Breaking News

ಪಶುವೈದ್ಯರ ನೇಮಕಾತಿ ಹಗರಣ – KPSC ಪರೀಕ್ಷೆ ಬರೆಯಲು ಬೆಂಗಳೂರಿಗೆ ಹೋಗಿದ್ದ ಬಸವರಾಜ್ ಕನ್ನಾಳೆ ಇಂದು ಕೋಟ್ಯಾಧಿಪತಿ

Spread the love

ಬೀದರ್: ಪಶುವೈದ್ಯರ ನೇಮಕಾತಿ ಹಗರಣ  ಪ್ರಕರಣದಲ್ಲಿ ಸಿಐಡಿಯಿಂದ ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಆರೋಪಿ ಮಧ್ಯವರ್ತಿ ಬಸವರಾಜ್ ಕನ್ನಾಳೆ ಬಂಧನ ಮಾಡಲಾಗಿದೆ. ಈಗ ಭಾಲ್ಕಿ ಮೂಲದ ಕೆಪಿಎಸ್‌ಸಿ ಮಧ್ಯವರ್ತಿ ಬಸವರಾಜ್ ಕನ್ನಾಳೆಯ ಕರ್ಮಕಾಂಡದ ಸ್ಟೋರಿ ಬಗೆದಷ್ಟು ಬಯಲಾಗುತ್ತಿದ್ದು, ಭಾಲ್ಕಿ ಟು ದೆಹಲಿವರೆಗೆ ಬಸವರಾಜ್ ಕನ್ನಾಳೆ ಜರ್ನಿಯೇ ರೋಚಕವಾಗಿದೆ.

ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಬೆಂಗಳೂರಿಗೆ ಹೋಗಿದ್ದ ಬಸವರಾಜ್ ಕನ್ನಾಳೆ ಇಂದು ಕೋಟ್ಯಾಧಿಪತಿಯಾಗಿದ್ದು, ಕೆಪಿಎಸ್‌ಸಿ ಪಾಸಾಗದೆ ಬಿಜೆಪಿ, ಕಾಂಗ್ರೆಸ್ ಲೀಡರ್ ಜೊತೆ ಉತ್ತಮ ಒಡನಾಟ ಬೆಳಾಸಿಕೊಂಡು ಮಧ್ಯವರ್ತಿ ಕೆಲಸ ಪ್ರಾರಂಭ ಮಾಡಿದ್ದಾನೆ. ರಾಜಕೀಯ ನಾಯಕರ ಜೊತೆ ಇರುವ ಫೋಟೋ ತೋರಿಸಿ ಬಸವರಾಜ್ ಕನ್ನಾಳೆ ಪರೀಕ್ಷಾರ್ಥಿಗಳನ್ನು ಖೆಡ್ಡಾಗೆ ಕೆಡುವುತ್ತಿದ್ದ ಎನ್ನಲಾಗಿದ್ದು, ಬೆಂಗಳೂರಿನಲ್ಲಿ ಸ್ವಂತ ಮನೆ, ಭಾಲ್ಕಿ ಪಟ್ಟಣದಲ್ಲಿ ಬೃಹತ್ ಕಟ್ಟಡದ ನಿವಾಸ, ಸ್ವಗ್ರಾಮದಲ್ಲಿ ಕೋಟ್ಯಂತರ ಮೌಲ್ಯದ ಜಮೀನು ಖರೀದಿ ಮಾಡಿದ್ದಾನೆ ಎನ್ನಲಾಗಿದೆ.

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಪರೀಕ್ಷಾರ್ಥಿಗಳನ್ನು ಹಣ ಪಡೆದು ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಜೊತೆ ಮಧ್ಯವರ್ತಿಯಾಗಿ ಕಾರ್ಯ ಮಾಡಿದ್ದಾನೆ ಎನ್ನಲಾಗಿದೆ. ಭಾಲ್ಕಿ ಮೂಲದ ಬಸವರಾಜ್ ಗ್ಯಾನೇಂದ್ರ ಕುಮಾರ್ ಜೊತೆ 12 ಜನ ಪರೀಕ್ಷಾರ್ಥಗಳ ಜೊತೆ ಸಂಪರ್ಕ ಮಾಡಿಸಿದ್ದಾನೆ ಎನ್ನಲಾಗಿದ್ದು, ಸಿಐಡಿ ಪೊಲೀಸರು ತನಿಖೆ ಮಾಡಿದ ಬಳಿಕ ಸತ್ಯಾಂಶ ಬಹಿರಂಗವಾಗಲಿದೆ. 


Spread the love

About Laxminews 24x7

Check Also

ಬಿಷ್ಕೆಕ್‌ನಲ್ಲಿ ಪ್ರಧಾನಿ ಮೋದಿ & ಇರಾನ್‌ ಅಧ್ಯಕ್ಷ ಇಂದು ಭೇಟಿ

Spread the loveಬಿಷ್ಕೆಕ್: ಭಾರತದ ಪ್ರಧಾನಿ ನರೇಂದ್ರ ಮೋದಿ  ಅವರು ಇಂದು ಬಿಷ್ಕೆಕ್‌ನಲ್ಲಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್  ಅವರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ