Breaking News

ಕೋಮುಲ್ ಕಚೇರಿ ಮೇಲೆ ದಿಢೀರ್ ʻಲೋಕಾʼ ದಾಳಿ – ದಾಖಲೆಗಳ ಪರಿಶೀಲನೆ

Spread the love

ಕೋಲಾರ: ತಾಲೂಕಿನ ಬೆಳಗಾನಹಳ್ಳಿ ಬಳಿ ಇರುವ ಕೋಲಾರ ಹಾಲು ಒಕ್ಕೂಟ  ಕಚೇರಿ ಮೇಲೆ ದಿಢೀರ್ ಲೋಕಾಯುಕ್ತ ಅಧಿಕಾರಿಗಳು ದಾಳಿ  ನಡೆಸಿ ಮಹತ್ವದ ಕಡತಗಳ ಪರಿಶೀಲನೆ ನಡೆಸಿದ್ದಾರೆ.

ನಾಗರಾಜ್ ಎಂಬವವರು ನೀಡಿರುವ ದೂರನ್ನು ಆಧರಿಸಿ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಂವಿಕೆ ಗೋಲ್ಡನ್ ಡೈರಿ, ಸೋಲಾರ್ ಪ್ಲಾಂಟ್, ಐಸ್ ಕ್ರೀಂ ಘಟಕ, ಮೆಗಾ ಡೈರಿಗಳಲ್ಲಿ ಸಾಕಷ್ಟು ಅವ್ಯವಹಾರ ಸೇರಿದಂತೆ ಸೆ-2023ರಲ್ಲಿ ನಡೆದ ನೇಮಕಾತಿಯಲ್ಲೂ ಹಗರಣ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ಅವರು ದೂರು ಸಲ್ಲಿಸಿದ್ದರು.

ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳಾದ ಲೋಕೇಶ್ ನೇತೃತ್ವದ ತಂಡ ದಾಖಲೆಗಳ ಪರಿಶೀಲನೆ ನಡೆಸಿದೆ. ಇನ್ನೂ ಭೇಟಿ ವೇಳೆ ಹಾಜರಾಗಲು ದೂರುದಾರ ನಾಗರಾಜ್ ಎಂಬವರಿಗೆ ಲೋಕಾ ಅಧಿಕಾರಿಗಳು ನೊಟೀಸ್ ಸಹ ನೀಡಿದ್ದಾರೆ. ಏ.24ರ ವರೆಗೂ ದಾಖಲೆಗಳ ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ