Breaking News

11 ಕೋಟಿ ಮೌಲ್ಯದ ಹೈಡ್ರೋಪೋನಿಕ್ಸ್ ಗಾಂಜಾ ಸಮೇತ ಸಿಕ್ಕಿಬಿದ್ದ ಕೇರಳದ ಬ್ಯೂಟಿ ಕಂಟೆಸ್ಟೆಂಟ್

Spread the love

ಮುಂಬೈ: ಸುಮಾರು 11 ಕೋಟಿ ಮೌಲ್ಯದ ಹೈಡ್ರೋಪೋನಿಕ್ಸ್ ಗಾಂಜಾವನ್ನು ಬ್ಯಾಂಕಾಕ್‌ನಿಂದ ಭಾರತಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ ಮಿಸೆಸ್ ಕೇರಳ ಸೌಂದರ್ಯ ಸ್ಪರ್ಧೆಯ ಮಾಜಿ ಸ್ಪರ್ಧಿಯನ್ನು  ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ.

ಮಾಡೆಲ್‌ ಹರ್ಷ ಸನ್ನಿ (28) , ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾಂಜಾ ಸಮೇತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಏರ್ ಇಂಟೆಲಿಜೆನ್ಸ್ ಯೂನಿಟ್ (AIU) ಪ್ರಕಾರ, ಮಾಡೆಲ್‌ ಹರ್ಷ ಸನ್ನಿ ಜೂನ್ 10-11ರ ರಾತ್ರಿ ಬ್ಯಾಂಕಾಕ್‌ನಿಂದ ಏರ್ ಇಂಡಿಯಾ ವಿಮಾನ TG-351 ಮೂಲಕ ಮುಂಬೈನ ಶಿವಾಜಿ ಏರ್‌ಪೋರ್ಟ್‌ಗೆ ಬಂದಿಳಿದಿದ್ದರು. ಅನುಮಾನದ ಮೇಲೆ ಆಕೆಯನ್ನ ತಡೆಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ಆಕೆಯ ಲಗೇಜ್‌ ಬ್ಯಾಗ್‌ಗಳನ್ನ ಶೋಧಿಸುವ ವೇಳೆ ಸುಮಾರು 12 ಪ್ಯಾಕೆಟ್‌ ಕವರ್‌ಗಳನ್ನ ವಶಪಡಿಸಿಕೊಂಡಿದ್ದಾರೆ.

ಆ ಪ್ಯಾಕೆಟ್‌ಗಳನ್ನ ತೆರೆದಾಗ ಹಸಿರು ಬಣ್ಣದ ವಸ್ತುಗಳು ಪತ್ತೆಯಾಗಿವೆ. ಪರಿಶೀಲಿಸಿದ ನಂತರ ಅದು ಹೈಡ್ರೋಪೋನಿಕ್ಸ್ ಗಾಂಜಾ ಎಂಬುದನ್ನು ಅಧಿಕಾರಿಗಳು ಪತ್ತೆಮಾಡಿದ್ದಾರೆ. ವಶಪಡಿಸಿಕೊಂಡ ಅಕ್ರಮ ವಸ್ತುಗಳ ಅಂದಾಜು ಮೌಲ್ಯ 11.82 ಕೋಟಿ ರೂ.ಗಳಿಗೂ ಹೆಚ್ಚು ಎಂದು ಅಂದಾಜಿಸಿದ್ದಾರೆ.

ಹೈಡ್ರೋಪೋನಿಕ್ಸ್ ಗಾಂಜಾ ವಶಪಡಿಸಿಕೊಂಡ ಬಳಿಕ, NDPS ಆಕ್ಟ್‌ ಅಡಿಯಲ್ಲಿ ಹರ್ಷ ಸನ್ನಿ ಅವರನ್ನ ಬಂಧಿಸಲಾಯಿತು. ನಂತರ ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಅವರನ್ನ ಎಸ್ಪ್ಲನೇಡ್ (ಕಿಲ್ಲಾ) ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಹರ್ಷ ಸನ್ನಿ 2025 ರಲ್ಲಿ ಮಿಸೆಸ್‌ ಕೇರಳ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ