Breaking News

ಪ್ಯಾಕ್‌ ಮಾಡದ ಖಾದ್ಯ ತೈಲ ಮಾರಾಟಕ್ಕೆ ನಿಷೇಧ – ನಿಯಮ ಉಲ್ಲಂಘಿಸಿದ್ರೆ 7 ವರ್ಷ ಜೈಲು

Spread the love

ಮುಂಬೈ: ಮಹಾರಾಷ್ಟ್ರದಲ್ಲಿ ಸಡಿಲ (ಪ್ಯಾಕ್ ಮಾಡದ) ಖಾದ್ಯ ತೈಲ ಮಾರಾಟ ಮಾಡುವುದನ್ನು ರಾಜ್ಯ ಆಹಾರ ಮತ್ತು ಔಷಧ ಆಡಳಿತ  ನಿಷೇಧಿಸಿದೆ. ನಿಯಮ ಉಲ್ಲಂಘಿಸಿದವರಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವುದಾಗಿ FDA ಆಯುಕ್ತ ತುಕಾರಾಮ್ ಮುಂಡೆ ಎಚ್ಚರಿಸಿದ್ದಾರೆ.

ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಖಾದ್ಯ ತೈಲದಲ್ಲಿ ಕಲಬೆರಕೆ ಮಾಡುತ್ತಿರುವುದು ಕಂಡುಬರುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಯಾವುದೇ ರಾಜಿ ಇಲ್ಲ ಎಂದು ಮುಂಡೆ ತಿಳಿಸಿದ್ದಾರೆ. ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ 10 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಬಹುದು ಎಂದೂ ಅವರು ಹೇಳಿದ್ದಾರೆ.

FDA ತಪಾಸಣೆಯಲ್ಲಿ ಪರವಾನಗಿ ಇಲ್ಲದೇ ಕಾರ್ಯನಿರ್ವಹಿಸುವ ಸಂಸ್ಥೆಗಳು, ಅಗ್ಗದ ತೈಲಗಳನ್ನ ಬೆರೆಸಿ ಮಾರಾಟ ಮಾಡುವುದು, ಸಾಸಿವೆ ಎಣ್ಣೆಯಲ್ಲಿ ಅನಧಿಕೃತ ಮಿಶ್ರಣ, ತಪ್ಪು ಲೇಬಲ್, ಅವಧಿ ಮುಗಿಯುವ ಹಂತದಲ್ಲಿರುವ ತೈಲವನ್ನ ಮರುಪ್ಯಾಕಿಂಗ್ ಮಾಡುವುದು ಹಾಗೂ ಆಹಾರ ದರ್ಜೆಯಲ್ಲದ ಪ್ಯಾಕೇಜಿಂಗ್ ಬಳಕೆ ಸೇರಿದಂತೆ ಹಲವು ಅಕ್ರಮಗಳು ಪತ್ತೆಯಾಗಿವೆ.

ಸಾಸಿವೆ ಎಣ್ಣೆಯನ್ನು 100% ಶುದ್ಧ ಸಾಸಿವೆ ಎಣ್ಣೆಯಾಗಿ ಮಾತ್ರ ಮಾರಾಟ ಮಾಡಬೇಕು. ಇನ್ನು ಮುಂದೆ ಮಹಾರಾಷ್ಟ್ರದಾದ್ಯಂತ ಪ್ಯಾಕ್ ಮಾಡಿದ ಖಾದ್ಯ ತೈಲವನ್ನೇ ಮಾರಾಟ ಮಾಡಬೇಕು ಎಂದು FDA ಸ್ಪಷ್ಟಪಡಿಸಿದೆ. ಹೊಸ ಆದೇಶವು ಚಿಲ್ಲರೆ ವ್ಯಾಪಾರಿಗಳಷ್ಟೇ ಅಲ್ಲದೆ, ತೈಲ ಉತ್ಪಾದನಾ ಘಟಕಗಳಿಂದ ಆನ್‌ಲೈನ್ ಮಾರಾಟಗಾರರವರೆಗೆ ಸಂಪೂರ್ಣ ಪೂರೈಕೆ ಸರಪಳಿಗೆ ಅನ್ವಯವಾಗಲಿದೆ.


Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ