Breaking News

ಅಸ್ಸಾಂನಲ್ಲಿ 168 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ – ಡ್ರಗ್ ಪೆಡ್ಲರ್ ಅರೆಸ್ಟ್

Spread the love

ಗುವಾಹಟಿ: ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿ ಡ್ರಗ್ಸ್ ಜಾಲವನ್ನು ಭೇದಿಸಿರುವ ಭದ್ರತಾ ಪಡೆಗಳು, ಸುಮಾರು 168 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಓರ್ವ ಡ್ರಗ್ ಪೆಡ್ಲರ್‌ನನ್ನು  ಬಂಧಿಸಿದೆ.

ಆಗಸ್ಟ್ 25-26ರ ಮಧ್ಯರಾತ್ರಿ ಕಚಾರ್ ಜಿಲ್ಲೆಯ ಲಖಿಪುರದ ಜುಜಾಂಗ್ ಪಹಾರ್ ಪ್ರದೇಶದಲ್ಲಿ ಅಸ್ಸಾಂ ರೈಫಲ್ಸ್ ಮತ್ತು ಸಿಲ್ಚಾರ್‌ನ ಕಂದಾಯ ಗುಪ್ತಚರ ನಿರ್ದೇಶನಾಲಯ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಕಾರ್ಯಾಚರಣೆಯಲ್ಲಿ ಬರೋಬ್ಬರಿ 5.60 ಲಕ್ಷ ಯಾಬಾ ಮಾತ್ರೆಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ತೂಕ ಸುಮಾರು 60 ಕೆ.ಜಿ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡ್ರಗ್ಸ್ ಸಾಗಾಟಕ್ಕೆ ಬಳಸಲಾಗುತ್ತಿದ್ದ ಟ್ರಕ್ ಒಂದನ್ನೂ ವಶಕ್ಕೆ ಪಡೆಯಲಾಗಿದೆ.

ಈ ಡ್ರಗ್ಸ್ ಸರಕು ಮಣಿಪುರದಿಂದ ಬಂದಿರುವ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ-37 ಮೂಲಕ ಅಸ್ಸಾಂ ಕಡೆಗೆ ಮಾದಕ ವಸ್ತುಗಳನ್ನು ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಶಪಡಿಸಿಕೊಳ್ಳುವಿಕೆ ಅಂತಾರಾಜ್ಯ ಮಾದಕ ವಸ್ತು ಸಾಗಾಟ ಜಾಲಕ್ಕೆ ದೊಡ್ಡ ಹೊಡೆತ ನೀಡಿದೆ. ಈಶಾನ್ಯ ಭಾರತದ ಯುವಕರನ್ನು ಡ್ರಗ್ಸ್ ಜಾಲದಿಂದ ರಕ್ಷಿಸಲು ಹಾಗೂ ಮಾದಕ ವಸ್ತುಗಳ ಸಾಗಾಟ ಮಾರ್ಗಗಳನ್ನು ತಡೆಯಲು ಅಸ್ಸಾಂ ರೈಫಲ್ಸ್ ಕಾರ್ಯಾಚರಣೆ ಮುಂದುವರಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಅಸ್ಸಾಂ ಪೊಲೀಸರು ಕೂಡ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.


Spread the love

About Laxminews 24x7

Check Also

ಬ್ಯಾಲೆಟ್ ಪೇಪರ್‌ನಲ್ಲೇ ಕಾಂಗ್ರೆಸ್ ಸೋತಿದೆ, ಪತನದ ದಿನಗಳು ಹತ್ತಿರ ಬರ್ತಿದೆ: ನಿಖಿಲ್ ಕುಮಾರಸ್ವಾಮಿ

Spread the loveರಾಮನಗರ: ಕಾಂಗ್ರೆಸ್  ಇವಿಎಂ ಮೇಲೆ ಅನುಮಾನ ಪಟ್ಟು, ಬ್ಯಾಲೆಟ್ ಪೇಪರ್  ಚುನಾವಣೆ ಬೇಕು ಅಂತಿದ್ದರು. ಈಗ ಬ್ಯಾಲೆಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ