Breaking News

ಜಿಲ್ಲೆ

ಸೋಲಿನ ಭಯದಿಂದ ತಮ್ಮ ವಿರುದ್ಧ ಅಪಪ್ರಚಾರ ಹಾಗೂ ತೇಜೋವಧೆ ಮಾಡಲಾಗುತ್ತಿದೆ:ವಿ.ಕೃಷ್ಣಮೂರ್ತಿ

ಬೆಂಗಳೂರು, ಅ.26- ಸೋಲಿನ ಭಯದಿಂದ ತಮ್ಮ ವಿರುದ್ಧ ಅಪಪ್ರಚಾರ ಹಾಗೂ ತೇಜೋವಧೆ ಮಾಡಲಾಗುತ್ತಿದೆ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿ.ಕೃಷ್ಣಮೂರ್ತಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಮಾಡುತ್ತಿರುವ ಅಪಪ್ರಚಾರದ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದರು. ತಮ್ಮ ವಿರುದ್ಧ ತೇಜೋವಧೆ ಮಾಡಿರುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ನ್ಯಾಯ ಒದಗಿಸುವಂತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ. …

Read More »

ಯಡಿಯೂರಪ್ಪ ಅವರು ಊಟ ಮಾಡಲು ಕಲಬುರಗಿಗೆ ಬಂದು ಹೋಗಿರಬಹುದು. ಇದು ಜನಪ್ರತಿನಿಧಿಗಳ ಸರ್ಕಾರವೇ ಅಲ್:ಸಿದ್ದರಾಮಯ್ಯಲ

ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆದರೆ ಜನಪ್ರತಿನಿಧಿಗಳ ಜೊತೆ ಚರ್ಚಿಸದೇ ಹೋಗಿದ್ದಾರೆ. ಯಡಿಯೂರಪ್ಪ ಅವರು ಊಟ ಮಾಡಲು ಕಲಬುರಗಿಗೆ ಬಂದು ಹೋಗಿರಬಹುದು. ಇದು ಜನಪ್ರತಿನಿಧಿಗಳ ಸರ್ಕಾರವೇ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿ 100 ಕೋಟಿ ರೂಪಾಯಿ ನಷ್ಟವಾಗಿದೆ. ರಾಜ್ಯ ಸರ್ಕಾರದ ಪ್ರಕಾರ ಒಟ್ಟು 700 …

Read More »

ಸೊರಬ ಪಟ್ಟಣದಲ್ಲಿ ದಿ.ಬಂಗಾರಪ್ಪ ಅವರ ಸ್ಮಾರಕ ನಿರ್ಮಿಸಲು ಈಗಾಗಲೇ 1 ಕೋಟಿ ರೂ. ಅನುದಾನ:B.S.Y.

ಶಿವಮೊಗ್ಗ: ಸಮಾಜಮುಖಿ ಚಿಂತನೆಯ ನಾಯಕರಾಗಿದ್ದ ಬಂಗಾರಪ್ಪ ಅವರು ಜಾರಿಗೊಳಿಸಿದ ಜನಪರ ಹಾಗೂ ದೂರದೃಷ್ಟಿಯ ಯೋಜನೆಗಳಿಂದಾಗಿ ಇಂದಿಗೂ ಅವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರ 87ನೇ ಜನ್ಮಸ್ಮರಣೆ ಹಾಗೂ ಸೊರಬ ಪಟ್ಟಣದಲ್ಲಿ 21.15ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಉದ್ಯಾನವನವನ್ನು ಆನ್‍ಲೈನ್ ಸಮಾರಂಭದ ಮೂಲಕ ಉದ್ಘಾಟಿಸಿ ಮಾತನಾಡಿದ ಸಿಎಂ, ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರದಲ್ಲಿ ಬಂಗಾರಪ್ಪ ಅವರು ತಂದ ದೂರದೃಷ್ಟಿ ಯೋಜನೆಯಿಂದಾಗಿ ಅವರು …

Read More »

ಕೆಜಿಎಫ್ ರಾಕಿಗೆ ಡೆತ್ ನೋಟ್ ನೀಡಲು ಬಂದ ರಮಿಕಾ ಸೇನ್

ಬೆಂಗಳೂರು: ಕೆಜಿಎಫ್ ದುನಿಯಾದ ರಾಕಿಗೆ ಡೆತ್ ನೋಟ್ ನೀಡಲು ಬಂದ ರಾಜಕಾರಣಿ ರಮೀಕಾ ಸೇನ್ ಫಸ್ಟ್ ಲುಕ್ ಔಟ್ ಆಗಿದೆ. ರಮೀಕಾ ಸೇನ್ ಪಾತ್ರದಲ್ಲಿ ನಟಿಸುತ್ತಿರುವ ರವೀನಾ ಟಂಡನ್ ಹುಟ್ಟುಹಬ್ಬದ ಹಿನ್ನೆಲೆ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆಗೊಳಿಸುವ ಮೂಲಕ ಬರ್ತ್ ಡೇ ಗಿಫ್ಟ್ ನೀಡಿದೆ. ಕನ್ನಡಕ್ಕೆ ಮೊದಲ ಬಾರಿಗೆ ಬಂದಿರುವ ರವೀನಾ ಟಂಡನ್ ಕೆಜಿಎಫ್ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಮಹಿಳಾ ರಾಜಕಾರಣಿಯಾಗಿ ರವೀನಾ ನಟಿಸುತ್ತಿದ್ದಾರೆ. …

Read More »

ಎಂಟು ತಿಂಗಳ ನಂತರ ಸಿನಿಮಾ ಚಟುವಟಿಕೆ ಆರಂಭಇಡ್ಲಿ, ವಡೆ ತುಂಬಾ ಮಿಸ್ ಮಾಡಿಕೊಂಡಿದ್ದೆ: ದರ್ಶನ್

ಬೆಂಗಳೂರು: ಇಡ್ಲಿ, ವಡೆ ಮಿಸ್ ಮಾಡಿಕೊಳ್ತಿದ್ದೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ. ರಾಜರಾಜೇಶ್ವರಿ ನಗರದ ಶೃಂಗಗಿರಿ ಷಣ್ಮುಖ ದೇವಸ್ಥಾನದಲ್ಲಿ ನಡೆದ ಆಪ್ತ ಧ್ರುವನ್ ಅವರ ಭಗವಾನ್ ಶ್ರೀಕೃಷ್ಣಪರಮಾತ್ಮ ಸಿನಿಮಾದ ಮುಹೂರ್ತದಲ್ಲಿ ದರ್ಶನ್ ಭಾಗಿಯಾಗಿದ್ದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಇಡ್ಲಿ,ವಡೆಯನ್ನೇ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಒಂದೊಂದೇ ಟಿಫನ್ ತಿಂದು ಬೇಜಾರಾಗಿದೆ. ಹೀಗಾಗಿ ಮನೆಯಲ್ಲಿ ಟಿಫನ್ ತಿನ್ನೋದೇ ಬಿಟ್ಟಿದ್ದೆ. ಶೂಟಿಂಗ್ ಆರಂಭವಾದ್ರೆ 4 ರೀತಿಯ ಟಿಫನ್ ಸಿಗುತ್ತೆ ಎಂದರು. …

Read More »

ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನದ ಸಮಸ್ಯೆಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ.

ಗೋಕಾಕ : ತೀವ್ರ ವಿವಾದಕ್ಕೆ ಕಾರಣವಾಗಿದ್ದ ತಪಸಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನದ ಸಮಸ್ಯೆ ಕೊನೆಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ. ೧೯.೨೦ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ತಲೆಯೆತ್ತಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನೂತನ ಕಟ್ಟಡಕ್ಕೆ ತಪಸಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆದಿತ್ತು. ಗ್ರಾಮ ಪಂಚಾಯತ ತಪಸಿ ಅಧೀನದಲ್ಲಿ ಸರ್ವೇ ನಂ. ೧೯೩ ರಲ್ಲಿ ಈಗಾಗಲೇ ೩೯.೧೯ ಎಕರೆ ಸರ್ಕಾರಿ ಜಮೀನಿನಲ್ಲಿ …

Read More »

ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚನ್ನಮ್ಮ ಪುತ್ಥಳಿಗಳನ್ನು ಸುವರ್ಣ ಸೌಧ ಆವರಣದಲ್ಲಿ ಸ್ಥಾಪಿಸಬೇಕು.: ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ – ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚನ್ನಮ್ಮ ಪುತ್ಥಳಿಗಳನ್ನು ಸುವರ್ಣ ಸೌಧ ಆವರಣದಲ್ಲಿ ಸ್ಥಾಪಿಸಬೇಕು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಕಿತ್ತೂರಲ್ಲಿ ಸ್ಥಾಪಿಸಬೇಕೆಂದು ಆಗ್ರಹಿಸಿ ಕೂಡಲಸಂಗಮ ಮಹಾಪೀಠ ಧರ್ಮಕ್ಷೇತ್ರದ ಅಂಗಾಯತ ಪಂಚಮಸಾಲಿ ಜಗದ್ಗುರು  ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಇವರಿಂದ  ಅಕ್ಟೋಬರ್ 28ರಂದು  ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ  ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಅಖಿಲ ಭಾರತ ಅಂಗಾಯತ ಪಂಚಮಸಾಲಿ ಸಮಾಜದ ಸರ್ವ ಸಂಘಟನೆಗಳ ಸಹಯೋಗದೊಂದಿಗೆ …

Read More »

ಕಂದಾಯ ಸಚಿವ R.ಅಶೋಕ್‌ 25 ಸಾವಿರ ರೂ. ಪರಿಹಾರದ ಚೆಕ್​ ವಿತರಣೆ :ಪರಿಹಾರ ಹಣ ಪಡೆದವರಿಗೆ ಬಿಬಿಎಂಪಿ ಶಾಕ್ ನೀಡಿದೆ

ಬೆಂಗಳೂರು: ಹೊಸಕೆರೆ ಹಳ್ಳಿಯ ದತ್ತಾತ್ರೇಯ ನಗರ ವ್ಯಾಪ್ತಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಹೀಗಾಗಿ ಕಂದಾಯ ಸಚಿವ R.ಅಶೋಕ್‌ 25 ಸಾವಿರ ರೂ. ಪರಿಹಾರದ ಚೆಕ್​ ವಿತರಿಸಿದ್ದರು. ಇದು ಸಂತ್ರಸ್ಥರಿಗೆ ಕೊಂಚ ಖುಷಿ ನೀಡಿತ್ತು. ಆದರೆ ಪರಿಹಾರ ಹಣ ಪಡೆದವರಿಗೆ ಬಿಬಿಎಂಪಿ ಶಾಕ್ ನೀಡಲಿದೆ. ದತ್ತಾತ್ರೇಯನಗರದಲ್ಲಿ ರಾಜಕಾಲುವೆ ಒತ್ತುವರಿಯಾದ ಹಿನ್ನೆಲೆಯಲ್ಲಿ ಒತ್ತುವರಿ ಜಾಗ ಪತ್ತೆಗೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಪರಿಹಾರ ಪಡೆದ 344 ಕುಟುಂಬಗಳ ಪೈಕಿ …

Read More »

ತಿರುಪತಿ ದೇವಸ್ಥಾನದಲ್ಲಿ ಅವಘಡ

ಆಂಧ್ರಪ್ರದೇಶ : ತಿರುಪತಿ ತಿರುಮಲ ದೇವಾಲಯದಲ್ಲಿನ ಬಾಯ್ಲರ್ ನಿಂದ ಬಿಸಿನೀರು ಸೋರಿಕೆಯಾಗಿ, ಕಾರ್ಮಿಕರಿಗೆ ಸಿಡಿದಿದ್ದರಿಂದಾಗಿ, ಐವರು ಕಾರ್ಮಿಕರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರು ಕಾರ್ಮಿಕರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಈ ಕುರಿತಂತೆ ಪ್ರಕಟಣೆ ಹೊರಡಿಸಿರುವಂತ ಟಿಟಿಡಿ, ಅಡುಗೆ ಮನೆಯಲ್ಲಿ ಬಾಯ್ಲರ್ ನಿಂದ ನೀರು ಸೋರಿಕೆಯಾಗಿ, ಕಾರ್ಮಿಕರ ಮೇಲೆ ಬಿದ್ದಿರುವ ಪರಿಣಾಮ, ಐವರು ಕೆಲಸಗಾರರು ಗಾಯಗೊಂಡಿದ್ದಾರೆ. ಇಂತಹ ಕಾರ್ಮಿಕರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿಸಿದೆ.

Read More »

ಅಕ್ರಮ ಗಾಂಜಾ ವಶ

ಗದಗ : ಗದಗ ಜಿಲ್ಲೆಯ ಹುಲಕೋಟಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಮಹಿಳೆಯ ಮನೆಯ ಮೇಲೆ ಗದಗ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದೇವಕ್ಕ ನಾರಾಯಣ ಬೆಳ್ಳಿಕೊಪ್ಪ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯಾಗಿದ್ದಾಳೆ. ಮನೆಯಲ್ಲಿ 80 ಸಾವಿರ ಮೌಲ್ಯದ ಸುಮಾರು ೪ ಕೆಜಿ ಒಣ ಗಾಂಜಾವನ್ನು ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ವಶಪಡಿಸಿಕೊಂಡಿದ್ದಾರೆ ಆರೋಪಿ ದೇವಕ್ಕ ಬೆಳ್ಳಿಕೊಪ್ಪ ಪರಾರಿಯಾಗಿದ್ದಾರೆ. ಗದಗ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »