Breaking News

ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ತಂಡಭಾವನೆ ಬೆಳೆಸುತ್ತದೆ: ಕಿರಣ್ ಜಾಧವ್

Spread the love

ಬೆಳಗಾವಿ: ವಿದ್ಯಾಭಾರತಿ ಕರ್ನಾಟಕ – ಬೆಳಗಾವಿ ಜಿಲ್ಲಾ ವತಿಯಿಂದ ಆಯೋಜಿಸಿದ್ದ ರಾಜ್ಯ/ವಲಯ ಮಟ್ಟದ ಫುಟ್‌ಬಾಲ್ ಹಾಗೂ ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಬಿಜೆಪಿ ಮುಖಂಡ ಕಿರಣ್ ಜಾಧವ್ ಚಾಲನೆ ನೀಡಿ, ಯುವ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಯುವ ಕ್ರೀಡಾಪಟುಗಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಒದಗಿಸುವ ಇಂತಹ ಕ್ರೀಡಾಕೂಟಗಳು ಅತ್ಯಂತ ಮಹತ್ವದ್ದಾಗಿವೆ. ಕ್ರೀಡೆ ಕೇವಲ ಗೆಲುವು-ಸೋಲಿನ ಸ್ಪರ್ಧೆಯಲ್ಲ; ಅದು ಶಿಸ್ತು, ತಂಡಭಾವನೆ, ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಕಿರಣ್ ಜಾಧವ್ ಹೇಳಿದರು.
ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎಲ್ಲ ತಂಡಗಳು ಹಾಗೂ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದ ಅವರು, ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳಗಾವಿಯ ಕ್ರೀಡಾ ಪ್ರತಿಭೆಗಳು ಸಾಧನೆ ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಓಂಕಾರ್ ದೇಸಾಯಿ, ರಾಜೇಂದ್ರ ಭಾಟ್ಕಂಡೆ, ಸುಜಾತಾ ಮೇಡಂ, ಎಸ್.ವಿ. ಕುಲಕರ್ಣಿ, ಆರ್.ಕೆ. ಕುಲಕರ್ಣಿ, ಪುಣೇಕರ್ ಹಾಗೂ ಚಂದ್ರಕಾಂತ ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬಿಜೆಪಿ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

Spread the loveನವದೆಹಲಿ: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಶುಕ್ರವಾರ ತಡರಾತ್ರಿ ಸಮಸ್ಯೆ ಕಾಣಿಸಿಕೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ