Breaking News

ಒಂದೇ ತಿಂಗಳಲ್ಲಿ ಬರಿದಾದ ಹೇಮಾವತಿ ಒಡಲು – ಮುಂಗಾರು ಪೂರ್ವಕ್ಕೂ ಮುನ್ನವೇ ನೀರು ಖಾಲಿ!

Spread the love

ಹಾಸನ: ಒಂದೇ ತಿಂಗಳಲ್ಲಿ ಹಾಸನ ಜಿಲ್ಲೆಯ ಜೀವನದಿ ಹೇಮಾವತಿಯ  ಒಡಲು ಬರಿದಾಗಿದೆ. ಮುಂಗಾರು ಪೂರ್ವದಲ್ಲೇ ಕನಿಷ್ಠ ಮಟ್ಟಕ್ಕೆ ಜಲಾಶಯದ ನೀರು ಕುಸಿದಿದೆ.

ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಲ್ಲಿ ಒಂದು ತಿಂಗಳಲ್ಲೇ 18 ಟಿಎಂಸಿ ನೀರು ಖಾಲಿಯಾಗಿದ್ದು, ಹೇಮಾವತಿ ಜಲಾಶಯದ ನೀರು ಬಹುತೇಕ ಕೆಆರ್‌ಎಸ್  ಮೂಲಕ ತಮಿಳುನಾಡಿಗೆ  ಹರಿದಿದೆ.

ಇದರ ಜೊತೆಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆಕಟ್ಟೆ ತುಂಬಿಸಲು ಕಾಲುವೆಗಳಿಗೂ ಸಹ ನೀರು ಹರಿಸಲಾಗಿದೆ. ನದಿಗೂ ಹೆಚ್ಚಿನ ಪ್ರಮಾಣದ ನೀರು ಹರಿದ ಪರಿಣಾಮ ಜಲಾಶಯ ಖಾಲಿ ಖಾಲಿಯಾಗಿದೆ.

ಸೂಪರ್‌ ಎಲ್‌ನೀನೊ ಎಫೆಕ್ಟ್‌ನಿಂದ ಮುಂಗಾರು ಕೈಕೊಟ್ಟ ಪರಿಣಾಮ ಸಂಕಷ್ಟ ಎದುರಾಗಿದ್ದು, ಇನ್ನೂ 8 ತಿಂಗಳು ಕುಡಿಯುವ ನೀರಿಗೆ ಗತಿಯೇನು ಎನ್ನುವ ಆತಂಕ ಎಲ್ಲರಲ್ಲಿ ಮನೆ ಮಾಡಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 34 ಟಿಎಂಸಿ ನೀರು ಲಭ್ಯವಿತ್ತು. ಈ ವರ್ಷ ಜಲಾಶಯದಲ್ಲಿ ಕಳೆದ ವರ್ಷದ ಅರ್ಧದಷ್ಟು ನೀರಿಲ್ಲದ ಪರಿಣಾಮ ಆತಂಕ ಹೆಚ್ಚಿಸಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಮತ್ತೆ ತಮಿಳುನಾಡಿಗೆ ನೀರು ಹರಿಸಲು ಆದೇಶ ನೀಡಿದ್ದು, ಯಾವುದೇ ಕಾರಣದಿಂದ ತಮಿಳುನಾಡಿಗೆ ನೀರು ಹರಿಸಬಾರದೆಂದು ಜಿಲ್ಲೆಯ ಜನರು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

Spread the loveವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ