Breaking News

ರಾಷ್ಟ್ರೀಯ

ಮಹಾತ್ಮ ಗಾಂಧೀಜಿ ಮರಿಮೊಮ್ಮಗ ಕೊರೊನಾಗೆ ಬಲಿ

ಜೋಹಾನ್ಸಬರ್ಗ್: ಮಹಾತ್ಮ ಗಾಂಧೀಜಿ ಅವರ ಮರಿಮೊಮ್ಮಗ ಸತೀಶ್ ಧುಪೆಲಿಯಾ ಕೊರೊನಾ ವೈರಸ್ ಗೆ ಸೌಥ್ ಆಫ್ರಿಕಾದಲ್ಲಿ ಬಲಿಯಾಗಿದ್ದಾರೆ. ಮೂರು ದಿನಗಳ ನಂತರ ಸತೀಶ್ ಧುಪೆಲಿಯಾ ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವರಿದ್ದರು. ಸತೀಶ್ ಅವರ ಸೋದರಿ ಉಮಾ ಧುಪೆಲಿಯಾ ಸೋದರನ ಸಾವನ್ನು ಖಚಿತಪಡಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ಪ್ರೀತಿಯ ಅಣ್ಣ ನಮ್ಮನ್ನು ಅಗಲಿದ್ದಾನೆ. ನ್ಯೂಮೇನಿಯಾ ಆಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ ಅವರಿಗೆ ಕೋವಿಡ್-19 ಸೋಂಕು ಸಹ …

Read More »

ಮೌಲ್ವಿಯನ್ನು ಮದುವೆಯಾದ ಬಿಗ್ ಬಾಸ್ ಸ್ಪರ್ಧಿ

ನವದೆಹಲಿ: ಬಿಗ್ ಸ್ಪರ್ಧಿ, ಕಳೆದ ವರ್ಷ ಮನರಂಜನಾ ಲೋಕಕ್ಕೆ ಗುಡ್ ಬೈ ಹೇಳಿದ್ದ ಸನಾ ಖಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಗುಜರಾತ್ ಮೂಲದ ಮೌಲ್ವಿ ಅನಸ್ ಸಯೀದ್ ಅವರನ್ನು ವಿವಾಹವಾಗಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ವಿಷಯವನ್ನು ತಿಳಿಸಿರುವ ಸನಾ ಖಾನ್, ದೇವರ ದಯೆಯಿಂದ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿದ್ದೆವು. ಇದೀಗ ವಿವಾಹವಾಗಿದ್ದೇವೆ. ದೇವರು ನಮ್ಮಿಬ್ಬರನ್ನು ಒಗ್ಗಟ್ಟಾಗಿ ಇಡಲೆಂದು ಬೇಡಿಕೊಳ್ಳುತ್ತೇನೆ ಎಂದು ಬರೆದು, ಇಬ್ಬರ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. …

Read More »

ನಾನು ಹೇಡಿಯಲ್ಲ, ನನ್ನಿಂದ ಬದುಕಲು ಆಗುತ್ತಿಲ್ಲ ಎಂದು ಡೆತ್ ನೋಟ್ ಬರೆದಿಟ್ಟ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಲಕ್ನೋ: ನಾನು ಹೇಡಿಯಲ್ಲ, ನನ್ನಿಂದ ಬದುಕಲು ಆಗುತ್ತಿಲ್ಲ ಎಂದು ಡೆತ್ ನೋಟ್ ಬರೆದಿಟ್ಟ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಉತ್ತರ ಪ್ರದೇಶದ ಪ್ರತಾಪಗಢದ ಲಾಲ್‍ಗಂಜ್ ವ್ಯಾಪ್ತಿಯ ಬೆಲ್ಹಾ ಗ್ರಾಮದ ಐಟಿಐ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧೀರೇಂದ್ರ ಶರ್ಮಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮೃತ ಧೀರೇಂದ್ರ ಪ್ರತಾಪಘಢನಲ್ಲಿ ಐಟಿಐ ಓದುತ್ತಿದ್ದನು. ರಜೆ ಹಿನ್ನೆಲೆ ಶನಿವಾರ ಗ್ರಾಮಕ್ಕೆ ಆಗಮಿಸಿದ್ದನು. ಮನೆಗೆ ಬಂದವನು ಎರಡನೇ ಮಹಡಿಯಲ್ಲಿರುವ ಕೋಣೆ ಸೇರಿ, ನೇಣು ಬಿಗಿದುಕೊಂಡು ಆತ್ಮಹತ್ಯೆ …

Read More »

ನಾಲ್ವರು ನಕಲಿ ಪರೀಕ್ಷಾರ್ಥಿಗಳು ಬಂಧನ..!

ಬೆಳಗಾವಿ ನಗರದಲ್ಲಿ ಇಂದು 39 ಪರೀಕ್ಷಾ ಕೇಂದ್ರಗಳಲ್ಲಿ ಜರುಗಿದ ಎಸ್‌ಆರ್‌ಪಿಸಿ / ಐಆರ್‌ಬಿ / ಕೆಎಸ್‌ಆರ್‌ಪಿ ಪುರುಷ & ಮಹಿಳಾ ಕಾನ್‌ಸ್ಟೇಬಲ್ ಹುದ್ದೆಯ ಸಿ.ಇ.ಟಿ ಲಿಖಿತ ಪರೀಕ್ಷೆಯಲ್ಲಿ ಒಟ್ಟು 1921 ಅಭ್ಯರ್ಥಿಗಳ ಪೈಕಿ 8461 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 1 ) ಜಿಐಟಿ ಕಾಲೇಜ , ಉದ್ಯಮಬಾಗ 2 ) ಲವ್‌ಡೇಲ್ ಸೆಂಟ್ರಲ್ ಸ್ಕೂಲ , ಮಾಳಮಾರುತಿ , 3 ) ಕೆಎಲ್‌ಎಸ್ ಸಂಸ್ಥೆ . ಇಂಗ್ಲೀಷ ಮಿಡಿಯಮ್ …

Read More »

ಮಾಸ್ಕ್ ದಂಡದ ಮೊತ್ತವನ್ನು 2000 ರೂ ಗೆ ಹೆಚ್ಚಳ

ನವದೆಹಲಿ: ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ದೆಹಲಿ ಸರ್ಕಾರ ದಂಡದ ಮೊತ್ತವನ್ನು 2000ರೂ ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ದೆಹಲಿಯಲ್ಲಿ ದಿನದಿಂದ ದಿನಕ್ಕೆ ಆರರಿಂದ ಏಳು ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಸಾರ್ವಜನಿಕರು ಮಾಸ್ಕ್ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಕಠಿಣ ಕ್ರಮ ಕೈಗೊಂಡಿರುವ ಸರ್ಕಾರ 500 ರೂ ಇದ್ದ ಮಾಸ್ಕ್ ದಂಡದ ಮೊತ್ತವನ್ನು 2000 ರೂ …

Read More »

ರಾಹುಲ್, ಪ್ರಿಯಾಂಕಾರಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 103ನೇ ಜಯಂತಿ ಆಚರಣೆ

ಗೋಕಾಕ್ : ಇಲ್ಲಿನ ಹಿಲ್ ಗಾರ್ಡ್ ನ ಗೃಹ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 103ನೇ ಜಯಂತಿಯನ್ನು ಅದ್ದೂರಿಯಿಂದ ಗುರುವಾರ ಆಚರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ರವರ ಪುತ್ರ ರಾಹುಲ್, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಮಾಜಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ವಿವೇಕ ಜತ್ತಿ ಮಾತನಾಡಿ, ಉಕ್ಕಿನ ಮಹಿಳೆ ಎಂದು ಕರೆಯುವ …

Read More »

ರಸ್ತೆಗಳ ಅಭಿವೃದ್ಧಿಗಾಗಿ ಪಿಎಂಜಿಎಸ್‍ವಾಯ್ ಅಡಿ 21.27 ಕೋಟಿ ರೂ. ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಡೇರಹಟ್ಟಿಯಲ್ಲಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಅರಭಾವಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ವಿವಿಧ ರಸ್ತೆ ಕಾಮಗಾರಿಗಳಿಗಾಗಿ 21.27 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಮಂಗಳವಾರದಂದು ಉದಗಟ್ಟಿಯಿಂದ ನಾಗನೂರ ವ್ಹಾಯಾ ವಡೇರಹಟ್ಟಿ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು,         ಈ …

Read More »

ಬಾಲಿವುಡ್ ನಟ ಸಲ್ಮಾನ್ ಖಾನ್ ಐಸೋಲೇಶನ್‍ಗೆ..!

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸ್ವತಃ ಐಸೋಲೇಶನ್‍ಗೆ ಒಳಗಾಗಿದ್ದಾರೆ. ಕಾರು ಚಾಲಕ ಮತ್ತು ಇಬ್ಬರು ಸಿಬ್ಬಂದಿಗಳಿಗೆ ಕೋವಿಡ್ 19 ಪಾಸಿಟವ್ ಕಂಡುಬಂದ ಹಿನ್ನೆಲೆಯಲ್ಲಿ ಸಲ್ಮಾನ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಸೋಂಕು ತಾಗಿದ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರೊಂದಿಗೆ ಸಂಪರ್ಕಕ್ಕೆ ಬಂದ ಕಾರಣ ಸಲ್ಮಾನ್ ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಲು ನಿರ್ಧರಿಸಿದ್ದಾರೆ. ಸಲೀಮ್ ಖಾನ್ ಮತ್ತು ಸಲ್ಮಾಖಾನ್‍ರ ವಿವಾಹ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಕೆಲವೇ ದಿನಗಳಲ್ಲಿ …

Read More »

ಜಾಮೀನು ಅರ್ಜಿ ಹಿಂಪಡೆದ ವಿನಯ್ ಕುಲ್ಕರ್ಣಿ

ಜಾಮೀನು ಅರ್ಜಿ ಹಿಂಪಡೆದ ವಿನಯ್ ಕುಲ್ಕರ್ಣಿ ಯೋಗೀಶ್ ಗೌಡ ಹತ್ಯೆ ಪ್ರಕರಣ; ಜೈಲುವಾಸದಲ್ಲಿರುವ ಮಾಜಿ ಸಚಿವ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲ್ಕರ್ಣಿ ಜಾಮಿನು ಅರ್ಜಿಯನ್ನು ಹಿಂಪಡೆದಿದ್ದಾರೆ. ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ನಿಂದ ಬಂಧಿಸಲ್ಪಟ್ಟಿರುವ ವಿನಯ್ ಕುಲ್ಕರ್ಣಿ ಬೆಳಗಾವಿ ಹಿಡಲಗಾ ಜೈಲಿನಲ್ಲಿದ್ದು, ಕೆಲ ದಿನಗಳ ಹಿಂದೆ ಬಿಡುಗಡೆ ಕೋರಿ ಧಾರವಾಡ 3ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ …

Read More »

ಕೇಂದ್ರದ ಮಧ್ಯಸ್ಥಿಕೆ ಬೇಡ – ರಮೇಶ ಜಾರಕಿಹೊಳಿ

  ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಕೇಂದ್ರದ ಮಧ್ಯಸ್ಥಿಕೆ ಬೇಡ – ರಮೇಶ ಜಾರಕಿಹೊಳಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಗೋಕಾಕ: ಮೇಕೆದಾಟು ಸಮಾನಾಂತರ ಆಣೆಕಟ್ಟು ಯೋಜನೆಗೆ ಬೇಕಿರುವ ಕೇಂದ್ರದ ವಿವಿಧ ಅನುಮತಿಗಳನ್ನು ಶೀಘ್ರವಾಗಿ ಒದಗಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರಿಗೆ ಮನವಿ ಮಾಡಿದ್ದಾರೆ. ಬುಧವಾರ ನವದೆಹಲಿಯ ಶ್ರಮಶಕ್ತಿ ಭವನದಲ್ಲಿರುವ ಕೇಂದ್ರ ಜಲಶಕ್ತಿ ಸಚಿವರ …

Read More »