Breaking News
Home / ರಾಷ್ಟ್ರೀಯ (page 1073)

ರಾಷ್ಟ್ರೀಯ

ಸಬರಮತಿ ಆಶ್ರಮದಲ್ಲಿ ಗಾಂಧಿ ಚರಕದಿಂದ ನೂಲು ನೇಯ್ದ ಟ್ರಂಪ್ ದಂಪತಿ

ಅಹಮದಾಬಾದ್, ಫೆ.24- ಭಾರತ ಪ್ರವಾಸ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮಲೇನಿಯಾ ಟ್ರಂಪ್ ಅಹಮದಾಬಾದ್‍ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸಬರ್‍ಮತಿ ಆಶ್ರಮಕ್ಕೆ ಭೇಟಿ ನೀಡಿದರು.ಮೋದಿಯವರೊಂದಿಗೆ ಇಂದು ಮಧ್ಯಾಹ್ನ ಆಶ್ರಮಕ್ಕೆ ತೆರಳಿದ ಟ್ರಂಪ್ ದಂಪತಿ ಬಾಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು ಟ್ರಂಪ್ ದಂಪತಿಗಳಿಗೆ ಮಾರ್ಗದರ್ಶಕರಾಗಿದ್ದ ಟ್ರಂಪ್ ಆಶ್ರಮದ ಮಹತ್ವ ಮತ್ತು ಅಲ್ಲಿ ಗಾಂಧೀಜಿಯವರು ಬಳಸುತ್ತಿದ್ದ ವಸ್ತುಗಳ ಬಗ್ಗೆ ವಿವರಿಸಿದರು.ಆಶ್ರಮದಲ್ಲಿದ್ದ ಗಾಂಧೀಜಿ ಮತ್ತು …

Read More »

ನಮ್ಮ ದೇಶದವರಾಗಿ ಪಾಕಿಸ್ತಾನದ ಪರ ಘೋಷಣೆ ಕೂಗುವುದು ವಿಕೃತ ಮನಸ್ಸಿನವರು:ಶಾಸಕಿ ಅನಿತಾ ಕುಮಾರಸ್ವಾಮಿ ಬೇಸರ

ರಾಮನಗರ: ಪಾಕ್ ಪರ ಘೋಷಣೆ ಕೂಗುತ್ತಿರುವುದನ್ನು ನೋಡಿ ನಿಜವಾಗಿಯೂ ನನಗೆ ಆಶ್ಚರ್ಯವಾಗುತ್ತಿದೆ. ನಮ್ಮ ದೇಶದವರಾಗಿ ಪಾಕಿಸ್ತಾನದ ಪರ ಘೋಷಣೆ ಕೂಗುವುದು ವಿಕೃತ ಮನಸ್ಸಿನವರು ಅಂತ ಹೇಳಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿದ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು. ಮುಂದೆ ಇನ್ಯಾರು ಆ ರೀತಿ ಮಾಡಬಾರದು, ಆ ರೀತಿ ಕ್ರಮ ಕೈಗೊಂಡರೆ ಬೇರೆಯವರಿಗೂ …

Read More »

(ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸುವ ಸಂಘಟಿತರು ಹಾಗೂ ಸಂಘಟನೆಗಳ ಮೇಲೆ ರಾಜ್ಯ ಸರ್ಕಾರ ಬ್ರಹ್ಮಾಸ್ತ್ರ ಬಳಸಲು ಮುಂದಾಗಿದೆ

ಸಂಘಟನೆಗಳ ಮೇಲೆ ರಾಜ್ಯ ಸರ್ಕಾರ ಬ್ರಹ್ಮಾಸ್ತ್ರ 10 ಲಕ್ಷ ಭದ್ರತಾ ಠೇವಣಿ ಹಾಗೂ ಕಾರ್ಯಕ್ರಮದ ಹೊಣೆಗಾರಿಕೆಯನ್ನು ಆಯೋಜಕರೇ ಹೊತ್ತುಕೊಳ್ಳಬೇಕು ಶಾಂತಿಯುತ ಪ್ರತಿಭಟನೆ ನೆಪದಲ್ಲಿ ಕಾನೂನು ಉಲ್ಲಂಘಿಸಿದವರಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದೆ. ಬೆಂಗಳೂರು,ಫೆ.21-ಕೇಂದ್ರ ಸರ್ಕಾರದ ನಾಗರಿಕ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸುವ ಸಂಘಟಿತರು ಹಾಗೂ ಸಂಘಟನೆಗಳ ಮೇಲೆ ರಾಜ್ಯ ಸರ್ಕಾರ ಬ್ರಹ್ಮಾಸ್ತ್ರ ಬಳಸಲು ಮುಂದಾಗಿದೆ. ನಿನ್ನೆ ಫ್ರೀಡಂಪಾರ್ಕ್‍ನಲ್ಲಿ ಸಿಎಎ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಅಮೂಲ್ಯ ಲಿಯೋನ …

Read More »

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಯ…………

ಮುಂಬೈ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಗಿದೆ. ದಾದಾ ಸಾಹೇಬ್ ಪಾಲ್ಕೆ ಹಾಗೂ ಮಹಾತ್ಮ ಗಾಂಧೀಜಿ ಅವರ 150ನೇ ವರ್ಷದ ಜನ್ಮದಿನೋತ್ಸವದ ಅಂಗವಾಗಿ ಮುಂಬೈನಲ್ಲಿ ಗುರುವಾರ ಅದ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುದೀಪ್ ಅವರಿಗೆ ದಾದಾ ಸಾಹೇಬ್ ಪಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ 2020ರ ‘ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ದಬಾಂಗ್ 3′ ಸಿನಿಮಾದ …

Read More »

ಜೈಲಲ್ಲಿ ನಿರ್ಭಯಾ ಹಂತಕನ ಹೈಡ್ರಾಮ- ಗೋಡೆಗೆ ತಲೆ ಚಚ್ಚಿಕೊಂಡ ವಿನಯ್ ಶರ್ಮಾ

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಹೈ ಡ್ರಾಮಾ ನಡೆಸಿದ್ದು, ಗೋಡೆಗೆ ತಲೆ ಚಚ್ಚಿಕೊಳ್ಳುವ ಮೂಲಕ ನಾಟಕವಾಡಿದ್ದಾನೆ. ಈ ಕುರಿತು ಜೈಲಿನ ಮೂಲಗಳು ಮಾಹಿತಿ ನೀಡಿದ್ದು, ಫೆಬ್ರವರಿ 16ರಂದು ಈ ಘಟನೆ ನಡೆದಿದೆ. ತಕ್ಷಣವೇ ಜೈಲು ಅಧಿಕಾರಿಗಳು ತಡೆದಿದ್ದಾರೆ. ಗೋಡೆಗೆ ಬಲವಾಗಿ ತಲೆ ಚಚ್ಚಿಕೊಂಡಿದ್ದರಿಂದ ವಿನಯ್ ಶರ್ಮಾಗೆ ಗಾಯವಾಗಿದೆ. ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ. ನಿರ್ಭಯಾ ಅತ್ಯಾಚಾರಿಗಳ …

Read More »

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಅವರನ್ನು ಭೇಟಿ ಮಾಡಿ ಚರ್ಚೆ :

ಬೆಂಗಳೂರು,ಫೆ.20-ಕೆಪಿಸಿಸಿ ಅಧ್ಯಕ್ಷರ ನೇಮಕಾತಿಗೆ ಸಂಬಂಧಪಟ್ಟಂತೆ ಪ್ರಕ್ರಿಯೆಗಳನ್ನು ಆರಂಭಿಸಿರುವ ಕಾಂಗ್ರೆಸ್ ವರಿಷ್ಠರು ಹಂತ ಹಂತವಾಗಿ ರಾಜ್ಯದ ನಾಯಕರುಗಳನ್ನು ಭೇಟಿ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ನಿನ್ನೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಸೋನಿಯಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಭಕ್ತ ಚರಣದಾಸ್ ಮತ್ತು ಮಧುಸೂದನ ಮಿಸ್ತ್ರಿ ವರದಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಡ ಹೇರಿದರು. ಆ …

Read More »

 ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಕೇಂದ್ರಕ್ಕೆ ಹಸ್ತಾಂತರಿಸುವುದಿಲ್ಲ: ಸಿಎಂ ಉದ್ದವ್ ಠಾಕ್ರೆ

ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಕೇಂದ್ರಕ್ಕೆ ಹಸ್ತಾಂತರಿಸುವುದಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಸ್ಪಷ್ಟಪಡಿಸಿದ್ದು, ಕೋರೆಗಾಂವ್ ಗಲಭೆಯ ವೇಳೆ ದಲಿತ ಸಮುದಾಯದ ಮೇಲಿನ ದೌರ್ಜನ್ಯವು “ದುರದೃಷ್ಟಕರ” ಎಂದು ಹೇಳಿದ್ದಾರೆ. ಈ ಕುರಿತು ಇಂದು ಟ್ವೀಟ್ ಮಾಡಿರುವ ಉದ್ದವ್ ಠಾಕ್ರೆ, ಎಲ್ಗರ್ ಮತ್ತು ಭೀಮಾ ಕೋರೆಗಾಂವ್ ಎರಡೂ ಪ್ರತ್ಯೇಕ ಪ್ರಕರಣಗಳಾಗಿವೆ, ದಲಿತ ಸಹೋದರರು ಭೀಮಾ ಕೋರೆಗಾಂವ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರ ತನಿಖೆಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಮಾಡುವುದಿಲ್ಲ. ದಲಿತ …

Read More »

ಕಾರ್ಬನ್ ಡೈಆಕ್ಸೈಡ್‍ನಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಬಿರುಕು

ಮೈಸೂರು, ಫೆ.20- ನಗರದ ಹೃದಯ ಭಾಗದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಕಾಣಿಸಿಕೊಂಡಿರುವ ಬಿರುಕಿನಿಂದ ಸದ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಇತಿಹಾಸ ತಜ್ಞ ಡಾ.ರಂಗರಾಜು ತಿಳಿಸಿದರು. ಪ್ರತಿಮೆ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸೂಕ್ಷ್ಮವಾಗಿ ಪ್ರತಿಮೆಯನ್ನು ಪರೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಮೆಯ ಕಲ್ಲಿನಲ್ಲಿನ ದೋಷದಿಂದ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ ಎಂದರು. ಇದು ನಗರದ ಪ್ರಮುಖ ವೃತ್ತವಾಗಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ವಾಹನಗಳಿಂದ …

Read More »

5ನೇ ಮಗಳ ಜನನದ ಖುಷಿ ಹಂಚಿಕೊಂಡ ಅಫ್ರಿದಿ ಕಾಲೆಳೆದ ನೆಟ್ಟಿಗರು

ಇಸ್ಲಾಮಾಬಾದ್: ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ಆಲ್‍ರೌಂಡರ್ ಶಾಹಿದ್ ಅಫ್ರಿದಿ ತಮಗೆ ಐದನೇ ಹೆಣ್ಣು ಮಗು ಜನಿಸಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಫ್ರಿದಿ ಅವರು 2018ರಲ್ಲಿ ತಮ್ಮ ತಾಯಿಯ ಸೋದರಸಂಬಂಧಿ ನಾಡಿಯಾ ಅಫ್ರಿದಿ ಅವರೊಂದಿಗೆ ಮದುವೆಯಾಗಿದ್ದು, ಅಫ್ರಿದಿ ದಂಪತಿಗೆ ಅಕ್ಸಾ, ಅನ್‍ಷಾ, ಅಜ್ವಾ ಹಾಗೂ ಅಸ್ಮರಾ ಎಂಬ ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಈಗ ನಾಡಿಯಾ ಅವರು 5ನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಫೋಟೋ ಟ್ವೀಟ್ ಮಾಡಿರುವ …

Read More »

ತಿಂಗಳಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ ನವದೆಹಲಿ, ಫೆ.12- ತಿಂಗಳಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅವಿಸ್ಮರಣೀಯ ಸ್ವಾಗತ ನೀಡುವುದಾಗಿ ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿರುವುದು ನಮಗೆ ಅತ್ಯಂತ ಸಂತಸ ಉಂಟು ಮಾಡಿದೆ. ಅವರಿಗೆ ನಾವು ಅವಿಸ್ಮರಣೀಯ ಸ್ವಾಗತ ಕೋರುತ್ತೇವೆ. ಟ್ರಂಪ್ ಅವರ ಭೇಟಿಯಿಂದ ಉಭಯ ದೇಶಗಳ ಸಂಬಂಧ ಮತ್ತಷ್ಟು ಬಲವಾಗಲಿದೆ …

Read More »