Breaking News

ರಾಷ್ಟ್ರೀಯ

ನಾಳೆ ಸಂಭವಿಸಲಿದೆ ‘ಖಗೋಳ ವಿಸ್ಮಯ’ : ಎಲ್ಲೆಲ್ಲಿ ಗೋಚರಿಸಲಿದೆ ವರ್ಷದ ಮೊದಲ ‘ಸೂರ್ಯಗ್ರಹಣ’

ನವದೆಹಲಿ : ಏಪ್ರಿಲ್ 8ರ ನಾಳೆ ಸೂರ್ಯಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಮೊದಲ ಸೂರ್ಯಗ್ರಹಣವಾಗಿದೆ. ವೈಜ್ಞಾನಿಕ ದೃಷ್ಟಿಕೋನದಿಂದ, ಸೂರ್ಯಗ್ರಹಣವು ಕೇವಲ ಖಗೋಳ ಘಟನೆಯಾಗಿದೆ, ಆದರೆ ಧಾರ್ಮಿಕ ದೃಷ್ಟಿಕೋನದಿಂದ ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಗ್ರಹಣ ಸಮಯದಲ್ಲಿ ನಮ್ಮ ಸುತ್ತಲಿನ ಎಲ್ಲವೂ ಪರಿಣಾಮ ಬೀರುತ್ತದೆ. ಸೂರ್ಯಗ್ರಹಣಕ್ಕೂ ಮೊದಲು, ವರ್ಷದ ಮೊದಲ ಚಂದ್ರ ಗ್ರಹಣವು ಮಾರ್ಚ್ 25 ರಂದು ಗೋಚರಿಸಿತು, ಇದು ಭಾರತದಲ್ಲಿ ಗೋಚರಿಸಲಿಲ್ಲ. ವಿಶೇಷವೆಂದರೆ ಎರಡೂ ಗ್ರಹಣ ದಿನಗಳು …

Read More »

ಈಶ್ವರಪ್ಪ ಅವರ ವಿರುದ್ಧ ಎಫ್ ಐಆರ್ ದಾಖಲ

ಶಿವಮೊಗ್ಗ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಚುನಾವಣಾಧಿಕಾರಿಯಿಂದ ಅಗತ್ಯ ಅನುಮತಿ ಪಡೆಯದೆ ರಾಜಕೀಯ ಕಾರ್ಯಕ್ರಮ ಆಯೋಜಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪ ಕೇಳಿಬಂದಿದೆ.ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ತಿಳಿದುಬಂದಿದೆ.   ಶುಕ್ರವಾರ ತೀ‍ರ್ಥಹಳ್ಳಿ ತಾಲ್ಲೂಕು ನೊಣಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಬುತೀರ್ಥದ ದೇವಸ್ಥಾನ ಒಂದರಲ್ಲಿ ಪೂಜಾ ಕಾ‍ರ್ಯಕ್ರಮ ನೆರವೇರಿಸಿ ಅಲ್ಲೇ ಹತ್ತಿರದಲ್ಲೇ ಅರ್ಚಕರ ಮನೆ ಅಂಗಳದಲ್ಲಿ …

Read More »

ಬಸನಗೌಡ ಪಾಟೀಲ ಯತ್ನಾಳ್‌ ಹುಚ್ಚು ಶಾಸಕ: ಸಚಿವ ದಿನೇಶ್‌ ಗುಂಡೂರಾವ್‌ ಕಿಡಿ

ಬೆಂಗಳೂರು: ‘ಭಾರತೀಯ ಭ್ರಷ್ಟರ ಪಾರ್ಟಿಯಲ್ಲಿ ಯತ್ನಾಳ್‌ ಎಂಬ ಹುಚ್ಚು ಶಾಸಕ ಬಾಯಿಗೆ ಬಂದಂತೆ ಮಾತನಾಡುತ್ತಲೇ ಇರುತ್ತಾರೆ. ಯತ್ನಾಳ್‌ರಂತೆ ನಾವು ಮನೆ ಒಡೆಯುವ ಕೆಲಸ, ಕೀಳು ಭಾಷೆ ಬಳಕೆ ಮಾಡುವುದಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸಚಿವ ದಿನೇಶ್‌ ಗುಂಡೂರಾವ್‌ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ. ದೇಶ ವಿರೋಧಿ ಹೇಳಿಕೆ ನೀಡುವುದು ಅವರ ಚಟವಾಗಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರ ಹೇಳಿಕೆಗೆ ‘X’ …

Read More »

ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

ಹೊಳಲ್ಕೆರೆ: ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟು 38 ಮಂದಿ ಗಾಯಗೊಂಡಿರುವ ಘಟನೆ ಹೊಳಲ್ಕೆರೆ ತಾಲ್ಲೂಕಿನ ಕಣಿವೆ ಆಂಜನೇಯ ದೇವಸ್ಥಾನದ ಬಳಿ ಭಾನುವಾರ ಮುಂಜಾನೆ ಸಂಭವಿಸಿದೆ. ಬೆಂಗಳೂರಿನಿಂದ ಹೊರಟ ಬಸ್ಸಿನಲ್ಲಿ 50 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ರಸ್ತೆ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಭಾನುವಾರ ಮುಂಜಾನೆ ನಾಲ್ಕು ಗಂಟೆಗೆ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಮೂವರು …

Read More »

ಅಗತ್ಯ ಔಷಧಿಗಳ ಬೆಲೆ ಮತ್ತೆ ಹೆಚ್ಚಿಸಿದ ಸರ್ಕಾರ

ನವದೆಹಲಿ: ಅಗತ್ಯ ಔಷಧಿಗಳ ಬೆಲೆ ಹೆಚ್ಚಳವಾಗಿದ್ದು, ಈ ವಾರದ ಆರಂಭದಲ್ಲಿ ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು(NPPA) 2024-25ರ ಆರ್ಥಿಕ ವರ್ಷದ ಆರಂಭದಿಂದ ಅಗತ್ಯ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ(MRP) ಈ ವರ್ಷ 0.00551% ಹೆಚ್ಚಳವನ್ನು ಜಾರಿಗೊಳಿಸಿದೆ. ಫಾರ್ಮಾಸ್ಯುಟಿಕಲ್ಸ್ ಇಲಾಖೆಯು 923 ನಿಗದಿತ ಔಷಧಳಿಗೆ ಪರಿಷ್ಕೃತ ಬೆಲೆಗಳ ವಾರ್ಷಿಕ ಪಟ್ಟಿಯನ್ನು ಮತ್ತು 65 ಫಾರ್ಮುಲೇಶನ್‌ಗಳಿಗೆ ಪರಿಷ್ಕೃತ ಚಿಲ್ಲರೆ ಬೆಲೆಗಳನ್ನು ಬಿಡುಗಡೆ ಮಾಡಿದೆ. ಸೀಲಿಂಗ್ ದರಗಳು ಏಪ್ರಿಲ್ …

Read More »

ಡಿಕೆಶಿ ನೋಟು, ಡಾಕ್ಟರ್‌ಗೆ ವೋಟು; ಬಾವನ ಗೆಲ್ಲಿಸಲು ಎಚ್‌ಡಿಕೆ ಪ್ಲಾನ್!

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಮುಗಿದ ಬೆನ್ನಲ್ಲೇ ಪ್ರಚಾರದ ಅಬ್ಬರ ಜೋರಾಗಿದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಂತೂ ಇನ್ನಿಲ್ಲದ ರಣತಂತ್ರ ರೂಪಿಸುತ್ತಿವೆ.ಇದರ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಬಾವ ಡಾ.ಸಿ.ಎನ್‌.ಮಂಜುನಾಥ್‌ (Dr C N Manjunath) ಅವರನ್ನು ಗೆಲ್ಲಿಸಲು ಮಾಸ್ಟರ್‌ ಪ್ಲಾನ್‌ ರೂಪಿಸಿದ್ದಾರೆ. “ಡಿ.ಕೆ.ಶಿವಕುಮಾರ್‌ ಅವರ ನೋಟು ಪಡೆದು, ಡಾಕ್ಟರ್‌ಗೆ ಮತ ನೀಡಿ ಎಂಬುದಾಗಿ …

Read More »

ಅಣ್ಣ-ತಮ್ಮ ದುಡ್ಡು ಕೊಟ್ಟು ಕಾಲಿಗೆ ಬಿಳ್ತಿದ್ದಾರೆ : ಕುಮಾರಸ್ವಾಮಿ

ಬೆಂಗಳೂರು : ನಮ್ಮದು ಸ್ಟ್ರಾಟರ್ಜಿ ಏನಿಲ್ಲ. ಚುನಾವಣೆ ಗೆಲ್ಲಬೇಕು ಅಷ್ಟೆ. ಡಿಕೆಶಿ ನೋಟು ಡಾಕ್ಟ್ರಿಗೆ ವೋಟು ಅಷ್ಟೇ. ಡಿ.ಕೆ. ಶಿವಕುಮಾರ್‌ ಅವರ ನೋಟು ಪಡೆದು, ಡಾಕ್ಟರ್‌ಗೆ ಮತ ನೀಡಿ ಎಂದು ಮತದಾರರಿಗೆ ಮನವಿ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕುಟುಕಿದರು.   ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಡಾ. ಮಂಜುನಾಥ್ ಅವರು ಒಂದು ವಿದ್ಯುತ್ ಸಂಚಲನ ಮಾಡಿದ್ದಾರೆ. ಜನರಲ್ಲೂ ಸಹ ಸ್ವಯಂ ಪ್ರೇರಣೆಯಿಂದ ಒಲವಿದೆ. ನರೇಂದ್ರ …

Read More »

ಬಿಜೆಪಿ ಸೇರುವಾಗ ಜಾಮೂನು ಕೊಡ್ತಾರೆ, ಸೇರಿದ ಮೇಲೆ ವಿಷ ಹಾಕ್ತಾರೆ : ಸೋಮಶೇಖರ್

ಕೆಂಗೇರಿ,- ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಜಾಮೂನು, ಮೈಸೂರುಪಾಕು, ಜಿಲೇಬಿ ಕೊಡುತ್ತಾರೆ. ಅವರ ಕೆಲಸ ಆದ್ಮೇಲೆ ವಿಷ ಕೊಡುತ್ತಾರೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಭಾವುಕರಾಗಿ ನುಡಿದರು. ಕೆಂಗೇರಿ ಉಪನಗರದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಕದ್ದುಮುಚ್ಚಿ ರಾತ್ರಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರ ಭೇಟಿಯಾಗುತ್ತಾರೆ.ಆದರೆ ನಾನು ಕ್ಷೇತ್ರದ ಅಭಿವೃದ್ಧಿಗಾಗಿ ರಾಜಾರೋಷವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭೇಟಿ ಮಾಡಿದರೆ ಅದನ್ನೇ ದೊಡ್ಡದು ಮಾಡುತ್ತಾರೆ ಎಂದು …

Read More »

ಭೂಮಿ ತಾಪ ಇಳಿಸಲು ಸೂರ್ಯನಿಗೇ ಟಾರ್ಚ್‌!

ಭೂಮಿಯ ತಾಪಮಾನ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಬೇಸಗೆಯಲ್ಲಂತೂ ಸೂರ್ಯನ ಶಾಖಕ್ಕೆ, ಬಿಸಿ ಗಾಳಿಗೆ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳು ಕೂಡ ಪರಿತಪಿಸುವಂತಾಗಿದೆ. ಭೂಮಿ ಯ ತಾಪವನ್ನು ತಾತ್ಕಾಲಿಕವಾಗಿ ಇಳಿಸಲು ಅಮೆರಿಕದ ವಿಜ್ಞಾನಿಗಳು ವಿನೂತನ ಪ್ರಯೋಗ ನಡೆಸಿದ್ದಾರೆ. ಭೂಮಿಯ ವಾತಾವರಣ ತಂಪಾಗಿ ಸುವ ನಿಟ್ಟಿನಲ್ಲಿ “ಕ್ಲೌಡ್‌ ಬ್ರೈಟನಿಂಗ್‌’ ಎಂಬ ತಂತ್ರವನ್ನು ಬಳಸಿದ್ದಾರೆ. “ಕ್ಲೌಡ್‌ ಬ್ರೈಟನಿಂಗ್‌’ ತಂತ್ರವು ಮೋಡಗಳನ್ನು ಪ್ರಕಾಶಮಾನವಾಗುವಂತೆ ಮಾಡುತ್ತದೆ. ಇದರಿಂದ ಮೋಡಗಳು ಒಳಬರುವ ಸೂರ್ಯನ ಕಿರಣಗಳ ಸಣ್ಣ ಭಾಗವನ್ನು ಪ್ರತಿಫ‌ಲನಗೊಳಿಸುತ್ತದೆ. …

Read More »

ಸಿಂದಗಿ ಪುರಸಭೆ ಸದಸ್ಯೆ ವಾಸಿಸಲು ಮನೆಯಿಲ್ಲ, ಉಪಜೀವನಕ್ಕೆ ಕೂಲಿ ಕೆಲಸ.

ಸಿಂದಗಿ (ವಿಜಯಪುರ ಜಿಲ್ಲೆ): ವಾಸಿಸಲು ಮನೆಯಿಲ್ಲ, ಉಪಜೀವನಕ್ಕೆ ಕೂಲಿ ಕೆಲಸ. ನಿತ್ಯ ಬೆಳಿಗ್ಗೆ ಸಿಕ್ಕರೆ ಕೂಲಿಗೆಲಸಕ್ಕೆ ಹೋಗುವುದು, ಇಲ್ಲದಿದ್ದರೆ ಗುಡಿಸಲಲ್ಲೇ ವಾಸ. ನೈವೇದ್ಯದ ಪ್ರಸಾದ ಅಥವಾ ಯಾರಾದರೂ ಆಹಾರ ಕೊಟ್ಟರೆ ಅದೇ ಊಟ. ಇಲ್ಲದಿದ್ದರೆ, ಉಪವಾಸ. ವೃದ್ಧಾಪ್ಯವೇತನ ಕೂಡ ಇತ್ತೀಚೆಗೆ ಅವರ ಕೈಸೇರಿಲ್ಲ…   ಇದು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿರುವ 23ನೇ ವಾರ್ಡ್‌ನ ಪುರಸಭೆ ಕಾಂಗ್ರೆಸ್‌ ಸದಸ್ಯೆ ಮಹಾದೇವಿ ಭೀಮಶ್ಯಾ ನಾಯ್ಕೋಡಿ (80) ಅವರ ಸ್ಥಿತಿ. ಮಹಾದೇವಿ ನಾಯ್ಕೋಡಿ ಅವರನ್ನು …

Read More »