Breaking News

ಆಫ್ರಿಕಾದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಗಳ ಮಾರಾಟ – ಚಿಕ್ಕಮಗಳೂರು ಹಕ್ಕಿಪಿಕ್ಕಿ ದಂಪತಿಯಿಂದ ನೀಚ ಕೃತ್ಯ

Spread the love

ಚಿಕ್ಕಮಗಳೂರು: ಇಲ್ಲಿನ ಮಲ್ಲೇನಹಳ್ಳಿ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ ದಂಪತಿ ಹಣಕ್ಕಾಗಿ 20 ವರ್ಷದ ಮಗಳನ್ನೇ ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಿದ ಘಟನೆ ನಡೆದಿದೆ.

ಪಶ್ಚಿಮ ಆಫ್ರಿಕಾದ ಸೆನಗಲ್‌ಗೆ ದಂಪತಿ ಗಿಡಮೂಲಿಕೆ ವ್ಯಾಪಾರಕ್ಕೆಂದು ತೆರಳಿದ್ದರು. ಈ ವೇಳೆ 7 ಲಕ್ಷ ರೂ.ಗೆ ಮಗಳನ್ನು ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ್ದಾರೆ. ಬಳಿಕ ಮಗಳು ಭಾರತಕ್ಕೆ ಹೋಗಿದ್ದಾಳೆ ಎಂದು ಜೊತೆಗಿದ್ದವರ ಬಳಿ ಕತೆ ಹೇಳಿದ್ದರು.

ಕಷ್ಟಪಟ್ಟು ಸೆನೆಗಲ್‌ನಿಂದಲೇ ಪರಿಚಯದವರನ್ನು ಯುವತಿ ಸಂಪರ್ಕಿಸಿದ್ದಳು. ಈ ವೇಳೆ, ತಂದೆ, ತಾಯಿ ಹಣಕ್ಕಾಗಿ ಮಾರಾಟ ಮಾಡಿದ ವಿಚಾರ ತಿಳಿಸಿದ್ದಳು. ಅಲ್ಲದೇ ವಿಡಿಯೋ ಮಾಡಿ ತನಗೆ ಆಗಿರುವ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಳು. ಬಳಿಕ ಭಾರತದ ರಾಯಭಾರ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿ, ಸ್ಥಳೀಯ ಪೊಲೀಸರ ನೆರವಿನಿಂದ ಯುವತಿಯನ್ನು ರಕ್ಷಿಸಲಾಗಿದೆ.

4 ತಿಂಗಳ ಹಿಂದಷ್ಟೇ ಪಶ್ಚಿಮ ಆಫ್ರಿಕಾದ ಸೆನಗಲ್ ದೇಶಕ್ಕೆ ಯುವತಿಯ ಕುಟುಂಬ ತೆರಳಿತ್ತು. 10 ದಿನಗಳ ಹಿಂದೆ ಆಕೆಯನ್ನು ಮಾರಾಟ ಮಾಡಲಾಗಿತ್ತು. ಮಗಳನ್ನು ರಕ್ಷಿಸಿರುವ ವಿಷಯ ತಿಳಿಯುತ್ತಿದ್ದಂತೆ ಪೋಷಕರು ಊರಿಗೆ ಬಂದಿದ್ದಾರೆ.

ಯವತಿಗೆ ನ್ಯಾಯ ಕೊಡಿಸುವಂತೆ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಸಂಘಟನೆ ಚಿಕ್ಕಮಗಳೂರು ಎಸ್‌ಪಿಗೆ ಪತ್ರ ಬರೆದಿದೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ