Breaking News

ಬೆಳಗಾವಿಯ ಶಹಾಪೂರದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿ ದಾಳಿ: ೧೬ ಪ್ರಕರಣ ದಾಖಲು

Spread the love

ಬೆಳಗಾವಿಯ ಶಹಾಪೂರದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿ ದಾಳಿ: ೧೬ ಪ್ರಕರಣ ದಾಖಲು
ಬೆಳಗಾವಿಯ ಶಹಾಪೂರದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿ ದಾಳಿ
೧೬ ಪ್ರಕರಣ ದಾಖಲು
ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಪೊಲೀಸ್ ಇಲಾಖೆಯ ಸಹಯೋಗ
ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ
ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆಯ ಸಹಯೋಗದೊಂದಿಗೆ ಬೆಳಗಾವಿ ನಗರದ ಶಹಾಪೂರದಲ್ಲಿ ಇಂದು ಕೋಟ್ಪಾ-೨೦೦೩ ಕಾಯ್ದೆಯಡಿಯಲ್ಲಿ ದಾಳಿಯನ್ನು ನಡೆಸಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣಾಧಿಕಾಗಳ ಮಾರ್ಗದರ್ಶನದಡಿಯಲ್ಲಿ ದಾಳಿಯಲ್ಲಿ ಸಾರ್ವಜನಿಕರಿಗೆ ಕೋಟ್ಪಾ-೨೦೦೩ ಕಾಯ್ದೆ ವಿರುದ್ದವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮತ್ತು ನೇರ ಪರೋಕ್ಷವಾಗಿ ತಂಬಾಕು ಜಾಹಿರಾತು ಪ್ರದರ್ಶನ, ಶೈಕ್ಷಣಿಕ ಆವರಣದ ೧೦೦ ಮೀಟರ ಅಂತರದೋಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ ಮಾಲಿಕರಿಗೆ ಜಾಗೃತಿ ಮೂಡಿಸಿ ಹಾಗೂ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಲಾಯಿತು.
ಕೋಟ್ಪಾ-೨೦೦೩ ಕಾಯ್ದೆ ಅಡಿಯಲ್ಲಿ ಒಟ್ಟು ೧೬ ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲಾಯಿತು ಹಾಗೂ ಸೆಕ್ಷನ್-೪ ನಾಮಫಲಕವನ್ನು ವಿತರಿಸಲಾಯಿತು.
ಹಾಗೂ ಸಾರ್ವಜನಿಕರಲ್ಲಿ ತಂಬಾಕು ಸೇವನೆಯ ದುಷ್ಪರೀಣಾಮದ ಕುರಿತು ಅರಿವು ಮೂಡಿಸಲಾಯಿತು. ಸದರಿ ದಾಳಿಯಲ್ಲಿ ಮಾಹಾಂತೇಶ ಉಳ್ಳಾಗಡ್ಡಿ ವಿಭಾಗೀಯ ಸಂಯೋಜಕರು ರಾಜ್ಯ ತಂಬಾಕು ನಿಯಂತ್ರಣ ಘಟಕ ಬೆಂಗಳೂರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಕವಿತಾ ರಾಜನ್ನವರ ಸಮಾಜ ಕಾರ್ಯಕರ್ತೆ,ತಾಲೂಕಾ ಆರೋಗ್ಯ ನಿರೀಕ್ಷಣಾಧಿಕರಿಗಳಾದ ಸತೀಶ್ ಸಜ್ಜನ ಹಾಗೂ ಮಹಾಂತೇಶ ಜಾಲಾಪೂರ ಪೊಲೀಸ್ ಇಲಾಖೆಯ ರಮೇಶ ಅವದಾರೆ ದಾಳಿಯಲ್ಲಿ ಭಾಗಿಯಾಗಿದ್ಧರು.

 


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ