ಕ್ರಾಂತಿ ಮಹಿಳಾ ಮಂಡಳ ಉಮಾ ಸಂಗೀತ ಪ್ರತಿಷ್ಠಾನದಿಂದ ಹಿರಿಯ ನಾಗರಿಕ ದಿನಾಚರಣೆ ಗುರು, ಹಿರಿಯರನ್ನು ಗೌರವಿಸಿ: ಜಯ ಜೋಶಿ ಬೆಳಗಾವಿ: ಇಂದಿನ ಯುವ ಪೀಳಿಗೆಗೆ ಹಿರಿಯರ ಅನುಭವದ ಮಾತುಗಳ ಅವಶ್ಯಕತೆ ಇದೆ. ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಯುವಕರು ರೂಡಿಸಿಕೊಳ್ಳಬೇಕು ಎಂದು ಜಯ ಜೋಶಿ ಅವರು ಹೇಳಿದರು. ನಗರದ ಹಿಂದವಾಡಿಯ ಲಕ್ಷ್ಮಿ ಮಂದಿರದಲ್ಲಿ ಕ್ರಾಂತಿ ಮಹಿಳಾ ಮಂಡಳ ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ಹಿರಿಯ ನಾಗರಿಕ ದಿನಾಚರಣೆಯನ್ನು …
Read More »ಗೋಕಾಕನ ನೂತನ ಕಂದಾಯ ನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ ಸಂತೋಷ ಪಾಶ್ಚಾಪುರ…!
ಗೋಕಾಕ: ಗೋಕಾಕ ತಾಲ್ಲೂಕನ ನೂತನ ಕಂದಾಯ ನಿರೀಕ್ಷಕರಾಗಿ ಸಂತೋಷ ಪಾಶ್ಚಾಪುರ ಅವರು ಇಂದು (ಮಂಗಳವಾರ) ಅಧಿಕಾರವನ್ನು ಸ್ವೀಕಾರಿಸಿದ್ದಾರೆ. ಗ್ರಾಮ ಆಡಳಿತ ಅಧಿಕಾರಿಯಾಗಿ ಸುದೀರ್ಘ 23 ವರ್ಷಗಳ ಕಾಲ ಕಂದಾಯ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಿ ಸಂತೋಷ ಪಾಶ್ಚಾಪುರ ಅವರು ಸದ್ಯ ಗೋಕಾಕನ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂತೋಷ ಪಾಶ್ಚಾಪುರ ಅವರು ಕರ್ತವ್ಯ ನಿಷ್ಠೆ, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ, ಸರಳ ಮತ್ತು ಸಜ್ಜನಿಕೆಯ ವಕ್ತಿತ್ವವನ್ನು ಹೊಂದಿದ್ದಾರೆ.
Read More »ಮೈಸೂರಿನ ಇಂದಿರಾನಗರದ ದೊಡ್ಡಕೆರೆ ಮೈದಾನದಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ
ಮೈಸೂರಿನ ಇಂದಿರಾನಗರದ ದೊಡ್ಡಕೆರೆ ಮೈದಾನದಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ, ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಅಯುಬ್ ಖಾನ್ ಅವರಿಂದ ಸನ್ಮಾನ ಸ್ವೀಕರಿಸಿದ ಸಚಿವ ಸತೀಶ ಜಾರಕಿಹೊಳಿ.. ಈ ವೇಳೆ ಇಲ್ಲಿ ನೂತನವಾಗಿ ಬೃಂದಾವನ ಉದ್ಯಾನ ಮಾದರಿಯಲ್ಲಿ ನಿರ್ಮಿಸಲಾದ ಮ್ಯೂಸಿಕಲ್ ಫೌಂಟೆನ್ ಪ್ರದರ್ಶನವನ್ನು ವೀಕ್ಷಿಸಿದೆ. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಅನಿಲ್ ಚಿಕ್ಕಮಾದು, ಶ್ರೀ ಹರೀಶ್ ಗೌಡ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Read More »ಸುರಂಗ ರಸ್ತೆ ಬದಲು ಮೆಟ್ರೋ ವಿಸ್ತರಣೆ, ಸಾರ್ವಜನಿಕ ಸಾರಿಗೆಗೆ ಆದ್ಯತೆಯಿಂದ ಮಾತ್ರ ಸಂಚಾರದಟ್ಟಣೆ ತಹಬದಿಗೆ: ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು: 18 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗ ರಸ್ತೆ ನಿರ್ಮಾಣದಿಂದ ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆ ಹೇಗೆ ಸಾಧ್ಯ. ಪೂರ್ವ ಸಿದ್ಧತೆ ನಡೆಸದೆ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಸಾರ್ವಜನಿಕರ ಹಣ ಪೋಲು ಮಾಡುವ ಬದಲು ಸಮೂಹ ಸಾರಿಗೆಗೆ ಆದ್ಯತೆ ನೀಡುವಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಟಿಯಲ್ಲಿ ಸುರಂಗ ರಸ್ತೆ ನಿರ್ಮಾಣದಿಂದಾಗಿ ಎದುರಾಗುವ ತೊಡಕುಗಳು ಹಾಗೂ …
Read More »ಗೋವಾದಲ್ಲಿ ಎಮ್ಮೆಗೆ ಡಿಕ್ಕಿಯಾದ ಕಾರವಾರದ ವೈದ್ಯ ವಿದ್ಯಾರ್ಥಿಗಳ ಬೈಕ್: ಓರ್ವ ಸಾವು, ಇನ್ನೋರ್ವನ ಸ್ಥಿತಿ ಗಂಭೀರ
ಕಾರವಾರ: ಗೋವಾಗೆ ತೆರಳಿ ಅಲ್ಲಿಂದ ವಾಪಸಾಗುತ್ತಿದ್ದ ಕಾರವಾರದ ಕ್ರಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಎಮ್ಮೆಯೊಂದು ಅಡ್ಡಬಂದ ಪರಿಣಾಮ ರಸ್ತೆಗೆ ಬಿದ್ದು ಓರ್ವ ವಿದ್ಯಾರ್ಥಿ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಗೋವಾದ ಮಾಷೆಂ ಬಳಿ ನಡೆದಿದೆ. ಘಟನೆ ಮಂಗಳವಾರ ರಾತ್ರಿ ನಡೆದಿದ್ದು ಮೃತ ವಿದ್ಯಾರ್ಥಿಯನ್ನು ಕ್ರಿಮ್ಸ್ ಎಂಬಿಬಿಎಸ್ ಮೂರನೇ ವರ್ಷದ ಆದರ್ಶ ಪುಜಾರಿ (23) ಎಂದು ಗುರುತಿಸಲಾಗಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ರೌನಕ್ ಚಾವ್ಲಾ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಂಗಳವಾರ ರಾತ್ರಿ ಇಬ್ಬರೂ …
Read More »ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ 2025-26
ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ 2025-26 ಮೊಬೈಲ್ ಗೀಳಿನಿಂದ ಹೊರ ಬಂದು ಕ್ರೀಡೆ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ; ಶಾಸಕ ಆಸೀಫ್ ಸೇಠ್ ಕ್ರಿಯಾಶಕ್ತಿ, ಜ್ಞಾನಶಕ್ತಿ, ಕಲಾ ಶಕ್ತಿಯೇ ಜೀವನಕ್ಕೆ ಸ್ಫೂರ್ತಿ; ಪ್ರೋ.ಸಿ.ಎಂ. ತ್ಯಾಗರಾಜ್ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ 2025-26 ಮೊಬೈಲ್ ಗೀಳಿನಿಂದ ಹೊರ ಬನ್ನಿ ಕ್ರೀಡೆ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ; ಶಾಸಕ ಆಸೀಫ್ ಸೇಠ್ ಕ್ರಿಯಾಶಕ್ತಿ, ಜ್ಞಾನಶಕ್ತಿ, ಕಲಾ ಶಕ್ತಿಯೇ ಜೀವನಕ್ಕೆ ಸ್ಫೂರ್ತಿ; ಪ್ರೋ.ಸಿ.ಎಂ. ತ್ಯಾಗರಾಜ್ ಈಗೀನ ಯುವಪೀಳಿಗೆಯೂ ದಿನದ ಶೇ.75 …
Read More »ಬೆಳಗಾವಿಯ ಶಹಾಪೂರದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿ ದಾಳಿ: ೧೬ ಪ್ರಕರಣ ದಾಖಲು
ಬೆಳಗಾವಿಯ ಶಹಾಪೂರದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿ ದಾಳಿ: ೧೬ ಪ್ರಕರಣ ದಾಖಲು ಬೆಳಗಾವಿಯ ಶಹಾಪೂರದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿ ದಾಳಿ ೧೬ ಪ್ರಕರಣ ದಾಖಲು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಪೊಲೀಸ್ ಇಲಾಖೆಯ ಸಹಯೋಗ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆಯ ಸಹಯೋಗದೊಂದಿಗೆ ಬೆಳಗಾವಿ ನಗರದ ಶಹಾಪೂರದಲ್ಲಿ ಇಂದು ಕೋಟ್ಪಾ-೨೦೦೩ ಕಾಯ್ದೆಯಡಿಯಲ್ಲಿ ದಾಳಿಯನ್ನು ನಡೆಸಲಾಯಿತು. ಜಿಲ್ಲಾ ತಂಬಾಕು ನಿಯಂತ್ರಣಾಧಿಕಾಗಳ ಮಾರ್ಗದರ್ಶನದಡಿಯಲ್ಲಿ …
Read More »ಗ್ರಾಮೀಣ ಜನಜೀವನಕ್ಕೆ ನೀರಿನ ಆಶಾಕಿರಣ.
ಗ್ರಾಮೀಣ ಜನಜೀವನಕ್ಕೆ ನೀರಿನ ಆಶಾಕಿರಣ. ನನ್ನ ಹಾಗೂ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಶ್ರೀ Prakash Hukkeri ಅವರ ನಿರಂತರ ಪ್ರಯತ್ನದ ಫಲವಾಗಿ ಮಂಜೂರಾದ ₹8.40 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಇಂದು ಚಾಲನೆ ನೀಡಲಾಯಿತು. ಈ ಯೋಜನೆಯಿಂದ ನವಲಿಹಾಳ, ಸಂಕನವಾಡಿ, ಕುಠಾಳಿ ಹಾಗೂ ತಪಕರವಾಡಿ ಗ್ರಾಮಗಳ ಸಾವಿರಾರು ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಲಭಿಸಲಿದೆ. ಪ್ರತಿಯೊಂದು …
Read More »ಕಾಗಿನೆಲೆಯಲ್ಲಿ ಪ್ರತಿವರ್ಷ ಕನಕ ಉತ್ಸವ ಆಚರಿಸಲು ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಪ್ರತಿವರ್ಷ ಕನಕ ಉತ್ಸವ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ, ಇನ್ಮುಂದೆ ಪ್ರತಿವರ್ಷ ಕನಕ ಉತ್ಸವ ಆಚರಿಸಬೇಕು. ಉತ್ಸವದಲ್ಲಿ ಜಿಲ್ಲೆಯ ದಾರ್ಶನಿಕರ ಜೀವನಾದರ್ಶಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನಕ ಅಧ್ಯಯನ ಪೀಠ ಸಮನ್ವಯದಿಂದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಪ್ರಾಧಿಕಾರದಲ್ಲಿ …
Read More »ಕನೇರಿ ಸ್ವಾಮೀಜಿ ಪರ ಹಿಂದೂ ಮುಖಂಡರ ಸಭೆ
ಬೆಳಗಾವಿ: ಕನೇರಿಯ ಕಾಡಸಿದ್ದೇಶ್ವರ ಮಠದ ಅದೃಶಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ನಿರ್ಬಂಧ ವಿಧಿಸಿದ್ದನ್ನು ಖಂಡಿಸಿ ಇಂದು ಬೆಳಗಾವಿ ಹೊರ ವಲಯದ ಖಾಸಗಿ ಹೋಟೆಲ್ ನಲ್ಲಿ ಹಿಂದೂ ಮುಖಂಡರು ಮಹತ್ವದ ಸಭೆ ನಡೆಸಿದರು. ರಾಜ್ಯಾಧ್ಯಂತ ಕನೇರಿ ಸ್ವಾಮೀಜಿಗಳ ಪರ ಹೋರಾಟಕ್ಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೇ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಅದನ್ನೇ ದೊಡ್ಡ ಅಸ್ತ್ರವನ್ನಾಗಿ ಬಳಸಲು ಮುಂದಾಗಿರುವುದು ಈ ಸಭೆಯಿಂದ ಸ್ಪಷ್ಟವಾಗಿದೆ. …
Read More »
Laxmi News 24×7