Breaking News
Home / ಅಂತರಾಷ್ಟ್ರೀಯ / ಫ್ರಾನ್ಸ್​ನ ಲೆ ಹ್ಯಾವ್ರೆಯಲ್ಲಿ ವಾಸಿಸುತ್ತಿದ್ದ ದಂಪತಿ ಆನ್​ಲೈನ್​​​ನಲ್ಲಿ​ ಬೆಕ್ಕಿನ ಮರಿಯ ಜಾಹೀರಾತು ಕಂಡು ಕೊಂಡುಕೊಳ್ಳಲು ಮುಂದಾಗಿದ್ದಾರೆ.

ಫ್ರಾನ್ಸ್​ನ ಲೆ ಹ್ಯಾವ್ರೆಯಲ್ಲಿ ವಾಸಿಸುತ್ತಿದ್ದ ದಂಪತಿ ಆನ್​ಲೈನ್​​​ನಲ್ಲಿ​ ಬೆಕ್ಕಿನ ಮರಿಯ ಜಾಹೀರಾತು ಕಂಡು ಕೊಂಡುಕೊಳ್ಳಲು ಮುಂದಾಗಿದ್ದಾರೆ.

Spread the love

ಸದ್ಯ ಎಲ್ಲವೂ ಆನ್​ಲೈನ್​ಮಯವಾಗಿದೆ. ಒಂದು ಕ್ಲಿಕ್​ ಸಾಕು​ ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿದೆ. ಅಷ್ಟೇ ಏಕೆ ಮನೆ ಬಾಗಿಲಿಗೆ ತಂದು ತಲುಪಿಸುವ ವ್ಯವಸ್ಥೆಯೂ ಇದೆ. ಅದರಂತೆ ಇಲ್ಲೊಬ್ಬರು ದಂಪತಿ ಆನ್​ಲೈನ್​ ಮೂಲಕ ಭಾರೀ ಮೊತ್ತಕ್ಕೆ ಸವನ್ನಾ ಬೆಕ್ಕಿನ ಮರಿಯನ್ನು ಆರ್ಡರ್​ ಮಾಡಿದ್ದಾರೆ. ಆದರೆ ಬಂದಿರುವ ಆರ್ಡರ್​ ತೆರೆದು ನೋಡಿದಾಗ ಶಾಕ್​ ಆಗಿದ್ದಾರೆ.

ಫ್ರಾನ್ಸ್​ನ ಲೆ ಹ್ಯಾವ್ರೆಯಲ್ಲಿ ವಾಸಿಸುತ್ತಿದ್ದ ದಂಪತಿ ಆನ್​ಲೈನ್​​​ನಲ್ಲಿ​ ಬೆಕ್ಕಿನ ಮರಿಯ ಜಾಹೀರಾತು ಕಂಡು ಕೊಂಡುಕೊಳ್ಳಲು ಮುಂದಾಗಿದ್ದಾರೆ. ಬರೋಬ್ಬರಿ 5 ಲಕ್ಷ ಬೆಲೆಯ ಸವನ್ನಾ ಬೆಕ್ಕಿನ ಮರಿಯನ್ನು ಬುಕ್​ ಮಾಡಿದ್ದಾರೆ. ಹಣವನ್ನು ನೀಡಿದ್ದಾರೆ. ಆದರೆ ಸ್ವಲ್ಪ ದಿನಗಳ ಬಳಿಕ ಆರ್ಡರ್​ ಮನೆ ಬಾಗಿಲಿಗೆ ತಲುಪಿದೆ. ಬಂದಿರುವ ಆರ್ಡರ್​ ಅನ್ನು ತೆಗೆದು ನೋಡಿದಾಗ ದಂಪತಿ ಶಾಕ್​ ಆಗಿದ್ದಾರೆ.

ಬೆಕ್ಕಿನ ಮರಿ ಬದಲು ಸುಮಾತ್ರನ್​​ ಹುಲಿಮರಿಯನ್ನು ಕಳುಹಿಸಿಕೊಡಲಾಗಿತ್ತು. ಈ ವಿಚಾರ ತಿಳಿದ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸುಮಾತ್ರನ್​​ ಹುಲಿಮರಿ

ಸುಮಾತ್ರನ್​​ ಹುಲಿಮರಿಯನ್ನು ಮನೆಯಲ್ಲಿ ಖಾಸಗಿಯಾಗಿ ಸಾಕುವುದನ್ನು ವಿಷೇಧಿಸಲಾಗಿದೆ, ಮಾತ್ರವಲ್ಲದೆ, ಸರಿಯಾದ ದಾಖಲೆಗಳಿಲ್ಲದೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯುವ ಹಾಗಿಲ್ಲ. ದಂಪತಿಗಳು ನೀಡಿದ ದೂರಿನ ಅನ್ವಯ ಸುಮಾತ್ರನ್​​ ಹುಲಿಮರಿಯನ್ನು ಡೆಲಿವರಿ ಮಾಡಿದ ಸಂಸ್ಥೆಯ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Spread the love ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ