Home / ಜಿಲ್ಲೆ / ಬೆಳಗಾವಿ / ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚನ್ನಮ್ಮ ಪುತ್ಥಳಿಗಳನ್ನು ಸುವರ್ಣ ಸೌಧ ಆವರಣದಲ್ಲಿ ಸ್ಥಾಪಿಸಬೇಕು.: ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚನ್ನಮ್ಮ ಪುತ್ಥಳಿಗಳನ್ನು ಸುವರ್ಣ ಸೌಧ ಆವರಣದಲ್ಲಿ ಸ್ಥಾಪಿಸಬೇಕು.: ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ

Spread the love

ಬೆಳಗಾವಿ – ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚನ್ನಮ್ಮ ಪುತ್ಥಳಿಗಳನ್ನು ಸುವರ್ಣ ಸೌಧ ಆವರಣದಲ್ಲಿ ಸ್ಥಾಪಿಸಬೇಕು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಕಿತ್ತೂರಲ್ಲಿ ಸ್ಥಾಪಿಸಬೇಕೆಂದು ಆಗ್ರಹಿಸಿ ಕೂಡಲಸಂಗಮ ಮಹಾಪೀಠ ಧರ್ಮಕ್ಷೇತ್ರದ ಅಂಗಾಯತ ಪಂಚಮಸಾಲಿ ಜಗದ್ಗುರು  ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಇವರಿಂದ  ಅಕ್ಟೋಬರ್ 28ರಂದು  ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ  ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಅಖಿಲ ಭಾರತ ಅಂಗಾಯತ ಪಂಚಮಸಾಲಿ ಸಮಾಜದ ಸರ್ವ ಸಂಘಟನೆಗಳ ಸಹಯೋಗದೊಂದಿಗೆ ಉಪವಾಸ ಸತ್ಯಾಗ್ರಹನಡೆಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸ್ವಾಮಿಗಳು, ಮಕ್ಕಳ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ  ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರದ 2 ಎ ಹಾಗೂ ಎಲ್ಲಾ ಬಡ ಅಂಗಾಯತ ಉಪ ಸಮಾಜಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಯ  ಹಕ್ಕೊತ್ತಾಯಕ್ಕಾಗಿ ಎರಡನೇ ಹಂತದ ಚಳುವಳಿ ನಡೆಸಲಾಗುವುದು ಎಂದರು.
 ಕರ್ನಾಟಕದ ಬಹುಸಂಖ್ಯಾತ ಸಮುದಾಗಳಲ್ಲಿಯೇ ಅಂಗಾಯತ ಪಂಚಮಸಾಲಿ ಸಮಾಜವು ಅಗ್ರಗಣ್ಯವಾಗಿದೆ. ಕೃಷಿ ಕಾರ್ಮಿಕ ನಿರತ, ದಾಸೋಹ ರೂಪಿತ , ಧರ್ಮ ಸಹಿತ , ಬೇಧರಹಿತ ಹಾಗೂ ರಾಷ್ಟ್ರ ಭಕ್ತಿ ಸಂಕಲ್ಪತವಾದ ಸಮಾಜವೇ ಪಂಚಮಸಾಲಿ ಸಮಾಜವಾಗಿದೆ. ಜನಸಂಖ್ಯೆಯಲ್ಲಿ ದೊಡ್ಡದಾದರೂ ಸಹ ಆರ್ಥಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಅತ್ಯಂತ ಹಿಂದುಳಿದ ಸಮಾಜವಾಗಿದೆ.
ಕೃಷಿಯನ್ನು ಕುಲ ಕಾಯಕವನ್ನಾಗಿಸಿಕೊಂಡಿರುವ ಈ ಸಮಾಜ ಅತಿವೃಷ್ಟಿ ಅನಾವೃಷ್ಟಿ, ಹಾಗೂ ಹಾವಮಾನದ ವೈಪರೀತ್ಯದಿಂದಾಗಿ ಮಳೆ ಬೆಳೆ ಹಾಗೂ ಸೂಕ್ತ ಬೆಲೆ ಇಲ್ಲದೇ ಸರ್ವದೃಷ್ಟಿಯಿಂದಲೂ ಹಿಂದುಳಿದಿದೆ.
ಈಗಾಗಲೇ ಅನೇಕ ನಮ್ಮ ಸಹೋದರ ಸಮಾಜಗಳಿಗೆ 2 ಎ ಮೀಸಲಾತಿಯನ್ನು ನೀಡಿದ್ದಾರೆ. ಆದರೆ  ಇದುವರೆಗೂ ಸರಕಾರದ ಯಾವುದೇ ಸೌಲಭ್ಯ ಹಾಗೂ ಸವಲತ್ತುಗಳು ಪಡೆಯದೇ ಸಮಾಜ ವಂಚಿತಗೊಂಡಿದೆ. ಈ ಮೇಲಿನ ಅನೇಕ ಕಾರಣಗಳಿಂದ 1994ರಲ್ಲಿ ಅಂದಿನ ಸಮಾಜದ ರಾಜ್ಯಾಧ್ಯಕ್ಷರಾಗಿದ್ದ ಅಂಗೈಕ್ಯ ಎಸ್ ಆರ್ ಕಾಶಪ್ಪನವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ನಡೆದ ಸಮಾವೇಶದಲ್ಲಿ ಮೊದಲ ಬಾರಿಗೆ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರಿಗೆ 2 ಎ ಮೀಸಲಾತಿ ಒದಗಿಸುವಂತೆ ಒತ್ತಾಯಿಸಿತು.
2003 ರಲ್ಲಿ ಅಂದಿನ ಕೇದ್ರ ಸಚಿವರಾದ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ನಿಯೋಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಮೀಸಲಾತಿಗೆ ಮನವಿ ಮಾಡಿತು. ಅಂದಿನಿಂದ ಇಂದಿನವರೆಗೂ ಎಲ್ಲಾ ಸರ್ಕಾರಗಳಿಗೆ ಮನವಿ ಕೊಟ್ಟರು ನಮ್ಮ ಮನವಿಗೆ ಇದುವರೆಗೂ ನಿರೀಕ್ಷಿತ ಫಲ ದೊರೆಯಲಿಲ್ಲ.
2008ರಲ್ಲಿ ಅಂಗಾಯತಧರ್ಮ ಕ್ಷೇತ್ರ ಕೂಡಲಸಂಗಮದಲ್ಲಿ ಸ್ಥಾಪಿತವಾದ ಅಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಮಹಾಪೀಠದ ಪೀಠಾರೋಹಣಗೈದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಹಳ್ಳಿಗೆ ಏಕ ರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ರಾಜ್ಯ ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಂಚರಿಸಿ ಸಮಾಜದ ಕಷ್ಟ ಕಾರ್ಪಣ್ಯಗಳನ್ನು ಅರ್ಥ ಮಾಡಿಕೊಂಡು 2012 ಡಿಸೆಂಬರ್ 7 ರಂದು ಇತಿಹಾಸದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಬೀದಿಗಿಳಿದು ಹೋರಾಡಲು ಯೋಜನೆ ರೂಪಿಸಿದರು. ಪ್ರಥಮ ಬೃಹತ್ ಪಾದಯಾತ್ರೆಯನ್ನು ಕೈಗೊಂಡು ಹಾಗೂ ಉತ್ತರಕರ್ನಾಟಕದ ಶಕ್ತಿ ಕೇಂದ್ರ ಸುವರ್ಣ ವಿಧಾನಸೌಧದ ಪ್ರಥಮ ಅಧಿವೇಶನಕ್ಕೆ ಪ್ರಥಮ ಬಾರಿಗೆ ಸಮಾಜ ಬಾಂಧವರ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಯಿತು.
ಜಗದ್ಗುರುಗಳ ಹೋರಾಟದ ಗಂಭೀರತೆಯನ್ನು ಅರ್ಥಮಾಡಿಕೊಂಡ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರವರು ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ಸಂಪುಟದರ್ಜೆಯ ಉಪ ಸಮಿತಿಯನ್ನು ರಚಿಸಿದರು.
ಸಂಪುಟ ಉಪ ಸಮಿತಿಯ ಎಲ್ಲಾ ಸಚಿವರು 42 ಅಂಗಾಯತ ಉಪ ಸಮಾಜಗಳ ಜೊತೆಗೆ ಪಂಚಮಸಾಲ ಸಮಾಜಕ್ಕೂ 2 ಏ ಮೀಸಲಾತಿಯನ್ನು ಒದಗಿಸಬೇಕೆಂದು ಶಿಫಾರಸ್ಸು ಮಾಡಿತು.
ಆದರೆ ಸರ್ಕಾರದ ಇಚ್ಚಾಶಕ್ತಿಯ ಕೊರತೆಯಿಂದಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿಲ್ಲ. ಬಂಧುಗಳೇ ನಾವು ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಾಗೂ ಅಸ್ತಿತ್ವಕ್ಕಾಗಿ ಹೋರಾಡದೇ ಇದ್ದರೆ ಸರ್ಕಾರಗಳಿಗೆ ನಮ್ಮ ಕೂಗು ಕೇಳಸುವುದೇ ಇಲ್ಲ.ಆದ್ದರಿಂದ ಮತ್ತೆ  ಮತ್ತೆ ಎರಡನೇ ಹಂತದ ಚಳವಳಿಗೆ ಅಂದರೆ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದರು.
  ಬೀದಿಗಿಳಿದು ಪ್ರತಿಭಟಿಸುವುದಕ್ಕಿಂತ ಕೊರೋನ ಸೋಂಕಿನ ಕಾರಣದಿಂದ ಸತ್ಯಾಗ್ರಹದ ಮೂಲಕ ಸರ್ಕಾರದ ಗಮನ ಸೆಳೆಯಲು ಹಾಗೂ ಹಕ್ಕನ್ನು ಪಡೆಯಲು ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.ಇದರೊಂದಿಗೆ ಉಳಿದ 42 ಬಡ ಅಂಗಾಯತ ಉಪ ಸಮಾಜಕ್ಕೂ ಮೀಸಲಾತಿ ಒದಗಿಸುವಂತೆ ಒತ್ತಾಯಿಸಲಾಗುವುದು. ಓ ನನ್ನ ಬಂಧುಗಳೇ , ಪ್ರತಿಯೊಬ್ಬನ ಕುಲ ಬಂಧುವಿನ ಮೇಲೆಯೂ ಸಮಾಜದ ಋಣ ಭಾರ ಯಾವುದಾದರೂ ರೂಪದಲ್ಲಿ ಇದ್ದೆ ಇದೆ.ಸಮಾಜದ ಋಣವನ್ನು ತೀರಿಸುವ ಸುವರ್ಣಾವಕಾಶವೇ ಪಂಚಮಸಾಲಿ ಮೀಸಲಾತಿ ಹೋರಾಟ ಎಂದರು.

Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ