Breaking News

ಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ತಮ್ಮನಿಂದ ಕಾನೂನು ವಿದ್ಯಾರ್ಥಿನಿಯ ಹತ್ಯೆ – ವಿಚ್ಛೇದಿತ ಪ್ರಿಯಕರ ಸೇರಿ ಇಬ್ಬರು ಅಂದರ್‌

Spread the love

ಬೆಂಗಳೂರು: ಅಣ್ಣನ ಪ್ರೀತಿ  ನಿರಾಕರಿಸಿದ ಯುವತಿಯನ್ನು ಆತನ ತಮ್ಮ ಚಾಕು ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ  ಕೋಡಿಹಳ್ಳಿಯ ಹೆಚ್‌ಎಎಲ್ ರಸ್ತೆಯಲ್ಲಿ ನಡೆದಿದೆ.

ಅಮೃತ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿದ ಯುವತಿ. ಜು. 13 ರಂದು ಯುವತಿಗೆ ಚಾಕು ಇರಿಯಲಾಗಿತ್ತು. ರಕ್ತದ ಮಡುವಲ್ಲಿ ರಸ್ತೆಯಲ್ಲಿಯೇ ಬಿದ್ದು ಒದ್ದಾಡುತ್ತಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಕೆ ಜು.15ರ ಸಂಜೆ ಸಾವನ್ನಪ್ಪಿದ್ದಾಳೆ.

ಓಂ ಶಕ್ತಿ ಮಾಲೆ ಹಾಕುವ ವೇಳೆ ಎರಡು ಕುಟುಂಬಗಳ ನಡುವೆ ಪರಿಚಯ ಆಗಿತ್ತು. ಬಳಿಕ ಧನುಷ್ ಮತ್ತು ಅಮೃತ ಆತ್ಮೀಯರಾಗಿದ್ದರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಧನುಷ್‌ಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದ. ಆತನಿಗೆ ಒಂದು ಮಗು ಕೂಡ ಇತ್ತು. ಈ ವಿಚಾರವನ್ನು ಅಮೃತಳಿಂದ ಮುಚ್ಚಿಟ್ಟಿದ್ದ. ಈ ವಿಚಾರ ಗೊತ್ತಾಗಿ ಆತನಿಂದ ಯುವತಿ ದೂರವಾಗಿದ್ದಳು.

ಅಣ್ಣನ ಪ್ರೀತಿ ನಿರಾಕರಿಸಿದವಳನ್ನ ಉಳಿಸಲ್ಲ ಎಂದು ಹೇಳಿಕೊಳ್ಳುತ್ತಿದ್ದ. ಅಂದುಕೊಂಡಂತೆ ಜು.13 ರಂದು ಯುವತಿ ಮನೆಯ ಬಳಿ ತೆರಳಿ ಗಲಾಟೆ ಮಾಡಿದ್ದ. ಈ ವೇಳೆ ಯುವತಿಯ ಬೆನ್ನು ಹಾಗೂ ಎದೆಗೆ ಚಾಕುವಿನಿಂದ ಇರಿದಿದ್ದ. ಅಮೃತ ಕಾನೂನು ವಿದ್ಯಾರ್ಥಿನಿಯಾಗಿದ್ದು, ಪಿಜ್ಜಾ ಶಾಪ್‌ನಲ್ಲಿ ಕೆಲಸ ಕೂಡ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ಚಾಕು ಇರಿದ ಆರೋಪಿಗಳಾದ ಸೂರ್ಯ ಹಾಗೂ ಧನುಷ್‌ ವಿರುದ್ಧ ಜೀವನ ಭೀಮಾನಗರ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ