Breaking News

ಸ್ಟಿಂಗ್ ಕೇಸ್‌ನಲ್ಲಿ ನಾಪತ್ತೆಯಾದವರು ಕುಮಾರಸ್ವಾಮಿ ಎಡಗೈ-ಬಲಗೈ ಬಂಟರು: ಪ್ರಿಯಾಂಕ್ ಖರ್ಗೆ ಆರೋಪ

Spread the love

ಬೆಂಗಳೂರು: ಸ್ಟಿಂಗ್ ಪ್ರಕರಣದಲ್ಲಿ ನಾಪತ್ತೆಯಾಗಿರುವವರು ಕುಮಾರಸ್ವಾಮಿ ಎಡಗೈ-ಬಲಗೈ ಬಂಟರು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸ್ಟಿಂಗ್ ಪ್ರಕರಣದಲ್ಲಿ ಕ್ರಿಮಿನಲ್ ಕಾನ್ಸ್ಪೆರಸಿ ಇದೆ. ಸತ್ಯ ಹೊರ ಬರಲಿ ಅಂತಾನೆ ಕೊಟ್ಟಿದ್ದಾರೆ. ನಾವು ತನಿಖೆ ಮಾಡ್ತಿದ್ದೇವೆ, ತನಿಖೆ ಹಂತದಲ್ಲಿದೆ. ನಮ್ಮ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ಇವತ್ತಲ್ಲ ನಾಳೆ ಸತ್ಯ ಗೊತ್ತಾಗುತ್ತದೆ. ಇದರಲ್ಲಿ ಗೊಂದಲ ಅನುಮಾನ ಪಡುವುದು ಇಲ್ಲ. ಸ್ವಲ್ಪ ಸಮಯ ಬೇಕು, ಎಲ್ಲ ಗೊತ್ತಾಗುತ್ತೆ. ಯರ‍್ಯಾರು ಮಾಡಿದ್ದಾರೆ, ಹಿಂದೆ ಯಾರಿದ್ದಾರೆ, ಎಲ್ಲಾಗಿದೆ ಸ್ಟಿಂಗ್, ಯಾರು ಮಾಡಿದ್ದು, ಯಾಕೆ ಮಾಡಿದ್ದು, ಇಷ್ಟು ವರ್ಷ ಆದ ಮೇಲೆ ಯಾರ ಕೈಗೆ ಸಿಕ್ತು, ಇದ್ದಕ್ಕಿದ್ದಂತೆ ಯಾಕೆ ಅಪ್ಲೋಡ್ ಆಯ್ತು, ಯಾರ ಕೈಗೆ ಸಿಕ್ತು? ಎಲ್ಲಾನು ಗೊತ್ತಾಗುತ್ತದೆ. ಅದರ ಮೂಲದಿಂದ ಹಿಡಿದು ಇಲ್ಲಿ ತನಕ ಏನೇನಾಗಿದೆ ಎಲ್ಲವನ್ನು ಬಯಲು ಮಾಡುತ್ತೇವೆ ಎಂದು ತಿಳಿಸಿದರು.

ಹಿಂದೆ ನಿಂತು ಸ್ಟಿಂಗ್ ಮಾಡಿಸಿದ್ದು ಯಾರು ಎಂಬ ತನಿಖೆಗೆ ಸಿದ್ದರಾಮಯ್ಯ ಒತ್ತಾಯ ವಿಚಾರವಾಗಿ ಮಾತನಾಡಿ, ಅದೆಲ್ಲ ಒಂದೇ ದಿನಕ್ಕೆ ಗೊತ್ತಾಗಲ್ಲ. 2015, 2023, 2025ರಲ್ಲಿ ಅಪ್ಲೋಡ್ ಅಂತಾರೆ. ಎಲ್ಲಾ ತನಿಖೆ ಮಾಡಬೇಕಲ್ಲ. ಗಡಿಬಿಡಿ ಮಾಡಿ ಪ್ರಚಾರಕ್ಕೋಸ್ಕರ ಮಾತಾಡಬೇಕು ಅನ್ನೋದು ತಪ್ಪಾಗುತ್ತೆ. ಸರ್ಕಾರದ ಘನತೆ, ಪಕ್ಷದ ಘನತೆ, ಅದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯನವರ ಗೌರವದ ಪ್ರಶ್ನೆ. ಇದಕ್ಕೆ ಧಕ್ಕೆ ತರುವ ವಿಚಾರದಲ್ಲಿ ನಮ್ಮದು ಯಾವುದೇ ರಾಜಿ ಇಲ್ಲ. ಇದರಲ್ಲಿ ಯಾರೇ ಇರಲಿ ನಾವು ತನಿಖೆಯನ್ನು ಪಾರದರ್ಶಕವಾಗಿ ಪ್ರಾಮಾಣಿಕವಾಗಿ ಮಾಡ್ತೀವಿ. ನಿಷ್ಪಕ್ಷಪಾತವಾದ ತನಿಖೆ ಆಗೆ ಆಗುತ್ತೆ. ಯಾವುದೇ ರಾಜಕೀಯ ಒತ್ತಡ ಇಲ್ಲದೆ ತನಿಖೆ ಆಗುತ್ತೆ. ಯರ‍್ಯಾರ ಹೆಸರು ಉಲ್ಲೇಖಿಸಿದ್ದಾರೆ, ಅವರನ್ನೆಲ್ಲ ತನಿಖೆಗೆ ಒಳಪಡಿಸಿದ್ದೇವೆ. ಸ್ಟೇಟ್ಮೆಂಟ್ ರೆಕಾರ್ಡ್ ಮಾಡಿದ್ದೇವೆ, ಇಂಟರಾಗೇಶನ್ ರೆಕಾರ್ಡ್ ಆಗಿದೆ. ಸಮಯ ಬಂದಾಗ ನಿಮ್ಮ ಮುಂದೆ ಇಡ್ತೀವಿ. ಇದರಲ್ಲಿ ತಪ್ಪಿಸಿಕೊಳ್ಳುವುದು ಇಲ್ಲ. ಚಾರ್ಜ್ಶೀಟ್ ಆಗಲೇಬೇಕು ಕೋರ್ಟ್ಗೆ ಸಲ್ಲಿಸಲೇಬೇಕು. ಆರ್‌ಟಿಐನಲ್ಲಿ ಬರಲೇಬೇಕು ಎಂದರು.

ವಿಕ್ಕಿ ಅನ್ನೋ ವ್ಯಕ್ತಿಯ ಹತ್ಯೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಆರೋಪ ಕುರಿತು ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ಅದ್ಯಾವುದೋ ಹಳೇ ಪ್ರಕರಣ ತಗೊಂಡು ಈಗ ಬಂದಿದ್ದಾರೆ. ಅದರ ಬಗ್ಗೆಯೂ ಕಂಪ್ಲೆಂಟ್ ಕೊಟ್ಟರೆ ತನಿಖೆ ಮಾಡ್ತೀವಿ. ಇಲ್ಲಿವರೆಗೆ ಕಂಪ್ಲೆಂಟ್ ಬಂದಿಲ್ಲ. ಕುಮಾರಸ್ವಾಮಿಯವರೇ ಕಂಪ್ಲೆಂಟ್ ಕೊಡಲಿ ತನಿಖೆ ಮಾಡಿಸ್ತೀವಿ. ನಿಮ್ಮ ವೈಯಕ್ತಿಕ ದ್ವೇಷಗಳನ್ನು ನಮ್ಮ ಮುಖಾಂತರ ತೀರಿಸಿಕೊಳ್ಳೋದು ಬೇಡ. ಸ್ಟಿಂಗ್ ವಿಚಾರದಲ್ಲಿ ಇಬ್ಬರು, ಮೂವರು ಅಬ್‌ಸ್ಕ್ಯಾಂಡ್ ಆಗಿದ್ದಾರಲ್ಲ ಯಾರು ಓಡಿಸಿರೋದು? ನೋಟಿಸ್ ಕೊಟ್ಟ ಮೇಲೆ ಎಲ್ಲಿ ಮಾಯ ಆಗಿದ್ದಾರೆ? ಯಾರ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾರೆ? ಅದು ದೊಡ್ಡವರಿಗೆ ಗೊತ್ತಿರುತ್ತಲ್ಲ, ಕಳಿಸೋಕೆ ಹೇಳಿ ಅವರನ್ನು ಅವಾಗ ಎಲ್ಲಾ ಸತ್ಯ ಗೊತ್ತಾಗುತ್ತೆ. ಅಬ್‌ಸ್ಕ್ಯಾಂಡ್ ಆಗಿರೋರು ಯಾರು ಅಂತ ಕುಮಾರಸ್ವಾಮಿ ಅವರನ್ನು ಕೇಳಿ, ಹೇಳ್ತಾರೆ. ಅವರದೇ ಎಡಗೈ ಬಲಗೈ ಅವರು ಎಂದು ಆರೋಪಿಸಿದರು.

ವಿಜಯಲಕ್ಷ್ಮಿ ಹಾಗೂ ಧನ್ವೀರ್ ಪ್ರಕರಣ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಈಗ ಯಾರೋ ನನ್ನ ಗಮನಕ್ಕೆ ತಂದರು, ತಿಳಿದು ಮಾತನಾಡುತ್ತೇನೆ ಎಂದರು.


Spread the love

About Laxminews 24x7

Check Also

ಬೆಳಗಾವಿ | ಫುಟ್‌ಪಾತ್‌ ತೆರವಿಗೆ ಹೋಗಿದ್ದ ಪಾಲಿಕೆ ಎಂಜಿನಿಯರ್‌ ಮೇಲೆ ಹಲ್ಲೆ – ಸ್ಥಳದಲ್ಲಿ ಬಿಗುವಿನ ವಾತಾವರಣ

Spread the loveಬೆಳಗಾವಿ: ಫುಟ್‌ಪಾತ್‌  ತೆರವಿಗೆ ಹೋಗಿದ್ದ ಪಾಲಿಕೆ ಎಂಜಿನಿಯರ್‌  ಮೇಲೆ 40ಕ್ಕೂ ಹೆಚ್ಚು ಜನರ ಗುಂಪು ಹಲ್ಲೆ ನಡೆಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ