ಮುಂಬೈ(ಸೆ.01) ಮುಂಬರುವ 2022ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ 2 ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಳ್ಳುವ ಸಾಧ್ಯತೆಯಿದ್ದು, ಇದರಿಂದ ಬಿಸಿಸಿಐ 5,000 ಕೋಟಿ ರುಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ. ಒಂದೊಮ್ಮೆ ಹೊಸ ಫ್ರಾಂಚೈಸಿಗಳು ಅಸ್ತಿತ್ವಕ್ಕೆ ಬಂದಲ್ಲಿ, ಮುಂದಿನ ಆವೃತ್ತಿಯಲ್ಲಿ 10 ತಂಡಗಳು ಪಂದ್ಯಾವಳಿ ಸ್ಪರ್ಧೆಗಿಳಿಯಲಿವೆ. 15ನೇ ಆವೃತ್ತಿಯ ಐಪಿಎಲ್‌ಗೆ ಪಾಲ್ಗೊಳ್ಳಲು ಇಚ್ಚಿಸುವವರು 10 ಲಕ್ಷ ಪಾವತಿ ಮಾಡಿ ಯಾವುದೇ ಕಂಪನಿ ಬಿಡ್‌ನ ದಾಖಲೆಗಳನ್ನು ಖರೀದಿಸಬಹುದಾಗಿದೆ. ಈ ಮೊದಲು ಹೊಸ ತಂಡಗಳಿಗೆ 1,700 …
Read More »ಅಫ್ಘಾನಿಸ್ತಾನದ ರಕ್ಷಣೆಗೆ ನೀಡಿದ್ದ ಉಪಕರಣಗಳು ಉಗ್ರರ ಕೈವಶವಾಗದಂತೆ ನೋಡಿಕೊಂಡಿದೆ.
ವಾಷಿಂಗ್ಟನ್(ಸೆ.01): ತಾಲಿಬಾನ್ ಉಗ್ರರ ಜತೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಅನುಗುಣವಾಗಿ ನಿಗದಿತ ಗಡುವಿನೊಳಗೆ ಅಫ್ಘಾನಿಸ್ತಾನವನ್ನು ತೊರೆದಿರುವ ಅಮೆರಿಕ, ಅದಕ್ಕೂ ಮುನ್ನ ಹಲವು ಮಿಲಿಟರಿ ಉಪಕರಣಗಳನ್ನು ನಾಶ ಮಾಡಿ ಜಾಗ ಖಾಲಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ತನ್ಮೂಲಕ ತಾನು ಅಫ್ಘಾನಿಸ್ತಾನದ ರಕ್ಷಣೆಗೆ ನೀಡಿದ್ದ ಉಪಕರಣಗಳು ಉಗ್ರರ ಕೈವಶವಾಗದಂತೆ ನೋಡಿಕೊಂಡಿದೆ. ಇದರಿಂದ ತಾಲಿಬಾನ್‌ಗೆ ಭಾರಿ ಹಿನ್ನಡೆಯಾಗಿದೆ. ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 73 ವಿಮಾನಗಳನ್ನು ಅಮೆರಿಕ ಸಿಬ್ಬಂದಿ ನಿಷ್ಕಿರಯಗೊಳಿಸಿದ್ದಾರೆ. …
Read More »ಸಿಎಂ ಬೊಮ್ಮಾಯಿ ಬಿಜೆಪಿ ಪಂಜರದಲ್ಲಿದ್ದಾರಾ?: ಕಟೀಲ್ ಹೇಳಿದ್ದಿಷ್ಟು
ಬೆಂಗಳೂರು(ಸೆ.01): ಬಜೆಟ್‌ನಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮಗಳು ಕಾಲಮಿತಿಯಲ್ಲಿ ಅನುಷ್ಠಾನವಾಗದೆ ವಿಳಂಬವಾಗುತ್ತಿರುವುದಕ್ಕೆ ಸಿಡಿಮಿಡಿಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಕಾಸಸೌಧದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಸರಿಯಾಗಿ ತೊಡಗಿಸಿಕೊಳ್ಳದಿರುವುದಕ್ಕೆ ಗರಂ ಆದರು. ಜನರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತೇವೆ. ಅವುಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನು ಹೊಣೆ ಮಾಡಿ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ದೂರುಗಳು …
Read More »ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸೂಚನೆ
ನವದೆಹಲಿ (ಸೆ.01): ಬಹುನಿರೀಕ್ಷಿತ ಕರ್ನಾಟಕದ ಮೇಕೆದಾಟು ಯೋಜನೆಗೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಯೋಜನೆಗೆ ತಮಿಳುನಾಡು, ಕೇರಳ ಸೇರಿ ಎಲ್ಲಾ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಮುಂದಿನ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವ ಸಾಧ್ಯತೆ ಇದೆ. ಹಾಗೆಯೇ ತಮಿಳುನಾಡು ಕೈಗೊಂಡಿರುವ ಗುಂಡಾರ್ ನದಿ ನೀರು ಜೋಡಣೆಗೆ ಕರ್ನಾಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಇನ್ನು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಾಧಿಕಾರದ ಅಧ್ಯಕ್ಷ …
Read More »ಅಮೆರಿಕ ಸೇನೆ ಅಷ್ಘಾನಿಸ್ತಾನದಿಂದ ಹೊರಟಿರುವ ಬೆನ್ನಲ್ಲೇ,
ಲಂಡನ್(ಸೆ.01): ಅಮೆರಿಕ ಸೇನೆ ಅಷ್ಘಾನಿಸ್ತಾನದಿಂದ ಹೊರಟಿರುವ ಬೆನ್ನಲ್ಲೇ, ಇತ್ತ ತಾಲಿಬಾನ್ ಉಗ್ರರು ಈ ಹಿಂದೆ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳ ಪರ ಕೆಲಸ ಮಾಡಿದ್ದಾರೆ ಎನ್ನಲಾದ ಆರೋಪಿಗಳ ಮನೆಗಳ ಮೇಲೆ ತಾವೇ ಶರಣಾಗಬೇಕು. ಇಲ್ಲದಿದ್ದರೆ ನಿಮಗೆ ಸಾವಿನ ಶಿಕ್ಷೆ ನೀಡಬೇಕಾಗುತ್ತದೆ ಎಂಬ ಭಯಾನಕವಾದ ‘ಬೆದರಿಕೆ ಪತ್ರ’ ಅಂಟಿಸುತ್ತಿದ್ದಾರೆ. ಹಿಂದೆ ತಾಲಿಬಾನ್ ಉಗ್ರರನ್ನು ಶೋಧಿಸಲು ಅಮೆರಿಕದ ಪಡೆಗಳಿಗೆ ನೆರವು ನೀಡಿದ್ದಾರೆ ಎನ್ನಲಾದ ಆರೋಪಿಗಳನ್ನು ಉದ್ದೇಶಿಸಿ ಈ ಪತ್ರದಲ್ಲಿ ನೀವು ನ್ಯಾಟೋ ಪಡೆಗಳ …
Read More »ಅಭಿವೃದ್ಧಿ ಕಾರ್ಯಗಳೇ ನಮ್ಮ ಸಾಧನೆಯನ್ನು ಹೇಳುತ್ತವೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಬೆಳಗಾವಿ: ನಗರದ 45ನೇ ವಾರ್ಡ್ ನ ಹಿಂಡಾಲ್ಕೊ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶ್ರೀ ನಾಯ್ಕ್ ಪರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇಂದು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಉಸ್ತುವಾರಿ ಸಚಿವ ಹಾಗೂ ಫೀರೋಜ್ ಸೇಠ್ ಶಾಸಕರಾಗಿದ್ದ ಸಂದರ್ಭದಲ್ಲಿ ಸಮೀಪದ ಬಸವನಕೊಳ್ಳ ಅರಣ್ಯಭೂಮಿಯಲ್ಲಿ ನೀರಿನ ಶುದ್ಧೀಕರಣ ಘಟಕ ನಿರ್ಮಿಸುವ ಮೂಲಕ 45ನೇ ವಾರ್ಡ್ ಸೇರಿ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ …
Read More »ಲಾರಿ ದುರಸ್ತಿ ಮಾಡುವ ವೇಳೆ ಪಿಕಪ್ ಹರಿದು ಮೂವರು ಸಾವು
ಮಂಗಳೂರು: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಲಾರಿ ರಿಪೇರಿ ಮಾಡುತ್ತಿದ್ದ ವೇಳೆ ಪಿಕಪ್ ವಾಹನ ಹರಿದು ಮೂವರು ಮೃತಪಟ್ಟಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ಸೋಮವಾರ ನಡೆದಿದೆ. ಬೆಂಗಳೂರಿನ ಅಬ್ದುಲ್ ರಹಿಮಾನ್ (23), ಮಧು (33) ಮತ್ತು ಅಬ್ಸಾನ್ (33) ಮೃತರು. ಲಾರಿಯ ಚಾಲಕ ಶಿವಮೊಗ್ಗದ ಆಸಿಫ್ ಲಾರಿಯ ಒಳಗಡೆ ಕುಳಿತಿದ್ದರಿಂದ ಪಾರಾಗಿದ್ದಾರೆ. ಆಂಧ್ರಪ್ರದೇಶ ಮೂಲದ ಲಾರಿಯೊಂದು ಹೆದ್ದಾರಿಯಲ್ಲಿ ಕೆಟ್ಟು ನಿಂತಿತ್ತು. ಲಾರಿ ರಿಪೇರಿ …
Read More »ಶೂ ಹಾಕಿಕೊಂಡೇ ದೇಗುಲ ಪ್ರವೇಶಿಸಿ ದೇವರ ದರ್ಶನ ಪಡೆದ ಸಚಿವ ಪ್ರಭು ಚೌಹಾಣ್
ಹಾವೇರಿ:ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಎಡವಟ್ಟು ಮಾಡಿಕೊಂಡಿದ್ದಾರೆ.ದೇಗುಲದ ಒಳಗೇ ಶೂ ಹಾಕಿಕೊಂಡು ದೇವರ ದರ್ಶನ ಪಡೆದಿದ್ದಾರೆ.ಹಾವೇರಿ ಜಿಲ್ಲೆಯ ಶಿಗ್ಗಾವಿಯ ಬಂಕಾಪುರ ಪಟ್ಟಣದಲ್ಲಿ ನಡೆದಿರುವ ಘಟನೆ . ಬಂಕಾಪುರದ ಪ್ರಸಿದ್ಧ ನಗರೇಶ್ವರ ದೇವಾಲಯದ ಒಳಗೆ ಶೂ ಹಾಕಿಕೊಂಡು ಹೋಗಿ ದೇವರ ದರ್ಶನ ಪಡೆದ ಚೌಹಾಣ್ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಮುಖ್ಯಮಂತ್ರಿಯವರ ಆದೇಶದ ಮೇರೆಗೆ ಜಿಲ್ಲೆಯು ಪ್ರವಾಸ ಕೈಗೊಂಡಿರುವ ಪಶು ಸಂಗೋಪನೆ ಸಚಿವರಾದ ಪ್ರಭು ಚೌಹಾಣ್ ರವರು ಹಾವೇರಿ ಪ್ರವಾಸದಲ್ಲಿ ಇದ್ದಾರೆ. ಈ ಮಧ್ಯೆ …
Read More »ಹುಣಸೂರು: ಮರದ ದಿಮ್ಮಿ ತುಂಬಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಡಿಕ್ಕಿ, ಬಸ್ ಚಾಲಕನಿಗೆ ಗಂಭೀರ ಗಾಯ
ಹುಣಸೂರು: ರಸ್ತೆ ಪಕ್ಕದಲ್ಲಿ ನಿಂತಿದ್ದ ಮರದ ದಿಮ್ಮಿಗಳನ್ನು ತುಂಬಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಬಸ್ ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಕಲ್ಬೆಟ್ಟ ಬಳಿ ನಡೆದಿದೆ. ಬಸ್ ಚಾಲಕ ಎಚ್.ಬಿ.ಮಹದೇವ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಮರದ ದಿಮ್ಮಿಗಳನ್ನು ತುಂಬಿದ್ದ ಲಾರಿ ಹುಣಸೂರಿನ ಕಡೆ ಹೊರಟಿತ್ತು. ಈ ವೇಳೆ ಕಲ್ಬೆಟ್ಟದ ಬಳಿ ನಿಂತಿತ್ತು. ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ …
Read More »ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ
ಒಂದುವರ್ಷದಿಂದ ಇವರು ಬಾಯಿ ಮುಚ್ಚಿಕೊಂಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಸುರೇಶ್ ಅಂಗಡಿ ಅವರ ಅಮಾನವೀಯ ಅಂತ್ಯಸಂಸ್ಕಾರ ಮಾಡಿತು ಎಂಬ ಡಿಕೆಶಿ ಆರೋಪ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸನ್ಮಾನ್ಯ ಸುರೇಶ ಅಂಗಡಿ ಕೊರೊನಾದಿಂದ ಮೃತಪಟ್ಟು ಒಂದು ವರ್ಷವಾಯಿತು. ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು. ಇವರು ಡಿ.ಕೆ ಶಿವಕುಮಾರ್ …
Read More »
Laxmi News 24×7