Breaking News

SIR ಮೊದಲ ಮತದಾರರ ಕರಡು ಪಟ್ಟಿ ರಿಲೀಸ್‌; 1,07,96,339 ಮತದಾರರ ಹೆಸರು ಡಿಲೀಟ್‌

Spread the love

ಬೆಂಗಳೂರು: ಕರ್ನಾಟಕದಲ್ಲಿ ನಡೆಸಿದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ  ಪೂರ್ಣಗೊಂಡಿದ್ದು, ಮೊದಲ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದಾರೆ. 1,07,96,339 ಮತದಾರರ ಹೆಸರುಗಳನ್ನು ಡಿಲೀಟ್‌ ಮಾಡಲಾಗಿದೆ.

ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಅನ್ಬುಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಎಸ್‌ಐಆರ್‌ಗೆ 15,17,042 ಮಂದಿ ಗೈರಾಗಿದ್ದಾರೆ. 65,45,679 ಮತದಾರರು ಶಾಶ್ವತವಾಗಿ ಶಿಫ್ಟ್ ಆಗಿದ್ದಾರೆ. 16,39,864 ಮಂದಿ ಮೃತಪಟ್ಟಿದ್ದಾರೆ. 7,09,870 ಮಂದಿ ಒಂದಕ್ಕಿಂತ ಹೆಚ್ಚು ಮತದಾನ ಮಾಡಿದವರಾಗಿದ್ದಾರೆ. 3,83,884 ಮತದಾರರು ಇತರರಿದ್ದಾರೆ. 43,81,335 ಎಸ್‌ಐಆರ್ ಪ್ರಕ್ರಿಯೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮತದಾರರ ವರ್ಗೀಕರಣ
ಜನರಲ್ ( ಸಾಮಾನ್ಯ)- 4,46,35,975
ಯುವ ಮತದಾರರು (18ರಿಂದ 19 ವಯಸ್ಸು)- 3,70,341
20ರಿಂದ 29 (ವಯಸ್ಸು)- 83,87,880
85+ ವಯಸ್ಸಿನ ಮತದಾರರು- 3,92,302
NRI- 951
ಸೇವೆಯಲ್ಲಿರುವ ಮತದಾರರು- 44,176
Pwd (ವಿಶೇಷ ಚೇತನರು)- 5,55,691

43 ಲಕ್ಷ ಮತದಾರರಿಗೆ ನೋಟಿಸ್ ಕೊಡುವ ಪ್ರಕ್ರಿಯೆ ಜಾರಿಯಲ್ಲಿದೆ. ನೋಟಿಸ್ ಹೇಗೆ ಕೊಡಬೇಕು, ನೋಟಿಸ್‌ನಲ್ಲಿ ಜಾರಿ ವಿಚಾರ ಇವೆಲ್ಲ ಕಾರ್ಯಗಾರ ನಡೆಯಲಿದೆ. ಪರಿಶೀಲನಾ ಪ್ರಕ್ರಿಯೆ ಇವತ್ತಿಂದ ಆರಂಭವಾಗಲಿದೆ. ನೋಟಿಸ್ ಕೊಡುವ ಸಲುವಾಗಿ 3 ಸಾವಿರಕ್ಕೂ ಅಧಿಕ ARO, ERO ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ‌. ಅಕ್ಟೋಬರ್ 22ರೊಳಗೆ ನೋಟಿಸ್ ಪ್ರಕ್ರಿಯೆ ಮುಗಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.‌

ಒಬ್ಬ AROಗೆ ಅಂದಾಜು 1 ಸಾವಿರ ನೋಟಿಸ್ ಬರುತ್ತದೆ. ಹೆಸರು ಪರಿಷ್ಕರಣೆ, ಹುಟ್ಟಿದ ದಿನಾಂಕ ಪರಿಷ್ಕರಣೆ, ವಿಳಾಸ ಬದಲಾವಣೆಗೆ ಫಾರ್ಮ್ – 8 ನ್ನು ಭರ್ತಿ ಮಾಡಿ. 43 ಲಕ್ಷ ಮತದಾರರು ಡ್ರಾಪ್ಟ್ ರೋಲ್‌ನಲ್ಲಿ ಹೆಸರು ಇದ್ದವರಿಗೆ ಅದ್ರಲ್ಲಿ ಹೆಚ್ಚುವರಿ ದಾಖಲಾತಿ ಬೇಕಾಗಿದ್ದಲ್ಲಿ ಮಾತ್ರ ಮನೆಗೆ ನೋಟಿಸ್ ನೀಡಲಾಗುತ್ತದೆ. ಅಕ್ಷೇಪಣೆ ಸಲ್ಲಿಕೆಗೆ ದಿನಾಂಕ ಸ್ಥಳ ನಿಗದಿಯಾಗಿರುತ್ತದೆ. ಅಲ್ಲಿ ಅವರು ಬಂದು ದಾಖಲಾತಿಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.

ERO ಕೊಟ್ಟಿರುವ ನೋಟಿಸ್‌ನಲ್ಲಿ ಕಾರಣ ಕೂಡ ಉಲ್ಲೇಖವಾಗಿರುತ್ತದೆ. ಮತದಾರರಿಗೆ ಖುದ್ದು ಮನೆಗೆ ಹೋಗಿ ನೋಟಿಸ್ ನೀಡಲಾಗುತ್ತದೆ. ಮೊಬೈಲ್ ಸಂದೇಶಗಳ ಮೂಲಕ ಕಳಿಸಲ್ಲ. ಏಳು ದಿನಗಳ ಕಾಲ ಸಮಯ ಇರುತ್ತದೆ ಎಂದು ಹೇಳಿದ್ದಾರೆ.

ನಗರ ಪ್ರದೇಶದಲ್ಲಿ ಹೆಚ್ಚಾಗಿ ನೋ ಮ್ಯಾಪಿಂಗ್ ಸಮಸ್ಯೆಯಾಗಿದೆ. ಸೆಪ್ಟೆಂಬರ್ 23 ರೊಳಗೆ ಫಾರ್ಮ್ – 6 ಸಲ್ಲಿಕೆ ಮಾಡಿದರೆ ಅಂತಿಮ ಮತದಾರರ ಪಟ್ಟಿಯಲ್ಲಿ ಇರುತ್ತದೆ ಎಂದಿದ್ದಾರೆ.


Spread the love

About Laxminews 24x7

Check Also

“ದಲಿತರ 187 ಕೋಟಿ ಹಣವನ್ನು ನುಂಗಿದ ನಾಗೇಂದ್ರ ರಾಜೀನಾಮೆ ನೀಡಲೇಬೇಕು” – ವಿಧಾನಸೌಧ ಮುತ್ತಿಗೆ, ಬಿಜೆಪಿ ನಾಯಕರು ವಶ

Spread the loveಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ