ಬೆಳಗಾವಿ: ಗಂಡನ ಮನೆಯವರು ಮಾಡಿದ್ದ ಪೈನಾನ್ಸ್ ಸಾಲಕ್ಕೆ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಗಂಡನನ್ನ ಅರೆಸ್ಟ್ ಮಾಡಿ ಬೆಳಗಾವಿ ಪೊಲೀಸರು ಜೈಲಿಗಟ್ಟಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಬೆಳಗಾವಿ ತಾಲೂಕಿನ ಪೀರನವಾಡಿಯಲ್ಲಿ ಮೂರು ವರ್ಷದ ಮಗು ಭುವನ ಜೊತೆಗೆ ತಾಯಿ ಪ್ರೇಮಾ ಆತ್ಮಹತ್ಯೆಗೆ ಶರಣಾಗಿದ್ದಳು.
ತಾಯಿ ಮಗುವಿನ ಆತ್ಮಹತ್ಯೆ ಪ್ರಕರಣದಲ್ಲಿ ಗಂಡ, ಅತ್ತೆ, ಮೈದುನ, ನಾದೀನಿ ವಿರುದ್ಧ ಕೇಸ್ ದೂರು ದಾಖಲಾಗಿತ್ತು. ಸಧ್ಯ ಈ ಪ್ರಕರಣದಲ್ಲಿ ಗಂಡ ನಾಗೇಶ ತಳವಾರನ ಎಂಬಾತನ ಬಂಧನವಾಗಿದ್ದು, ಅತ್ತೆ ಸುಶೀಲಾ ತಳವಾರ, ಮೈದುನಾ, ಹಾಗೂ ನಾದಿನಿ ಪರಾರಿಯಾಗಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಬೆಳಗಾವಿ ಗ್ರಾಮೀಣ ಪೊಲೀಸರು ಜಾಲ ಬೀಸಿದ್ದಾರೆ.
Laxmi News 24×7