Breaking News

ಕೊಲ್ಲೂರು ಮೂಕಾಂಬಿಕೆಗೆ 1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ ಸಿಎಂ ಸಿ. ಜೋಸೆಫ್‌

Spread the love

ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿಗೆ  ಆಗಮಿಸಿದ ಸಿಎಂ ಸಿ. ಜೋಸೆಫ್‌ ವಿಜಯ್‌  ಅವರು ಕೊಲ್ಲೂರು ಮೂಕಾಂಬಿಕೆ ದೇವಿಯ  ದರ್ಶನ ಪಡೆದುಕೊಂಡಿದ್ದಾರೆ. ಜೊತೆಗೆ ದೇವಿಗೆ ವಿಶೇಷ ಕಾಣಿಕೆಯನ್ನೂ ಅರ್ಪಿಸಿ ಕೃಪೆಗೆ ಪಾತ್ರರಾದರು.

i ಶಕ್ತಿ ದೇವಿಗೆ ರೇಷ್ಮೆ ಸೀರೆ, ಫಲ-ತಾಂಬೂಲ ಅರ್ಪಿಸಿ ವಿಜಯ್‌ ಸುಮಾರು ಅರ್ಧ ಗಂಟೆಗಳ ಕಾಲ ಪ್ರಾರ್ಥನೆ ಸಲ್ಲಿಸಿದರು. ಬಳಿಕ ತಾಯಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನ ಕಾಣಿಕೆಯಾಗಿ ಅರ್ಪಿಸಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಬಾಬು ಹೆಗಡೆ ತಿಳಿಸಿದ್ದಾರೆ.

ಇದಕ್ಕೂ ಮುನ್ನ ದೇವಸ್ಥಾನಕ್ಕೆ ಆಗಮಿಸಿದ ವಿಜಯ್‌ ಅವರನ್ನ ಹೂಗುಚ್ಛ ನೀಡಿ ಆಡಳಿತ ಮಂಡಳಿಯ ಟ್ರಸ್ಟಿಗಳು ಸ್ವಾಗತ ಕೋರಿದರು. ಮಂತ್ರಘೋಷದೊಂದಿಗೆ ಕ್ಷೇತ್ರದೊಳಗೆ ಅರ್ಚಕ ವೃಂದ ಬರಮಾಡಿಕೊಂಡಿತು.

ಶಲ್ಯ ಧರಿಸಿ ಆಗಮಿಸುವ ಮೂಲಕ ಸಿಎಂ ವಿಜಯ್‌ ದೇವಸ್ಥಾನದ ಶಿಷ್ಟಾಚಾರ ಪಾಲನೆ ಮಾಡಿದರು. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಸಂಕಲ್ಪ ಪೂಜೆ ನೆರವೇರಿಸಲಾಯಿತು. ಸಿಎಂ ವಿಜಯ್‌ ಸಂಕಲ್ಪ ಪೂಜೆ ಮಾಡಿದರು.

ಯಾವುದೇ ವಿಶೇಷ ಪೂಜೆ, ಸಂಕಲ್ಪ ಇರಲಿಲ್ಲ, ದೇವಿಗೆ ಎಂದಿನಂತೆ ನಡೆಯುವ ಪೂಜೆ ಬಳಿಕ ದೀಪಾರಾಧನೆ ಮಾಡಲಾಯಿತು. ಈ ವೇಳೆ ಸಿಎಂಗೆ ಅರ್ಚಕರು ರಕ್ಷಾ ದಾರ ಕಟ್ಟಿದರು. ಪೂಜೆ ಬಳಿಕ ವಿಜಯ್‌ ದೇವಸ್ಥಾನದಿಂದ ಹೊರಟರು.


Spread the love

About Laxminews 24x7

Check Also

5 ಲಕ್ಷ ಜನರಿಗೆ ಉದ್ಯೋಗ, 1.5 ಕೋಟಿ ಮಾನವ ದಿನ ಸೃಷ್ಟಿಗೆ ಅವಕಾಶ: ಈಶ್ವರ್‌ ಖಂಡ್ರೆ

Spread the loveಬೆಂಗಳೂರು: ಜುಲೈ 1ರಿಂದ ಜಾರಿಗೆ ತರಲಾಗಿರುವ ಮನ್ರೇಗಾದ  ಬದಲಾದ ರೂಪ ವಿಬಿಜಿ ರಾಮ್ ಜಿ ಅಡಿಯಲ್ಲಿ  ಪ್ರತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ