಯ ಇನ್ಸ್ ಪೆಕ್ಟರ್ ಅಂತಹ ಚಿಕ್ಕ ಹುದ್ದೆಯ ವರ್ಗಾವಣೆಗೂ ಲಕ್ಷಾಂತರ ರೂ. ಪಡೆಯುತ್ತಾರೆ ಎಂದರೆ ಅದೆಷ್ಟು ಹಣ ಲೂಟಿ ಮಾಡಿದ್ದಾರೆ ಎಂದು ತಿಳಿದುಕೊಳ್ಳಬೇಕು. ಮೊದಲು ಈತನ ಮನೆ ಮೇಲೆ ಇಡಿ ರೈಡ್ ಆಗಬೇಕು. ಇದರ ಮೇಲೆ ಚುನಾವಣೆಗೆ ನಿಲ್ಲಲು ಹೋರಟಿದ್ದಾನೆ ಎಂಬ ಸುದ್ದಿಯೂ ಇದೆ. ಹಡಬೆ ದುಡ್ಡಿನಲ್ಲಿ ಇದೆಲ್ಲ ಮಾಡುತ್ತಿದ್ದಾನೆ ಎಂದು ಹರಿಹಾಯ್ದರು.

ಜಿಲ್ಲಾಧಿಕಾರಿಗಳಿಂದ ಗ್ರಾಮ ವಾಸ್ತವ್ಯದ ನಾಟಕ :

ಜಿಲ್ಲಾಧಿಕಾರಿಗಳು ಸರ್ಕಾರದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಗ್ರಾಮ ವಾಸ್ತವ್ಯವನ್ನು ಶಿವಮೊಗ್ಗದಿಂದ ಕೇವಲ 8 ಕಿ,ಮೀ ಇರುವ ಗಾಜನೂರಿನಲ್ಲಿ ಮಾಡಿದ್ದಾರೆ. ಇದೊಂದು ಕಾಟಾಚಾರದ ಕ್ರಿಯೆ ಆಗಿದೆ. ಮಲೆನಾಡಿನ ಗುಡ್ಡಗಾಡು ಪ್ರದೇಶದಲ್ಲಿ ಬಸ್ ಗಳಿಲ್ಲದ ರಸ್ತೆಗಳಿಲ್ಲದ, ವಿದ್ಯುತ್ ಇಲ್ಲದ, ಆಸ್ಪತ್ರೆ ಇಲ್ಲದ ಗ್ರಾಮಗಳಿಗೆ ಭೇಟಿಕೊಟ್ಟರೆ ವಾಸ್ತವ್ಯಕ್ಕೂ ಒಂದು ಅರ್ಥ ಬರುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಡಿ ಮಂಜುನಾಥ್, ಶಾಂತವೀರ ನಾಯ್ಕ್, ರಾಜ್ ಕುಮಾರ್, ಸೋಮಶೇಖರ್ ಇದ್ದರು.


Spread the love

About Laxminews 24x7

Check Also

ಪಬ್ಲಿಕ್ ನಲ್ಲೇ ರೂಂ ಗೆ ಬೇಗ ಬಾ ಎಂದು ಪತ್ನಿಗೆ ಆರ್ಡರ್ ಮಾಡಿದ ಕ್ರಿಕೆಟರ್ ಜಡೇಜಾ!

Spread the love ಸಿಎಸ್ ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ಸೋಷಿಯಲ್ ಮೀಡಿಯಾ ಕಾಮೆಂಟ್ ಒಂದು ಎಲ್ಲರ ಗಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ