Breaking News

ರಾಷ್ಟ್ರೀಯ

ಬಿಜೆಪಿಗೆ 2024ರವರೆಗೂ ಜೆ.ಪಿ.ನಡ್ಡಾ ಅಧ್ಯಕ್ಷ?

ನವದೆಹಲಿ: 2020ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ಜೆ.ಪಿ.ನಡ್ಡಾ ಅವರು ಇನ್ನೂ 2 ವರ್ಷಗಳ ಕಾಲ ಅದೇ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ನಿಗದಿಯಂತೆ 2023ರ ಜ.20ರಂದು ನಡ್ಡಾ ಅವರ 3 ವರ್ಷಗಳ ಅಧಿಕಾರಾವಧಿ ಪೂರ್ಣಗೊಳ್ಳಲಿದೆ. ಆದರೆ, ಮುಂದಿನ ಲೋಕಸಭೆ ಚುನಾವಣೆಗೆ ಇನ್ನು ಎರಡೇ ವರ್ಷಗಳು ಬಾಕಿ ಇವೆ. ಅಲ್ಲದೇ, ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳೂ ನಡೆಯಲಿವೆ. ಹೀಗಾಗಿ, ನಡ್ಡಾ ಅವರ ಅಧಿಕಾರಾವಧಿಯನ್ನು 2024ರ ಲೋಕಸಭೆ ಚುನಾವಣೆಯವರೆಗೆ ವಿಸ್ತರಿಸಲು ಬಿಜೆಪಿ …

Read More »

ಗುಂಪು ಘರ್ಷಣೆ; ಬಾಲಕನಿಗೆ ಚೂರಿ ಇರಿತ

ಬೆಳಗಾವಿ: ಇಲ್ಲಿನ ಅನಂತಶಯನ ಗಲ್ಲಿಯಲ್ಲಿ ಸೋಮವಾರ ರಾತ್ರಿ ಯುವಕರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಚೂರಿ ಇರಿತದಿಂದ ಒಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಕ್ಯಾಂಪ್‌ ಪ್ರದೇಶದ ನಿವಾಸಿ ಫರಾನ್‌ ಧಾರವಾಡಕರ (15) ಚೂರಿ ಇರಿತಕ್ಕೆ ಒಳಗಾದವ. ಈತ ಇಸ್ಲಾಮಿಯಾ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ‌ಗಾಯಗೊಂಡ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಫರಾನ್‌ ಹಾಗೂ ಇಬ್ಬರು ಸ್ನೇಹಿತರು ಬೈಕ್‌ ಮೇಲೆ ಹೊರಟಿದ್ದರು. ನಗರದ ಅಂಬಾ ಭವಾನಿ ಮಂದಿರದ ಹತ್ತಿರ 10 ಯುವಕರ …

Read More »

ಕೇವಲ 10 ಸೆಕೆಂಡ್ ನಲ್ಲಿ ನಿಮ್ಮನ್ನು ಮುಗಿಸ್ತೀವಿ; RSS ಪ್ರಮುಖರಿಗೆ SDPI ಮುಖಂಡನ ಧಮ್ಕಿ

ತಿರುವನಂತಪುರಂ: ಪಿಎಫ್‌ಐ ಹಾಗೂ ಎಸ್ ಡಿ ಪಿ ಐ ಮುಖಂಡರ ಮನೆ ಹಾಗೂ ಕಚೇರಿಗಳ ಮೇಲೆ ಎನ್‌ಐಎ ದಾಳಿ ನಡೆಸಿ ಹಲವರನ್ನು ಬಂಧಿಸಿರುವ ಬೆನ್ನಲ್ಲೇ ಕೇರಳದಲ್ಲಿ ಎಸ್ ಡಿ ಪಿ ಐ ಹಾಗೂ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಅಲ್ಲದೇ ಆರ್ ಎಸ್ ಎಸ್ ಮುಖಂಡರಿಗೆ ಬೆದರಿಕೆ ಹಾಕಿದ್ದಾರೆ. ಎನ್ ಐಎ ದಾಳಿ ಖಂಡಿಸಿ ಎರ್ನಾಕುಲಂನಲ್ಲಿ ಪ್ರತಿಭಟನೆ ನಡೆಸಿರುವ ಎಸ್ ಡಿ ಪಿ ಐ ಸಂಘಟನೆ, ಕೇಂದ್ರ ಸರ್ಕಾರ ಹಾಗೂ …

Read More »

ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ: ಎಚ್ಚರಿಕೆ ವಹಿಸಲು ಪಶುಪಾಲನಾ ಇಲಾಖೆ ಸಲಹೆ

ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ: ಎಚ್ಚರಿಕೆ ವಹಿಸಲು ಪಶುಪಾಲನಾ ಇಲಾಖೆ ಸಲಹೆ ಬೆಳಗಾವಿ :ಜಿಲ್ಲೆಯ ಬೆಳಗಾವಿ ತಾಲೂಕಿನ ಜಾನುವಾರುಗಳಲ್ಲಿ ಚರ್ಮಗಂಟು ರೋಗ (ಲಂಪಿ ಸ್ಕನ್ ಡಿಸೀಜ್)ಸಾಂಕ್ರಾಮಿಕ ಕಾಯಿಲೆ ಕಂಡು ಬಂದಿದ್ದು, ಇದು ಕ್ಯಾಪ್ರಿಸಾಕ್ಸ್ ಎಂಬ ವೈರಾಣುವಿನಿಂದ ಬರುತ್ತದೆ. ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ದನಗಳಿಗೆ ಕಚ್ಚುವ ಕೀಟಗಳಿಂದ(ಸೊಳ್ಳೆ,ನೊಣ,ಉಣ್ಣೆ ಇತ್ತಯಾದಿ) ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ …

Read More »

ವೈಭವದ ನಾಡಹಬ್ಬಕ್ಕೆ ಇಂದು ರಾಷ್ಟ್ರಪತಿ ಚಾಲನೆ: ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟಿಸಲಿರುವ ದ್ರೌಪದಿ ಮುರ್ಮು

ಮೈಸೂರು: ಸಾಂಸ್ಕೃತಿಕ ಸಿರಿ ಮತ್ತು ಧಾರ್ವಿುಕ ಐಸಿರಿಯ ಸಮ್ಮಿಲನವಾದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವೊಂದು ಸುಂದರ ದೃಶ್ಯಕಾವ್ಯ. ವರ್ಷಕ್ಕೊಮ್ಮೆ ಬರುವ ಈ ರಮಣೀಯ ಘಳಿಗೆಗೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೋವಿಡ್ ಸಂಕ್ರಮಣದಿಂದ ಕಳೆದ 2 ವರ್ಷ ಸರಳವಾಗಿ ನಡೆದಿದ್ದ ಉತ್ಸವದಲ್ಲಿ ಈ ಬಾರಿ ಸಡಗರ ಮೇಳೈಸಲಿದೆ. ಸೆ. 26ರಂದು ನಾಡಹಬ್ಬದ ಅಂಕದ ಪರದೆ ಗರಿ ಬಿಚ್ಚಲಿದೆ. ಮೊದಲ ಬಾರಿಗೆ ರಾಷ್ಟ್ರಪತಿಯಿಂದ ಚಾಲನೆ: ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ …

Read More »

ಕಮಲದ ಸುತ್ತಲಿರುವ ಕೆಸರನ್ನು “ಕೈ” ಯಿಂದ ಸ್ವಚ್ಛಗೊಳಿಸಲು ಸಾಧ್ಯವಿಲ್ಲ: ಕೇಜ್ರಿವಾಲ್

ಅಹಮದಾಬಾದ್‌ : ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಗುಜರಾತ್‌ನಲ್ಲಿ 80% ಖಾಸಗಿ ಉದ್ಯೋಗಗಳು ಗುಜರಾತ್‌ನ ಜನರಿಗೆ ಮೀಸಲಾಗಿರುತ್ತವೆ ಎಂದು ಆಪ್ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ್ದಾರೆ.   ಟೌನ್‌ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಜರಾತ್‌ನ ಯುವ ಸಮುದಾಯದೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಜ್ರಿವಾಲ್, ‘ಕಮಲ’ದ ಸುತ್ತ ಸಾಕಷ್ಟು ‘ಕೆಸರು’ ಬಿದ್ದಿದೆ. ಆ ಕೆಸರನ್ನು “ಕೈ” ಯಿಂದ ಸ್ವಚ್ಛಗೊಳಿಸಲು ಸಾಧ್ಯವಿಲ್ಲ, ಅದನ್ನು “ಪೊರಕೆ ” ಯಿಂದ ಸ್ವಚ್ಛಗೊಳಿಸಬೇಕಾಗುತ್ತದೆ …

Read More »

ದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ*

  *ಗೋಕಾಕ :* ಬಿಜೆಪಿಯು ಅತ್ಯಂತ ಪ್ರಬಲ ಪಕ್ಷವಾಗಿ ಬೆಳೆಯಲು ಪಂ. ದೀನದಯಾಳ ಉಪಾಧ್ಯೆ ಅವರ ಕೊಡುಗೆ ಅನನ್ಯವಾದದ್ದು, ಪಂ. ದೀನದಯಾಳ ಉಪಾಧ್ಯೆ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು ಅವುಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಭಾನುವಾರದಂದು ಅರಭಾವಿ ಬಿಜೆಪಿ ಮಂಡಲ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಆಯೋಜಿಸಿದ್ದ ಪಂ. ದೀನದಯಾಳ ಉಪಾಧ್ಯೆ ಅವರ 106ನೇ ಜನ್ಮದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ …

Read More »

ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. 25 ಕೋಟಿ ರೂ. ಲಾಟರಿ ಗೆದ್ದಿದ್ದರೂ ಕಂಗಾಲಾಗಿ ಹೋಗಿರುವ ಆಟೋ ಚಾಲಕ!

ತಿರುವನಂತಪುರಂ: ಕಳೆದ ವಾರ ಲಕ್ಕಿ ಡ್ರಾ ಮೂಲಕ 25 ಕೋಟಿ ಬಹುಮಾನ ಗೆದ್ದಿದ್ದ, ಆಟೋ ಚಾಲಕ ಕಂಗಾಲಾಗಿ ಹೋಗಿದ್ದಾನೆ. ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದ ಆಟೋ ಚಾಲಕ ಅನೂಪ್, ಮಲೇಷ್ಯಾಕ್ಕೆ ತೆರಳಿ ದುಡಿಯಲು ದಾರಿ ಕಂಡು ಕೊಂಡಿದ್ದ. ಇನ್ನೇನು ಮಲೇಷ್ಯಾಗೆ ತೆರಳಬೇಕು ಅನ್ನುವಷ್ಟರಲ್ಲಿ ಲಾಟರಿ ಗೆದ್ದಿರುವುದು ತಿಳಿದಿದೆ.   ಲಾಟರಿಯಲ್ಲಿ ಕೋಟಿ ಬಹುಮಾನ ಬಂದಿದೆ. ಇನ್ನು ಮುಂದೆ ನೆಮ್ಮದಿಯ ಬದುಕನ್ನು ಕಾಣಬಹುದು ಎಂದು ನಿರ್ಧರಿಸಿದ್ದರು. ಆದರೆ ಆಗಿದ್ದೇ ಬೇರೆ. ಬಹುಮಾನ ಬಂದಿರುವುದು ಗೊತ್ತಾಗುತ್ತಿದ್ದಂತೆ …

Read More »

ನಕಲಿ ಪ್ರಮಾಣಪತ್ರ ನೀಡಿ ಸರ್ಕಾರಿ ಉದ್ಯೋಗ ಪಡೆದವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್

ಬೆಂಗಳೂರು : ನಕಲಿ ಪ್ರಮಾಣ ಪತ್ರ ನೀಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೌಕರಿ ಪಡೆದವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ನಕಲಿ ಪ್ರಮಾಣ ಪತ್ರ ನೀಡಿ ಉದ್ಯೋಗ ಪಡೆದ 76 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.   ವಿಧಾನಪರಿಷತ್ ನಲ್ಲಿ ಪಿ.ಆರ್. ರಮೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಕಲಿ ಪ್ರಮಾಣ ಪತ್ರ ನೀಡಿ ರಾಜ್ಯ …

Read More »

ಮುರುಘಾ ಶರಣರಿಗೆ ಆಂಜಿಯೋಗ್ರಾಂ ಪರೀಕ್ಷೆ: ಆರೋಗ್ಯ ಸ್ಥಿರ

ಶಿವಮೊಗ್ಗ: ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರಿಗೆ ಕೊರೋನರಿ ಆಂಜಿಯೋಗ್ರಾಂ ಪರೀಕ್ಷೆ ನಡೆಸಲಾಗಿದೆ. ವಿರೂಪಾಕ್ಷಪ್ಪ ತಿಳಿಸಿದರು. ಪ್ರೌಢಶಾಲೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಶರಣರನ್ನು ನ್ಯಾಯಾಲಯದ ಆದೇಶದಂತೆ ಹೃದಯ ತಪಾಸಣೆಗಾಗಿ ಬುಧವಾರ ರಾತ್ರಿ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಕರೆತಂದು ಇಲ್ಲಿನ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಶಿವಮೂರ್ತಿ ಶರಣರಿಗೆ ಆಸ್ಪತ್ರೆಯಲ್ಲಿ ನೀಡಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ ಡಾ.ವಿರೂಪಾಕ್ಷಪ್ಪ, ‘ಶರಣರ ಆರೋಗ್ಯದ …

Read More »