Breaking News

ರಾಷ್ಟ್ರೀಯ

370ನೇ ವಿಧಿ ರದ್ದತಿ ವಿಚಾರಣೆ: ಮುಖ್ಯ ಅರ್ಜಿದಾರ, ಸಂಸದ ಅಕ್ಬರ್​ ಸಂವಿಧಾನ ನಿಷ್ಠೆ ಸಾಬೀತಿಗೆ ಕೋರ್ಟ್​ ಸೂಚನೆ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370 ನೇ ವಿಧಿ ರದ್ದತಿ ಬಗ್ಗೆ ಸುಪ್ರೀಂಕೋರ್ಟ್​ ನಿತ್ಯ ವಿಚಾರಣೆ ನಡೆಸುತ್ತಿದ್ದು, ಮುಖ್ಯ ಅರ್ಜಿದಾರರಾಗಿರುವ ಬಾರಾಮುಲ್ಲಾ ಕ್ಷೇತ್ರದ ಸಂಸದ ಮುಹಮದ್​ ಅಕ್ಬರ್​ ಲೋನ್​ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಖಂಡಿಸಿ, ದೇಶದ ಸಂವಿಧಾನದ ಮೇಲೆ ಇರುವ ನಿಷ್ಠೆಯ ಬಗ್ಗೆ ಅಫಿಡವಿಟ್​ ಸಲ್ಲಿಸಲು ಕೋರ್ಟ್​ ಸೂಚಿಸಿದೆ.   15ನೇ ದಿನದ ವಿಚಾರಣೆಯಲ್ಲಿ ಮುಖ್ಯ ಅರ್ಜಿದಾರ ಅಕ್ಬರ್​ ಲೋನ್​ ವಿರುದ್ಧವೇ ಭಾರತ ವಿರೋಧಿ …

Read More »

ಚುನಾವಣಾ ಅಕ್ರಮ ನಡೆಸಿ ಗೆದ್ದ ಆರೋಪ : ಹೆಚ್​ಡಿ ರೇವಣ್ಣಗೆ ಹೈಕೋರ್ಟ್ ಸಮನ್ಸ್

ಬೆಂಗಳೂರು : ಚುನಾವಣಾ ಅಕ್ರಮಗಳನ್ನು ನಡೆಸಿ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರು ಆಯ್ಕೆಯಾಗಿದ್ದು, ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಸಮನ್ಸ್ ಜಾರಿ ಮಾಡಿ ಆದೇಶಿಸಿದೆ. ಹೊಳೆನರಸೀಪುರದ ಪರಾಜಿತ ಅಭ್ಯರ್ಥಿ ಹಾಗೂ ವಕೀಲ ದೇವರಾಜೇಗೌಡ ಎಂಬುವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ, ರೇವಣ್ಣಗೆ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ಕೂಡ …

Read More »

ರಾಜ್ಯಪಾಲರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿ: ಪ್ರಕರಣ ದಾಖಲು

ಬೆಂಗಳೂರು: ಸಾಮಾನ್ಯವಾಗಿ ರಾಜಕೀಯ ನಾಯಕರು, ಪೊಲೀಸ್​ ಅಧಿಕಾರಿಗಳು, ಸಿನಿಮಾ ತಾರೆಗಳು ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸುತ್ತಿದ್ದ ಸೈಬರ್ ವಂಚಕರು ಇದೀಗ ರಾಜ್ಯಪಾಲರ ಹೆಸರಿನಲ್ಲಿಯೂ ನಕಲಿ ಖಾತೆ ತೆರೆದಿರುವ ವಿಚಾರ ಬೆಳಕಿಗೆ ಬಂದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ರ ಫೋಟೋ, ಹೆಸರು ಬಳಸಿಕೊಂಡು ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದ್ದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ. ಕರ್ನಾಟಕ ಪ್ರದೇಶ …

Read More »

ಛಾಯಾಗ್ರಾಹಕನ ವಿರುದ್ಧ ಹಾರ್ಡ್ ಡಿಸ್ಕ್ ಕೊಡದೇ ವಂಚನೆ ಪ್ರಕರಣ: ಆರೋಪ ಅಲ್ಲಗಳೆದ ಸಹ ನಿರ್ಮಾಪಕಿ​

ಬೆಂಗಳೂರು: ಚಿತ್ರೀಕರಣವಾದ ಸಿನಿಮಾ ದೃಶ್ಯಗಳ ಹಾರ್ಡ್ ಡಿಸ್ಕ್ ಕೊಡದೇ, ನಿರ್ಮಾಪಕರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಛಾಯಾಗ್ರಾಹಕನ ವಿರುದ್ಧ ಪ್ರಕರಣ ದಾಖಲಾಗಿದೆ. ‘ಸಮುದ್ರಂ’ ಸಿನಿಮಾದ ನಿರ್ಮಾಪಕಿ ರಾಜಲಕ್ಷ್ಮಿ ನೀಡಿರುವ ದೂರಿನನ್ವಯ ಛಾಯಾಗ್ರಾಹಕ ರಿಷಿಕೇಷ್ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಅನಿತಾ ಭಟ್ ಮುಖ್ಯ ಭೂಮಿಕೆಯಲ್ಲಿರುವ ‘ಸಮುದ್ರಂ’ ಸಿನಿಮಾವನ್ನು ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ಹೆಸರಿನಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. ಈ ಚಿತ್ರಕ್ಕೆ ರಿಷಿಕೇಷ್ ಛಾಯಾಗ್ರಾಹಕನಾಗಿದ್ದು, ರಾಜಲಕ್ಷ್ಮಿ ಎಂಬುವವರು ಬಂಡವಾಳ ಹೂಡಿದ್ದರು. …

Read More »

ಗಣೇಶ ಮತ್ತು ಈದಮಿಲಾದ್ ಹಬ್ಬವನ್ನು ಶಾಂತತೆಯಿಂದ ಆಚರಿಸಿ

ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಭಾಗದ ಸರಹದ್ದಿನಲ್ಲಿ ಗಣೇಶ ಮತ್ತು ಈದ ಮಿಲಾದ ಹಬ್ಬವನ್ನು ಹಿಂದೂ ಮುಸ್ಲಿಂ ಸಮಾಜದವರು ಭಾವಕ್ಯದಿಂದ ಆಚರಿಸ ಬೇಕು ಎಂದು ಯಮಕನಮರ್ಡಿ ಪೋಲಿಸ್ ಠಾಣೆಯ ಇನ್ಸಪೇಕ್ಟರ ರಮೇಶ ಛಾಯಾಗೋಳ ಹೇಳಿದರು. ಅವರು ಇಂದು ಯಮಕನಮರ್ಡಿ ಪೋಲಿಸ್ ಠಾಣೆಯಲ್ಲಿ ಜರುಗಿದ ಶಾಂತತಾ ಸಭೆಯಲ್ಲಿ ಭಾಗವಹಿಸಿ ಮುಂಬರುವ ಸೆಪ್ಟೆಂಬರ್ 19 ರಿಂದ ಗಣೇಶ ಚತುರ್ಥಿ ಮತ್ತು 28 ರಂದು ಜರಗಲಿರುವ ಈದ ಮಿಲಾದ ಹಬ್ಬವನ್ನು ಹಿಂದೂ ಮುಸ್ಲಿಂ ಬಾಂಧವರು ಶ್ರದ್ದಾ …

Read More »

ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಸಂಘಟನೆಗಳು ಬಿಜೆಪಿ & ದಳದವರು ಎಲ್ಲಿ ಹೋಗಿದ್ರಿ: ಡಿ ಕೆ ಶಿ

ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಸಂಘಟನೆಗಳು ಬಿಜೆಪಿ & ದಳದವರು ಎಲ್ಲಿ ಹೋಗಿದ್ರಿ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಪ್ರಶ್ನಿಸಿದ್ದಾರೆ   ನಾವು ಕರ್ನಾಟಕದ ರೈತರ್ ಹಿತರಕ್ಷಣೆಗೆ ಏನು ಮಾಡಬೇಕು ಅದನ್ನು ಮಾಡಿದ್ದೇವೆ ಮೇಕೆದಾಟು ನೀರಿಗಾಗಿ ಯಾರು ಹೋರಾಟ ಮಾಡಿಲ್ಲ ನಾವು ಮಾಡುವಾಗ ಸಂಘಟನೆಗಳು ಬಿಜೆಪಿ & ದಳದವರು ಎಲ್ಲಿ ಹೋಗಿದ್ರಿ ಇವರೆಲ್ಲ ಕಾವೇರಿ ಬಗ್ಗೆ ಮಾತನಾಡುತ್ತಿದ್ದಾರೆ ಯಾಕೆ ಮೇಕೆದಾಟು ಬಗ್ಗೆ ಮಾತನಾಡುತ್ತಿಲ್ಲ ನಮ್ಮ ಅಧಿಕಾರಿಗಳು …

Read More »

ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ.

ಚಿತ್ರದುರ್ಗ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ದುರಂತ ಘಟನೆಯೊಂದು ಸಂಭವಿಸಿದೆ. ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವುದು ತಿಳಿದುಬಂದಿದೆ. ಈ ಅಪಘಾತ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಬಳಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸಪೇಟೆ ಕಡೆಯಿಂದ ತುಮಕೂರಿಗೆ ತೆರಳುತ್ತಿದ್ದ ವೇಳೆ ಕಾರೊಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಈ ದುರಂತ ಘಟನೆಯಲ್ಲಿ …

Read More »

ಸೂಪರ್​ ಸ್ಟಾರ್​’ ರಜನಿಕಾಂತ್‌ಗೆ ರಾಜ್ಯಪಾಲ ಹುದ್ದೆ?

ಮಧುರೈ (ತಮಿಳುನಾಡು): ”ಎಲ್ಲವೂ ದೇವರ ಕೈಯಲ್ಲಿದೆ. ರಜಿನಿ ಅವರಿಗೆ ಇದು (ರಾಜ್ಯಪಾಲರ ಹುದ್ದೆ) ಇಷ್ಟವಿಲ್ಲ. ಆದರೆ, ಬಹುಶಃ ಅವರು ಸಿಕ್ಕರೆ ಹಿಂಜರಿಯುವುದಿಲ್ಲ” ಎಂದು ನಟ ರಜನಿಕಾಂತ್ ಅವರ ಸಹೋದರ ಸತ್ಯನಾರಾಯಣ ರಾವ್ ಹೇಳಿದ್ದಾರೆ. ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಭಾನುವಾರ ನಡೆದ ಎರಡು ಮದುವೆ ಸಮಾರಂಭಗಳಲ್ಲಿ ಭಾಗವಹಿಸಿದ ಬಳಿಕ, ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರ ನೀಡಿದ್ದಾರೆ. ರಜನಿಕಾಂತ್​ಗೆ ರಾಜ್ಯಪಾಲರ ಹುದ್ದೆ?: ”ರಜನಿಕಾಂತ್ ರಾಜಕೀಯಕ್ಕೆ ಬರಲು ಯೋಚಿಸಿಲ್ಲ” ಎಂದು ರಜನಿ ಸಹೋದರ ಸತ್ಯನಾರಾಯಣ ರಾವ್ …

Read More »

‘ಸನಾತನ ಧರ್ಮ’ ಹೇಳಿಕೆಗೆ ನಾನು ಬದ್ಧ, ಯಾವುದೇ ಸವಾಲು ಎದುರಿಸುವೆ: ಉದಯನಿಧಿ ಸ್ಟಾಲಿನ್​

ಚೆನ್ನೈ: ತಮಿಳುನಾಡು ಸಿಎಂ ಸ್ಟಾಲಿನ್​ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ರೋಗಗಳಿಗೆ ಹೋಲಿಸಿ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ‘ತಾನು ನೀಡಿದ ಹೇಳಿಕೆಗೆ ಬದ್ಧವಾಗಿದ್ದು, ಯಾವುದೇ ರೀತಿಯ ಸವಾಲಿಗೆ ಸಿದ್ಧ’ ಎಂದು ಉದಯನಿಧಿ ಹೇಳಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಬರೆದುಕೊಂಡಿರುವ ಯುವ ಸಚಿವ, ಸನಾತನ ಧರ್ಮ ಕೊರೊನಾವೈರಸ್, ಮಲೇರಿಯಾ ಮತ್ತು ಡೆಂಗ್ಯೂ ವೈರಸ್ ಮತ್ತು ಸೊಳ್ಳೆಗಳಿಂದ ಉಂಟಾಗುವ ಜ್ವರವಿದ್ದಂತೆ. ಇಂಥದ್ದನ್ನು ಬೇರು ಸಮೇತ ಕಿತ್ತು ಹಾಕಬೇಕು. ಸನಾತನ ಜಾತಿ …

Read More »

ಬೆಳಗಾವಿ ಜಿಲ್ಲೆಯಲ್ಲಿ 150 ‘ಗ್ರಾಮ ಒನ್’ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ.

ಬೆಳಗಾವಿ : ಜಿಲ್ಲೆಯ ಪ್ರತಿ ಹಳ್ಳಿಯ ಜನರಿಗೆ ಎಲ್ಲಾ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ 150 ‘ಗ್ರಾಮ ಒನ್’ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ. ಬೆಳಗಾವಿ: ಜಿಲ್ಲೆಯ ಪ್ರತಿ ಹಳ್ಳಿಯ ಜನರಿಗೆ ಎಲ್ಲಾ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ 150 ‘ಗ್ರಾಮ ಒನ್’ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ. ನಾಗರಿಕ, ಬ್ಯಾಂಕಿಂಗ್ ಸೇವೆಗಳು, ಆರ್ ಟಿಐ ಸೇರಿದಂತೆ ಗ್ರಾಮ ಮಟ್ಟದಲ್ಲಿಯೇ ಎಲ್ಲಾ ನಾಗರಿಕ ಕೇಂದ್ರೀತ ಚಟುವಟಿಕೆಗಳಿಗಾಗಿ ನೆರವು …

Read More »