Breaking News

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಬೇಡವೇ ಬೇಡ: ಯದುವೀರ್

Spread the love

ಮಡಿಕೇರಿ: ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ  ಸ್ಪರ್ಧೆ ಆಯೋಜಿಸುವ ವಿಚಾರಕ್ಕೆ ಕೊಡಗು–ಮೈಸೂರು ಸಂಸದ ಯದುವೀರ್ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕಂಬಳವು ಕೇವಲ ಕ್ರೀಡೆಯಲ್ಲ. ಅದು ಕರಾವಳಿಯ ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯದೊಂದಿಗೆ ಬೆಸೆದುಕೊಂಡಿರುವ ಆಚರಣೆ. ಅದನ್ನು ದಸರಾ ವೇದಿಕೆಗೆ ತರುವುದು ಸೂಕ್ತವಲ್ಲ. ಅದನ್ನು ಬೇರೆಡೆಗೆ ತಂದು ವಾಣಿಜ್ಯೀಕರಣ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ದಸರಾ ಸಂದರ್ಭದಲ್ಲಿ ಟಿಕೆಟ್ ವ್ಯವಸ್ಥೆ, ಯುವ ದಸರಾ, ವಸ್ತು ಪ್ರದರ್ಶನ ಸೇರಿದಂತೆ ಈಗಾಗಲೇ ಹಲವು ಸಮಸ್ಯೆಗಳಿವೆ. ಮೊದಲು ಅವುಗಳನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಪರಿಹರಿಸಬೇಕು. ಕಂಬಳವು ಕರಾವಳಿ ಭಾಗದ ಹೆಮ್ಮೆಯ ಸಾಂಸ್ಕೃತಿಕ ಪರಂಪರೆಯಾಗಿದ್ದು, ಅದರ ಮೂಲ ಸ್ವರೂಪವನ್ನು ಉಳಿಸಿಕೊಳ್ಳುವುದು ಅಗತ್ಯ. ಹೀಗಾಗಿ ಮೈಸೂರು ದಸರಾ ವೇದಿಕೆಯಲ್ಲಿ ಕಂಬಳ ಆಯೋಜಿಸುವುದು ಸೂಕ್ತವಲ್ಲ.

ಕಂಬಳವನ್ನು ಮೈಸೂರು ದಸರಾದ ಭಾಗವನ್ನಾಗಿಸುವ ಪ್ರಸ್ತಾಪದ ಕುರಿತು ಸಂಸದರ ಈ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ. ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬು ಕುತೂಹಲ ಮೂಡಿಸಿದೆ.


Spread the love

About Laxminews 24x7

Check Also

ಮಹಾ’ ಮಳೆಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆ – ಹಲವೆಡೆ ಭೂಕುಸಿತ, ಮುಂಬೈ-ಪುಣೆ ರೈಲ್ವೆ ಸಂಚಾರ ಸ್ಥಗಿತ

Spread the loveಮುಂಬೈ: ಮಹಾರಾಷ್ಟ್ರದಲ್ಲಿ  ಭೀಕರ ಮಳೆಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಪ್ರತಿಷ್ಠಿತ ಏರಿಯಾಗಳೆಲ್ಲಾ ಜಲಾವೃತವಾಗಿದೆ. ಮಂಖುರ್ಡ್ ಪ್ರದೇಶದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ