Breaking News

ಸ್ಮಾರ್ಟ್ ಸಿಟಿಯ ಸಿಟೀಸ್ 2.0 ಅನುಷ್ಠಾನ

Spread the love

ಬೆಳಗಾವಿ:  ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಸ್ಮಾರ್ಟ್ ಸಿಟಿ-2 ಯೋಜನೆ ಅನುಷ್ಠಾನ ಕುರಿತು ಮೇಯರ್ ಪ್ರೀತಿ ಕಾಮಕರ್, ಉಪಮೇಯರ್ ಹನಮಂತ ಕೊಂಗಾಲಿ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.
ಘನ ತ್ಯಾಜ್ಯ ಸಂಸ್ಕರಣ ಘಟಕ ಸೇರಿದಂತೆ ಕ್ರಿಯಾಯೋಜನೆಗೊಳಪಡುವ  ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ, ಇ ತ್ಯಾಜ್ಯ ಸಂಗ್ರಹಣ ಘಟಕ, ಯಂತ್ರಗಳು, ವಾಹನಗಳು ಹಾಗೂ ಮಾನವ ಸಂಪನ್ಮೂಲದ ಅಗತ್ಯತೆ ಸೇರಿದಂತೆ ಮುಂತಾದ ಸಂಪನ್ಮೂಲಗಳ ಕುರಿತು ಚರ್ಚಿಸಲಾಯಿತು.
ಪಾಲಿಕೆ ಆಯುಕ್ತ ಕಾರ್ತಿಕ ಎಂ., ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ, ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ರಾಥೋಡ, ನಗರಸೇವಕ ರವಿ ಧೋತ್ರೆ, ತಾಂತ್ರಿಕ ವಿಭಾಗದ ಜಿ.ಎಂ. ವೀರೇಂದ್ರ ಹಿರೇಮಠ, ಪಾಲಿಕೆ ಪರಿಷತ ಕಾರ್ಯದರ್ಶಿ ಲಕ್ಷ್ಮೀ ನಿಪ್ಪಾಣಿಕರ್, ಅಭಿಯಂತರರಾದ ಪ್ರವೀಣ ಕಿಲಾರಿ, ಸಲ್ಮಾನ ಸಿಂದಗೀಕರ,  ಸ್ಮಾರ್ಟ್ ಸಿಟಿ ಎಂಡಿ ಕವಿತಾ ವಾರಂಗಲ ಇತರರಿದ್ದರು.

Spread the love

About Laxminews 24x7

Check Also

ಚಾಮುಂಡಿ ಬೆಟ್ಟದಲ್ಲಿ ಜು.17 ರಿಂದ ಆಷಾಢ ಮಾಸದ ಪೂಜೆ – ಸಿದ್ಧತೆ ಪರಿಶೀಲಿಸಿದ ಯತೀಂದ್ರ ಸಿದ್ದರಾಮಯ್ಯ

Spread the loveಮೈಸೂರು: ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಸಂಭ್ರಮ ಕಳೆಗಟ್ಟಿದೆ, ವಿವಿಧ ಕಾರ್ಯಕ್ರಮಗಳಿಗೆ ಭರದ ಸಿದ್ಧತೆ ನಡೆಯುತ್ತಿದ್ದು, ಹಬ್ಬದ ವಾತಾವರಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ