Breaking News

ಹೊಲದಲ್ಲಿ ಗಾಂಜಾ ಬೆಳೆದ ವ್ಯಕ್ತಿಯನ್ನು ಬಂದಿಸಿದ ಗೋಕಾಕ ಪೋಲಿಸರು

Spread the love

ಗೋಕಾಕ ತಾಲೂಕಿನ ಸಮೀಪದ ಬೆನಚಿಮರಡಿ ಗ್ರಾಮದ ಹೊಲದಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬೆನಚಿಮರಡಿ ಗ್ರಾಮದ ಅವಣ್ಣಾ ಸಿದ್ದಪ್ಪ ತಪಸಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು 13 ಕೆಜಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೊಲದಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳಗಾವಿ ಎಸ್ ಪಿ, ಕೆ.ರಾಮರಾಜನ್ ಇವರ ಆದೇಶದಂತೆ ಡಿಎಸಪಿ ರವಿ ನಾಯಕ ಇವರ ಮಾರ್ಗದರ್ಶನದಲ್ಲಿ ಸಿಪಿಆಯ್ ಶ್ರೀಶೈಲ ಬ್ಯಾಕೂಡ ಇವರು ರಚಿಸಿದ ತಂಡದೊಂದಿಗೆ ಪಿಎಸ್ ಐ ಕೆ,ಬಿ, ವಾಲಿಕರು ಇವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಡಿ,ಜಿ,ಕೊಣ್ಣೂರ,ಚಂದ್ರು ಸಣ್ಣಕ್ಕಿ ,ಮಹಾಂತೇಶ ಮನ್ನಿಕೇರಿ, ಸಿಬ್ಬಂದಿಗಳಾದ ಬಿ,ವಿ,ನೇರ್ಲಿ, ಹನಮಂತ ಮಲ್ಲಾಡದವರ,ಹಣಮಂತ ಗೌಡಿ, ನಾಗೇಶ ದುರದುಂಡಿ, ಹಾಗೂ ನಾಗಪ್ಪ ಬೆಳಗಲಿ ಅವರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಸಂಬಂಧ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Spread the love

About Laxminews 24x7

Check Also

ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆ

Spread the loveಯಾದಗಿರಿ: ಭೀಮಾ ನದಿಯಲ್ಲಿ  ಸ್ನಾನ ಮಾಡಲು ಹೋದ ಯುವಕ ನಾಪತ್ತೆಯಾಗಿರುವ ಘಟನೆ ಯಾದಗಿರಿ ತಾಲೂಕಿನ ಮಲ್ಹಾರ  ಗ್ರಾಮದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ